E-PAPER
17 Nov 2026, 12:19:48 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಂತರರಾಷ್ಟಿಯ ಮಹಿಳಾ ದಿನ ನಿಮಿತ್ತ ವಿಶೇಷ ಕಾರ್ಯಕ್ರಮ


ಸಿಹಿ - ಕಹಿ ನೆನಪು ಸಾವಿರ ನೆನಪು’ ಕಾರ್ಯಕ್ರಮ
ಬದುಕಿಗೆ ಬಣ್ಣ ತುಂಬುವವಳೆ ಹೆಣ್ಣು : ನೀಲಗಂಗಾ ಚರಂತಿಮಠ

ಬೆಳಗಾವಿ -೧೦:ಅಜ್ಜಿ, ಅವ್ವ, ಅತ್ತಿಗೆ, ಮಡದಿ, ಮಗಳು ಹೀಗೆ ಹೆಣ್ಣು ಮನುಷ್ಯನ ಜೀವನದಲ್ಲಿ ಕಾಣಿಸಿಕೊಂಡು ಅತ್ಯಂತ ಪ್ರಮುಖ ಸ್ಥಾನ ವಹಿಸುತ್ತಾಳೆ. ಕಣ್ಣಿಗೆ ಕಾಣುವ ದೇವರೇ ತಾಯಿ ಎಂದು ಹೇಳುತ್ತಾರೆ. ಹೀಗೆ ಬದುಕಿಗೆ ಬಣ್ಣ ತುಂಬುವವಳೇ ಹೆಣ್ಣು ಎಂದು ಹಿರಿಯ ಲೇಖಕಿ ಶ್ರೀಮತಿ ನೀಲಗಂಗಾ ಚರಂತಿಮಠ ಅವರು ಇಂದಿಲ್ಲಿ ಹೇಳದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಿನ್ನೆ ದಿ. ೯ ಶನಿವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ವಿಶೇಷ ಕಾರ್ಯಕ್ರಮ ’ಸಿಹಿ - ಕಹಿ ನೆನಪು ಸಾವಿರ ನೆನಪು’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕ್ಕೊಂಡಿದ್ದರು ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಲೇಖಕಿ ಶ್ರೀಮತಿ ಚರಂತಿಮಠ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಶ್ರೀಮತಿ ಚರಂತಿಮಠ, ಅನ್ನಕ್ಕಾಗಿ ದುಡಿಯುವವರಿಗೆ ಮರ್ಯಾದೆ ಕೊಡುತ್ತಿರುವ ಸಮಾಜ ಅನ್ನ ಮಾಡುವವಳಿಗೆ ಗೌರವವಿಲ್ಲ. ಪ್ರತಿಭೇಯಿರುವ ಹೆಣ್ಣು ಮಕ್ಕಳು ಸಾಕಷ್ಟು ಇದ್ದಾರೆ ಆದರೆ ಅವರಿಗೆ ಸಿಗಬೇಕಾದ ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರದಲ್ಲಿ ಎರಡು ಸುತ್ತುಗಳಿದ್ದು ಮೊದಲು ಸುತ್ತಿನಲ್ಲಿ ಕಹಿ ನೆನಪುಗಳನ್ನು ಹಂಚಿಕೊಂಡ ಶ್ರೀಮತಿ ಸುನಿತಾ ದೇಸಾಯಿ, ಶ್ರೀಮತಿ ಕೀರ್ತಿ ಕಾಸರಗೋಡ, ಶ್ರೀಮತಿ ಸುಪ್ರಿಯಾ ದೇಶಪಾಂಡೆ, ಶ್ರೀಮತಿ ದೀಪಿಕಾ ಕುಲಕರ್ಣಿ, ಶ್ರೀಮತಿ ಭಾರತಿ ವಡವಿ ಇವರು ತಂದೆ-ತಾಯಿ, ಅತ್ತೆ-ಮಾವ, ಪತಿ-ಪತ್ನಿ ಹೀಗೆ ಮುಂತಾದವರ ಸಾವಿನ ಘಟನೆಗಳನ್ನೇ ಹಂಚಿಕೊಂಡರು. ಸಾವಿನ ಸುತ್ತಲೇ ಮೊದಲ ಸುತ್ತು ವರೆದಿತ್ತು. ತುಂಬ ಭಾವುಕರಾದ ಎಲ್ಲರ ಕಣ್ಣುಗಳು ತೇವಗೊಂಡವು. ಎರಡನೇ ಸುತ್ತಾದ ಸಿಹಿ ಸಂದರ್ಭಗಳನ್ನು ಹಂಚಿಕೊಳ್ಳುವಾಗ ಮೊದಲಿನ ನೋವಿನ ಪ್ರಸಂಗ ಗಳಿಂದ ಹೊರಬಂದು ವೇದಿಕೆ ಸಹಜ ಸ್ಥಿತಿಗೆ ಮರಳಿತು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಎಸ್ ವಿ ದೀಕ್ಷೀತ ಅವರು ಮಾತನಾಡುತ್ತ ನನ್ನ ಮಡದಿ ವಿಜಯಲಕ್ಷ್ಮಿ ಪ್ರತಿವರ್ಷ ಈ ತಿಂಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳತ್ತ ಬಂದಿದ್ದಳು. ಅವಳ ನಿಧನದ ನಂತರ ನಾನು ಮುಂದೆವರೆಸಿಕೊಂಡು ಬಂದಿದ್ದೇನೆ. ಅವಳು ನನ್ನನ್ನು ಅಗಲಿದ ದಿನ ನನಗೆ ಅತ್ಯಂತ ಕಹಿ ದಿನವಾಗಿದೆ ಎಂತು ಕಣ್ಣದುಂಬಿ ಹೇಳಿದರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ರಾಜೇಶ್ವರಿ ಹಿರೇಮಠ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.