LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಥ್ಲಿಟ್ ಮೇಲೆ ಹಲ್ಲೆಗೆ ಯತ್ನಿಸಿದ ಕೋಚ್ ಪತ್ನಿ; ವೀಡಿಯೋ ವೈರಲ್

ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರ ವೀಡಿಯೋ ವಾಟ್ಸಪ್‌ನಲ್ಲಿ ಹಂಚಿಕೊಂಡ ಕುರಿತಾಗಿ ಕೋಚ್ ಪತ್ನಿ ಮತ್ತು ಅಥ್ಲಿಟ್ ಮಧ್ಯೆ ವಾಗ್ವಾದ ನಡೆದು ಕೋಚ್ ಪತ್ನಿ ಅಥ್ಲಿಟ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ಕಂಠೀರವ ಮೈದಾನದಲ್ಲಿ ನಡೆದಿದೆ. ಹಲ್ಲೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬಿಂದುರಾಣಿ ಎಂಬ ಅಥ್ಲಿಟ್ ಬೆಳಗ್ಗೆ ಪ್ರಾಕ್ಟಿಸ್‌ಗೆಂದು ಹೋದ ವೇಳೆ ಕೋಚ್ ಪತ್ನಿ ಶ್ವೇತಾ ಆಕೆಯನ್ನು ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಂದುರಾಣಿ, ಖಾಸಗಿ ಕಾರ್ಯಕ್ರಮವೊಂದರ ವೀಡಿಯೋವೊಂದನ್ನು ಕೋಚ್‌ಗಳ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ. ಆ ವಿಡಿಯೋದಲ್ಲಿ ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಯತೀಶ್ ಎಂಬವರ ಪತ್ನಿ ಹಲ್ಲೆಗೆ ಯತ್ನಿಸಿದ್ದಾರೆ ಎಂದರು. ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಗ್ರೂಪ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತು ಗ್ರೂಪ್‌ನಲ್ಲಿ ಸ್ಪಷ್ಟನೆ ಕೊಡದೆ ನೇರವಾಗಿ ಕಾಲ್ ಮಾಡಿದೆ.

https://bcsuddi.com/%e0%b2%aa%e0%b3%81%e0%b2%a4%e0%b3%8d%e0%b2%a4%e0%b3%82%e0%b2%b0%e0%b3%81-%e0%b2%ae%e0%b2%97%e0%b2%a8-%e0%b2%ae%e0%b2%a6%e0%b2%b0%e0%b2%82%e0%b2%97%e0%b2%bf-%e0%b2%b6%e0%b2%be%e0%b2%b8%e0%b3%8d/

ಕೆಲವೇ ನಿಮಿಷದಲ್ಲಿ ಕಾಲ್ ಕಟ್ ಆಯಿತು. ನಾನು ಅಲ್ಲಿಗೆ ಸುಮ್ಮನಾದೆ. ಆ ಘಟನೆ ಆದ ಬಳಿಕ ಇಂದು ಬೆಳಗ್ಗೆ ಕೋಚ್ ಯತೀಶ್ ಅವರ ಪತ್ನಿ ಬಂದು ಗಲಾಟೆ ಮಾಡಿದ್ದಾರೆ. ನಾನು ವಿಷಯ ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆ. ಘಟನೆಯ ಸಂಬಂಧ ಅಥ್ಲೆಟಿಕ್ ಅಸೋಸಿಯೇಷನ್‌ಗೆ ದೂರು ನೀಡುತ್ತೇನೆ ಎಂದಿದ್ದಾರೆ. ಹಲ್ಲೆ ಯತ್ನಿಸಿದ್ದಾರೆ ಎನ್ನಲಾದ ಶ್ವೇತಾ ಅವರು, ಖೇಲ್‌ರತ್ನ ಪ್ರಶಸ್ತಿ ಸಂಬಂಧ ಪೋಸ್ಟ್ ಮಾಡಿಕೊಂಡಿದ್ದಕ್ಕೆ ನನ್ನ ಗಂಡ ಯತೀಶ್ ಬಿಂದುಗೆ ಗ್ರೂಪ್‌ನಲ್ಲಿಯೇ ಪ್ರಶ್ನೆ ಮಾಡಿದ್ದರು. ಕೋಚ್‌ಗ್ರೂಪ್‌ನಲ್ಲಿ ಉತ್ತರ ಕೊಡಬೇಕಿದ್ದ ಬಿಂದುರಾಣಿ, ರಾತ್ರಿ 10 ಗಂಟೆಗೆ ಆಕೆಯ ಗಂಡನ ಕಡೆಯಿಂದ ನನ್ನ ಪತಿ ಯತೀಶ್‌ಗೆ ಕಾಲ್ ಮಾಡಿಸಿ ಬೆದರಿಕೆ ಹಾಕಿಸಿದ್ದಾಳೆ. ನನ್ನ ಪತಿ ಕಾಲ್ ಕಟ್ ಮಾಡಿದ ನಂತರ ಕಾಲು ಗಂಟೆಯಲ್ಲಿ ಮತ್ತೊಮ್ಮೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಕಾಲ್ ರಿಸೀವ್ ಮಾಡಿ ಮಾತನಾಡುವಾಗ, ನನಗೆ ದೊಡ್ಡವರು ಗೊತ್ತು. ನಿಮ್ಮನ್ನು ಸ್ಟೇಡಿಯಂನಿಂದಲೇ ಹೊರಹಾಕಿಸುತ್ತೇನೆ ಎಂದು ಹೇಳಿದ್ದಾಳೆ. ಆ ಕಾರಣಕ್ಕಾಗಿ ಶನಿವಾರವೇ ಹೋಗಿದ್ದೆ. ಆದರೆ ಸಿಗಲಿಲ್ಲ. ಹಾಗಾಗಿ ಇವತ್ತು ಹೋಗಿ ಮಾತನಾಡಿದೆ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದ ಹೆಚ್ ಡಿ ಕೆ ಮಾತು ತಪ್ಪಿದ್ರಾ ?ಮನೆಯಲ್ಲಿರುವ ಪಾಲಕ್ ನಲ್ಲಿಯೇ ಮನೆ ಮದ್ದು..!5ನೇ ಗ್ಯಾರೆಂಟಿ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ