LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಲಿಗಢ ಮುಸ್ಲಿಂ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ : ಸುಪ್ರೀಂಕೋರ್ಟ್‌ನಿಂದ ಮಹತ್ವದ ನಿರ್ಧಾರ..!

ಹೊಸದಿಲ್ಲಿ : ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಶುಕ್ರವಾರ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಹೌದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ "ಅಲ್ಪಸಂಖ್ಯಾತ ಸ್ಥಾನಮಾನ'ವನ್ನು ತೆಗೆದುಹಾಕಿದ್ದ 1967ರ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಶುಕ್ರವಾರ ರದ್ದುಗೊಳಿಸಿದೆ.

ಏಳು ಸದಸ್ಯರ ನ್ಯಾಯಮೂರ್ತಿಗಳಲ್ಲಿ 4:3ರ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಮಾನ್ಯತೆಯನ್ನು ವಿವಿಗೆ ಮರಳಿ ಸ್ಥಾಪಿಸಬೇಕೆಂದರೆ ಮೂವರು ಸದಸ್ಯರ ಸಾಮಾನ್ಯ ನ್ಯಾಯಪೀಠ ನಿರ್ಧರಿಸಬಹುದಾಗಿದೆ ಎಂದು ಅದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅಲ್ಪಸಂಖ್ಯಾತ ಮಾನ್ಯತೆಯನ್ನು ಎತ್ತಿಹಿಡಿಯುವ ಪರವಾಗಿ ಬಹುಮತದ ತೀರ್ಪು ನೀಡಿದೆ. ಶುಕ್ರವಾರ ಸಿಜೆಐ ಹುದ್ದೆಯಲ್ಲಿ ಚಂದ್ರಚೂಡ್ ಅವರ ಕೊನೆಯ ದಿನವಾಗಿದೆ. ಕಾನೂನಿಗೆ ಒಳಪಟ್ಟ ಸಂಸ್ಥೆಯೊಂದು ಅಲ್ಪಸಂಖ್ಯಾತ ಮಾನ್ಯತೆಯನ್ನು ಪ್ರತಿಪಾದಿಸುವಂತೆ ಇಲ್ಲ ಎಂಬ ಸುಮಾರು ನಾಲ್ಕೂವರೆ ದಶಕಗಳ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಆದರೂ ಇದನ್ನು ಮರಳಿ ಸ್ಥಾಪಿಸಬೇಕು ಎಂದರೆ ಅಲಿಗಡ ಮುಸ್ಲಿಂ ವಿವಿಯು ಸಾಮಾನ್ಯ ಪೀಠದ ಮುಂದೆ ಹೋಗಬೇಕಿದೆ. ನಿರ್ಗಮಿತ ಸಿಜೆಐ ಡಿವೈ ಚಂದ್ರಚೂಡ್, ಮುಂದಿನ ಸಿಜೆಐ ಸಂಜೀವ್ ಖನ್ನಾ, ಜೆಬಿ ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಹಿಂದಿನ ತೀರ್ಪನ್ನು ರದ್ದುಗೊಳಿಸುವ ಪರವಾಗಿ ತೀರ್ಪು ನೀಡಿದರೆ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದಿಪಾಂಕರ್ ದತ್ತಾ ಮತ್ತು ಎಸ್‌ಸಿ ಶರ್ಮಾ ಅವರು ಇದಕ್ಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಏಳು ಸದಸ್ಯರಲ್ಲಿ 4:3ರ ಬಹುಮತದ ಕಾರಣ, ಹಿಂದಿನ ತೀರ್ಪು ರದ್ದುಗೊಳಿಸುವ ನಿರ್ಧಾರ ಜಾರಿಯಾಗಲಿದೆ. ನ್ಯಾಯಪೀಠವು ಫೆಬ್ರವರಿ 1ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. 1967ರಲ್ಲಿ ಅಜೀಜ್ ಬಾಷಾ Vs ಕೇಂದ್ರ ಸರ್ಕಾರದ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಂಸ್ಥೆಯಾಗಿರುವ ಕಾರಣ ಅಲಿಗಡ ಮುಸ್ಲಿಂ ವಿವಿಯು ಅಲ್ಪಸಂಖ್ಯಾತ ಸ್ಥಾನಮಾನ ಪ್ರತಿಪಾದಿಸುವಂತೆ ಇಲ್ಲ ಎಂದು ಹೇಳಿತ್ತು. ಮುಸ್ಲಿಮರ ಪ್ರಯತ್ನದ ಕಾರಣದಿಂದ ಎಎಂಯು ಸ್ಥಾಪನೆಯಾದರೂ, ಅದು ಅಲ್ಪಸಂಖ್ಯಾತರಿಂದ ಸ್ಥಾಪನೆಯಾಗಿದ್ದಲ್ಲ ಅಥವಾ ಅವರಿಂದ ಆಡಳಿತ ನಡೆಯುತ್ತಿಲ್ಲ. ವಿವಿಯ ಆಡಳಿತ ಕಾನೂನು ಅದನ್ನು ಅಲ್ಪಸಂಖ್ಯಾತವಲ್ಲದ ಸಂಸ್ಥೆಯನ್ನಾಗಿಸಿದೆ. ಅಲ್ಪಸಂಖ್ಯಾತ ಸಂಸ್ಥೆಯಾಗಲು ಅದನ್ನು ಅಲ್ಪಸಂಖ್ಯಾತರು ಮಾತ್ರವೇ ಸ್ಥಾಪಿಸಬೇಕು ಹಾಗೂ ಅಲ್ಪಸಂಖ್ಯಾತ ಸದಸ್ಯರೇ ಅದರ ಆಡಳಿತ ನಡೆಸುವುದು ಅಗತ್ಯ. ಅಲ್ಪಸಂಖ್ಯಾತ ಸಂಸ್ಥೆಗಳು ಜಾತ್ಯತೀತ ಶಿಕ್ಷಣಕ್ಕೆ ಒತ್ತು ನೀಡಲು ಬಯಸಬಹುದಾಗಿದೆ. ಅದಕ್ಕೆ ಅಲ್ಪಸಂಖ್ಯಾತ ಸದಸ್ಯರು ಆಡಳಿತದಲ್ಲಿ ಇರುವ ಅಗತ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು ಈಗ ತಿರಸ್ಕರಿಸಿರುವ ಸಾಂವಿಧಾನಿಕ ಪೀಠ, ಸಂಸ್ಥೆಯೊಂದನ್ನು ನಿಯಂತ್ರಿಸಲು ಅಥವಾ ಆಡಳಿತ ನಡೆಸುವ ಸಲುವಾಗಿ ಸರ್ಕಾರ ಕಾನೂನು ತಂದ ಮಾತ್ರಕ್ಕೆ ಅದು ತನ್ನ ಅಲ್ಪಸಂಖ್ಯಾತ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐದು ತಿಂಗಳ ಗರ್ಭಿಣಿ ಕೈದಿ ಆಸ್ಪತ್ರೆಯಲ್ಲಿ ಪೋಲೀಸರನ್ನು ತಳ್ಳಿ ಪರಾರಿಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು!ಕರ್ನಾಟಕದಲ್ಲಿ ದ್ವಿಭಾಷಾ ಮಾದರಿಯೊಂದಿಗೆ ಹೊಸ ಶಿಕ್ಷಣ ನೀತಿ ಜಾರಿಗೆಮಂಗಳೂರು: ಕಾರಿನಲ್ಲಿ ಬಂದು ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ದರೋಡೆಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರಶ್ರೀಲಂಕಾ ಕ್ರಿಕೆಟಿಗನಿಗೆ 5 ವರ್ಷಗಳ ನಿಷೇಧ'ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡುವೆ ಒಪ್ಪಂದವಿಲ್ಲ'- ಡೊನಾಲ್ಡ್ ಟ್ರಂಪ್‌ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಿ 18.5 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆಧರ್ಮಸ್ಥಳ “ಬುರುಡೆ” ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಮಾಹಿತಿ ಸಿಗದಿದ್ದರೆ ಅನಾಮಿಕನ ವಿರುದ್ದ ಕ್ರಮ?ಕೈ ​ಶಾಸಕ ಸತೀಶ್​ ಸೈಲ್​ ಮನೆಯಲ್ಲಿ ಇಡಿ ಶೋಧ- 1.41 ಕೋಟಿ ರೂ., 6.75 ಕೆಜಿ ಚಿನ್ನ ವಶಕ್ಕೆ