LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

‘ಅಂಬರ್ ಗ್ರೀಸ್’ ಎಂದು ನಂಬಿಸಿ ಮಾರಾಟಕ್ಕೆ ಯತ್ನ-ಮೂವರು ಆರೋಪಿಗಳು ಬೈಂದೂರು ಪೊಲೀಸ್ ವಶ..!

ಉಡುಪಿ : ಕಾಳ ಸಂತೆಯಲ್ಲಿ ಕೋಟ್ಯಾಂತರ ಮೌಲ್ಯ ಹೊಂದಿರುವ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ ) ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಮಾಹಿತಿ ಆಧಾರಿಸಿ ದಾಳಿ ನಡೆಸಿದ ಬೈಂದೂರು ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ನಿರಂಜನ್ (26), ಮಿಲನ್ ಮೋನಿಶ್ ಶೆಟ್ಟಿ(27), ಪೃಥ್ವಿ ಡಾಮ್ಮಿಕ್ (31) ಬಂಧಿತ ಆರೋಪಿಗಳಾಗಿದ್ದು ಮೂವರು ಕೂಡ ಶಿವಮೊಗ್ಗದವರವರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ ಗ್ರೀಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ತಿಮಿಂಗಲದ ಆಂಬರ್‌ ಗ್ರಿಸ್‌ ನಂತಿರುವ ವಸ್ತುವನ್ನು ಸ್ವಾಧೀನಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿದ್ದು ಇವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಕ್ರ 111/2023 ಕಲಂ 420) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ರೀತಿ ಮೇಣದಂತಹ ವಸ್ತುವಿಗೆ ತಿಮಿಂಗಲದ ಅಂಬರ್‌ಗ್ರೆಸ್‌ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಕರಾವಳಿಯಲ್ಲಿ ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಂದ ಇರುವಂತೆಯೂ, ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆಜ.6ರಂದು ಸೌರ ಮಿಷನ್ ಆದಿತ್ಯ L1 ಪಾಯಿಂಟ್‌ಗೆ ಪ್ರವೇಶಿಸಲಿದೆ - ಸೋಮನಾಥ್Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!ಶಾಲಾ ಕಾಲೇಜುಗಳಲ್ಲಿ ಹಿಜಬ್ ನಿಷೇಧ ವಾಪಾಸ್ – ಸಿಎಂ ಸಿದ್ದರಾಮಯ್ಯಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!ದೆಹಲಿ ಮದ್ಯನೀತಿ ಹಗರಣ - ಕೇಜ್ರಿವಾಲ್ ಮೂರನೇ ಬಾರಿ ಇ.ಡಿ ಸಮನ್ಸ್