ಹಾಸನ: ಹೊಳೆನರಸೀಪುರ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳನ್ನು ವಿತರಣೆ ಮಾಡಲಾಗಿದೆ.
https://bcsuddi.com/%e0%b2%95%e0%b2%b0%e0%b2%be%e0%b2%b5%e0%b2%b3%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%b3%e0%b3%86-%e0%b2%b9%e0%b2%be%e0%b2%a8%e0%b2%bf-%e0%b2%b8%e0%b3%8d%e0%b2%a5/
ಪಟ್ಟಣದ ಹೌಸಿಂಗ್ ಬೋರ್ಡಿನ ಕಿಕ್ಕೇರಮ್ಮ ದೇವಸ್ಥಾನದ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ ತಾಯಿ ಕಾರ್ಡ್ ಹೊಂದಿರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಇಂದು ಕೋಳಿ ಮೊಟ್ಟೆಗಳನ್ನು ನೀಡಿದ್ದಾರೆ. ಮನೆಗೆ ಹೋಗಿ ಕೋಳಿ ಮೊಟ್ಟೆಗಳನ್ನು ಒಡೆದಾಗ ಮೊಟ್ಟೆಗಳು ಹಾಳಾಗಿರುವುದು ಬೆಳಕಿಗೆ ಬಂದಿದೆ. ಕೆಟ್ಟಿರುವ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಟೆಂಡರ್ ಪಡೆದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರ ಒತ್ತಾಯಿಸಿದ್ದು, ಸಿಡಿಪಿಒ ಭಾಗ್ಯಮ್ಮ ಅವರಿಗೆ ದೂರು ನೀಡಿದ್ದಾರೆ.