LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಅಪ್ಪ ನಾನು IAS​ ಅಧಿಕಾರಿ ಆಗ್ತೀನಿ' - ಕನಸು ಕಟ್ಟಿಕೊಂಡು ದೆಹಲಿಗೆ ಹೋದವಳು ಮಳೆ ನೀರಿಗೆ ಬಲಿಯಾದಳು.!





ಹೈದರಾಬಾದ್​: ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ಅದರಲ್ಲೂ ಶನಿವಾರ ಸುರಿದ ಭಾರಿ ಮಳೆಗೆ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವುಸ್ ಐಎಎಸ್ ಸ್ಟಡಿ ಸರ್ಕಲ್ ಕೇಂದ್ರದ ಬೇಸ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ, ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.








 

ಭಾನುವಾರ ಮುಂಜಾನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಶ್ರೀರಾಂಪುರ ಮೂಲದ ತಾನಿಯಾ ಸೋನಿ, ಉತ್ತರ ಪ್ರದೇಶದ ಶ್ರೇಯಾ ಯಾದವ್ (22) ಮತ್ತು ಕೇರಳದ ನೆವಿನ್ ದಲಿವಾನ್ (29) ಮೃತದೇಹಗಳನ್ನು ಹೊರತೆಗೆಯಲಾಯಿತು. ಈ ದುರಂತದಲ್ಲಿ ಮೃತಪಟ್ಟ ತಾನಿಯಾ ಸೋನಿ ಅವರ ತಂದೆ ವಿಜಯಕುಮಾರ್ ಸಿಂಗರೇಣಿ ಬಿಹಾರದ ಔರಂಗಾಬಾದ್ ಮೂಲದರು. ಅವರು ಶ್ರೀರಾಂಪುರ ವಿಭಾಗದಲ್ಲಿ ಎಸ್​ಆರ್​ಪಿ-1 ಗಣಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಿಸಿಸಿ ಟೌನ್‌ಶಿಪ್ ಬಿ-2 ಕಂಪನಿ ಕ್ವಾರ್ಟರ್, ನಸ್ಪುರ್‌ನಲ್ಲಿ ವಾಸಿಸುತ್ತಿದ್ದಾರೆ. ವಿಜಯಕುಮಾರ್ ಮತ್ತು ಬಬಿತಾ ದಂಪತಿಗೆ ಮೂವರು ಮಕ್ಕಳಿದ್ದು, ಸೋನಿ ಹಿರಿಯ ಮಗಳು.

ಎರಡನೇ ಮಗಳು ಪಾಲ್ಖ್ ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಟೆಕ್ ಓದುತ್ತಿದ್ದಾಳೆ. ಪುತ್ರ ಆದಿತ್ಯಕುಮಾರ್ ಹೈದರಾಬಾದ್​ನಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಸೋನಿ ಕಳೆದ ವರ್ಷ ದೆಹಲಿಯ ಮಹಾರಾಜ ಅಗ್ರಸೇನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಕಲೆಕ್ಟರ್ ಆಗುವ ಆಸೆಯನ್ನು ತಂದೆಗೆ ತಿಳಿಸಿದ್ದಳು. ತಂದೆಯ ಆಶಯವೂ ಅದೇ ಆಗಿದ್ದರಿಂದ ಮೂರು ತಿಂಗಳ ಹಿಂದೆ ರಾವ್ ಐಎಎಸ್ ಸ್ಟಡಿ ಸರ್ಕಲ್​ ಕೋಚಿಂಗ್ ಸೆಂಟರ್​ಗೆ ಸೇರಿಸಿದ್ದರು. ಆದರೆ ವಿಧಿಯ ಆಟಕ್ಕೆ ತಾನಿಯಾ ಸೋನಿ ಬಲಿಯಾಗಿದ್ದಾರೆ. ಈ ಘಟನೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌- ಬೆಲೆಯಲ್ಲಿ ಇಳಿಕೆಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆಗೆ ದಿನಾಂಕ ಫಿಕ್ಸ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ?ಮಹಿಳಾ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶಪ್ರಧಾನಿ ಮೋದಿ ವಿಮಾನದ ಮೇಲೆ ದಾಳಿ ಮಾಡುವುದಾಗಿ ಉಗ್ರರ ಎಚ್ಚರಿಕೆ..!ರೇಷನ್‌ ಕಾರ್ಡ್‌ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೊಮ್ಮೆ ಅವಕಾಶಪತ್ನಿ ಅನುಮತಿ ಇಲ್ಲದೆ, ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ: ಹೈಕೋರ್ಟ್ಮೈಸೂರು ಗಲಭೆ ಹಿಂದೆ RSS ಕೈವಾಡ: ಲಕ್ಷ್ಮಣ್ ಆರೋಪಬೈಕ್ ಚಲಾಯಿಸಿದ ಅಪ್ರಾಪ್ತನ ಪೋಷಕರಿಗೆ 25 ಸಾವಿರ ರೂಪಾಯಿ ದಂಡಬಿಸಿಲಿನ ತಾಪಕ್ಕೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರಕ್ರಿಕೆಟ್‌ನಲ್ಲಿ ಬಳಸಲಾಗುವ ಕ್ಯಾಮೆರಾಗಳ ಬೆಲೆ ಎಷ್ಟು ಗೊತ್ತಾ?