LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಕ್ಟೋಬರ್ 26ರಂದು ನಡೆದ ಗ್ರಾಮಾಡಳಿತ ಅಧಿಕಾರಿ ಹುದ್ದೆಗಳ ಕನ್ನಡ ಪರೀಕ್ಷೆಯ ಕೀ ಉತ್ತರ ಪ್ರಕಟ.!

 

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 1000 ಗ್ರಾಮಾಡಳಿತ ಅಧಿಕಾರಿ ಹುದ್ದೆಗಳು ನೇಮಕಾತಿಗೆ ಅಕ್ಟೋಬರ್ 26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌https://cetonline.karnataka.gov.in/kea/vacrec24 ನಲ್ಲಿ ಕೀ ಉತ್ತರಗಳನ್ನು ನೋಡಬಹುದು. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿ ಮತ್ತು ಜಿಟಿಟಿಸಿ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳ ಆಯ್ಕೆಗೆ ಅ.26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕೀ ಉತ್ತರಗಳಲ್ಲಿ ಏನಾದರೂ ಅಕ್ಷೇಪಣೆಗಳಿದ್ದರೆ ಅ.29ರ ಸಂಜೆ 5.30ರೊಳಗೆ ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆ ವಿವರ, ಪರೀಕ್ಷಾ ದಿನಾಂಕ, ವರ್ಷನ್‌ ಕೋಡ್, ಪ್ರಶ್ನೆಗಳ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ 50 ರೂ. ಸಲ್ಲಿಸಬೇಕು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೆಹಲ್ಗಾಮ್ನಲ್ಲಿ ಘಟನೆ ನಡೆದ ವೇಳೆ ಒಬ್ಬರೂ ಪೊಲೀಸ್ ಇರಲಿಲ್ಲ ಏಕೆ.?ಧರ್ಮಸ್ಥಳ ಪ್ರಕರಣ: ಸಾಮಾಜಿಕ ಹೋರಾಟಗಾರ ಜಯಂತ್ ಮತ್ತೊಂದು ದೂರು.!RSS ವಿರುದ್ಧ ದಾಳಿ ಮಾಡಿದ್ರೆ ಸಿದ್ದರಾಮಯ್ಯ ‘ಸಿಎಂ ಕುರ್ಚಿ’ ಉಳಿಯುವುದು ‘ಗ್ಯಾರಂಟಿ’!ಐದು ತಿಂಗಳ ಗರ್ಭಿಣಿ ಕೈದಿ ಆಸ್ಪತ್ರೆಯಲ್ಲಿ ಪೋಲೀಸರನ್ನು ತಳ್ಳಿ ಪರಾರಿಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು!ಕರ್ನಾಟಕದಲ್ಲಿ ದ್ವಿಭಾಷಾ ಮಾದರಿಯೊಂದಿಗೆ ಹೊಸ ಶಿಕ್ಷಣ ನೀತಿ ಜಾರಿಗೆಮಂಗಳೂರು: ಕಾರಿನಲ್ಲಿ ಬಂದು ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ದರೋಡೆಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರಶ್ರೀಲಂಕಾ ಕ್ರಿಕೆಟಿಗನಿಗೆ 5 ವರ್ಷಗಳ ನಿಷೇಧ'ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡುವೆ ಒಪ್ಪಂದವಿಲ್ಲ'- ಡೊನಾಲ್ಡ್ ಟ್ರಂಪ್‌