LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ - ಬಿಡುಗಡೆ

ಜಾರ್ಜಿಯಾ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವನೆಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ಜಾಮೀನು ಪಡೆದು ಟ್ರಂಪ್ ಹೊರಬಂದಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್​ರನ್ನು​​​​​​ ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದರು. ಆದರೆ $200,000 ಬಾಂಡ್‌ನ ಇರಿಸಿ 20 ನಿಮಿಷಗಳ ಬಳಿಕ ಜಾಮೀನು ಪಡೆದು ಟ್ರಂಪ್ ಹೊರಬಂದಿದ್ದಾರೆ.

ಜೈಲು ದಾಖಲೆಗಳ ಪ್ರಕಾರ, ಟ್ರಂಪ್ ಅವರನ್ನು ಬಂಧಿಸಲಾಯಿತು ಮತ್ತು ಕೈದಿ ಸಂಖ್ಯೆ P01135809 ಎಂದು ದಾಖಲಿಸಲಾಗಿದೆ

ಬಿಡುಗಡೆ ಬಳಿಕ ನ್ಯೂಜೆರ್ಸಿಗೆ ಹಿಂದಿರುಗುವ ವಿಮಾನಕ್ಕಾಗಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

ಸೂಟ್ ಮತ್ತು ಕೆಂಪು ಟೈ ಧರಿಸಿ ಕೋಪದಿಂದ ಕ್ಯಾಮರಾಗೆ ಪೋಸು ಕೊಟ್ಟ ಟ್ರಂಪ್ ಅವರ ಬಂಧನ ಫೋಟೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಸ್ವತಃ ಟ್ರಂಪ್ ಅವರೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾರ್ಮಿಕನ ಕಾಲಿಗೆ ಸರಪಳಿ ಹಾಕಿ ಜೀತಕ್ಕಿಟ್ಟ ಮಾಲೀಕ- ಕಾರ್ಮಿಕನ ರಕ್ಷಣೆಪೈಪ್ ನಲ್ಲಿ ಅಮೋನಿಯಾ ಗ್ಯಾಸ್‌ ಸೋರಿಕೆ- ಆರು ಮಂದಿ ಅಸ್ವಸ್ಥಜ.1 ಇಸ್ರೋದಿಂದ ಬ್ಲಾಕ್ ಹೋಲ್ ಅಧ್ಯಯನಕ್ಕೆ ಹೊಸ ಉಪಗ್ರಹ ಉಡಾವಣೆಸಿಎಂ ಗೆ ಅವಹೇಳನ ಮಾಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲು..!ಹೊಟೇಲ್ ವೇಟರ್ ಆದ ಉರ್ಫಿ ಜಾವೇದ್.!ವಿಜ್ಞಾನ ಕೇಂದ್ರಗಳು, ತಾರಾಲಯಗಳಿಗೆ ಏಕರೂಪದ ವಿನ್ಯಾಸ ರಚನೆ: ಸಚಿವ ಭೋಸರಾಜುಬಹಳ ದಿನಗಳಿಂದ ಕಾಯುತ್ತಿದ್ದರು ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ- ಓರ್ವ ಸಾವು, ಹಲವು ಮಂದಿಗೆ ಗಾಯದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಸ್ಫೋಟಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆ