LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಂಬಾರಿ ಹಸ್ತಾಂತರಿಸುವಲ್ಲಿ ವಿಳಂಬ ಆರೋಪ: ಪತ್ರದ ಮೂಲಕ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಮೈಸೂರು : ನಾಡಹಬ್ಬ ಮೈಸೂರು ದಸರಾಗೆ (Dasara) ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ 10 ದಿನಗಳಿಂದ ವರ್ಣರಂಜಿತವಾಗಿ ನಡೆದ ಮೈಸೂರು ದಸರಾ ಪಂಜಿನ ಕವಾಯತಿನ ಮೂಲಕ ಸಾಂಪ್ರದಾಯಿಕವಾಗಿ ಅಂತ್ಯವಾಗಿದೆ. ಆದರೆ ಈ ಮಧ್ಯೆ ಚಿನ್ನದ ಅಂಬಾರಿ‌ ಕೊಡುವುದು ತಡವಾಯಿತು ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಪತ್ರದ ಮೂಲಕ​ ಸ್ಪಷ್ಟನೆ ನೀಡಿದ್ದಾರೆ.

 

ಇದು ಬೇಜವಾಬ್ದಾರಿ ಹೇಳಿಕೆ ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ಅಂಬಾರಿಯನ್ನು ಮಧ್ಯಾಹ್ನ 2 ಗಂಟೆಯ ನಂತರ 2 ನಿಮಿಷಕ್ಕೆ ಹಸ್ತಾಂತರಿಸಲಾಗಿದೆ. ಈ ವಿಷಯ ನಮಗೂ ಆತಂಕ ಉಂಟು ಮಾಡಿತ್ತು ಎಂದು ಹೇಳಿದ್ದಾರೆ.

ಎಲ್ಲಾ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ನಾವು ಪ್ರಯತ್ನಿಸಿದರೂ ಮತ್ತು ಅಂಬಾರಿ ಸಿದ್ಧವಾಗಿದ್ದರೂ ಸಂಬಂಧಿಸಿದ ಸಿಬ್ಬಂದಿಗಳು ಸರಿಯಾಗಿ ಜನಸಂದಣಿ ನಿರ್ವಹಣೆ ಮಾಡದ ಮತ್ತು ಕೆಲವು ಸರ್ಕಾರಿ ಕಾರುಗಳನ್ನು ಮಾರ್ಗ ಮಧ್ಯೆದಲ್ಲಿ ನಿಲ್ಲಿಸಿದ್ದರಿಂದ ಅಂಬಾರಿ‌ ಸ್ಥಳಾಂತರಿಸಲು ತೊಂದರೆ ಆಯಿತು.

ಅಂಬಾರಿ‌ ಹಸ್ತಾಂತರದ ಸಮಯದ ಬಗ್ಗೆ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಸಂಬಂಧಪಟ್ಟ ಎಲ್ಲರಿಗೂ ಅನಗತ್ಯ ಆತಂಕವನ್ನು ತಪ್ಪಿಸುವ ಉದ್ದೇಶ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ. ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ರ್ಯಾಕ್ಟರ್ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವೇ? ಸಕಲೇಶಪುರದಲ್ಲಿ ಅಚ್ಚರಿ ನೋಟೀಸ್ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಸಿಹಿ ಸುದ್ದಿ, ಗೌರವಧನ 2 ಸಾವಿರ ರೂ ಹೆಚ್ಚಳಮೌಂಟ್ ಎವರೆಸ್ಟ್ ಇಳಿಯುವಾಗ ಭಾರತೀಯ ಪರ್ವತಾರೋಹಿ ಮೃತ್ಯುಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನನಾಳೆಯಿಂದ ಭಾರೀ ಮಳೆ ಮುನ್ಸೂಚನೆ: 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ'ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ' - ಸಿಎಂ'ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ'- ಸಚಿವ ರಾಜನಾಥ್ ಸಿಂಗ್ಕಾಶ್ಮೀರದಲ್ಲಿ 48 ಗಂಟೆಗಳಲ್ಲಿ ಆರು ಪ್ರಮುಖ ಉಗ್ರರ ಹತ್ಯೆ'ಇಂಡಿಯಾ ಮೈತ್ರಿಕೂಟದ ಭವಿಷ್ಯ ಉಜ್ವಲವಾಗಿಲ್ಲ'- ಪಿ ಚಿದಂಬರಂರಸ್ತೆಗೆ ಬಿದ್ದ ಯುವತಿಯ ಮೇಲೆ ಹರಿದ ಕಾರು; ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು