LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಲೆಮಾರಿ ಜನಾಂಗಕ್ಕೆ ಸೂರು ಕಲ್ಪಿಸಿ : ಕೆ ವೀರೇಶ್.!

ದಾವಣಗೆರೆ: ಅಲೆಮಾರಿ ಜನಾಂಗದವರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ವಕೀಲರಾದ ಕೆ. ವೀರೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಹೊನ್ನಾಳಿ ನಗರ ಹಾಗೂ ದೇವನಾಯಕನಹಳ್ಳಿಯಲ್ಲಿ ಸುಮಾರು 40 ವರ್ಷಗಳಿಂದ ಟೆಂಟು, ಗುಡಾರ,ಗುಡಿಸಲುಗಳನ್ನು ನಿರ್ಮಿಸಿಕೊಂಡು ಸುಮಾರು 60ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಅಲೆಮಾರಿ ಸಿಳ್ಳೇಕ್ಯಾತಸ್‌, ಹಂಡಿಜೋಗಿ/ಜೋಗಿ ಹಾಗೂ ಬುಡ್ಗಜಂಗಮ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಇವರಿಗೆ ಸ್ವಂತ ನಿವೇಶನ ಕೂಡ ಇಲ್ಲಾ ಈ ಸಮುದಾಯದ ಹಿಂದುಳಿದಿದ್ದು ನಿವೇಶನ ಮತ್ತು ವಸತಿ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು. ಇರಲು ಸ್ವಂತ ಜಾಗವಿಲ್ಲದೆ  ಅತ್ಯಂತ ಸಂಕಷ್ಟದಲ್ಲಿ ಬದುಕಿರುತ್ತಿದ್ದಾರೆ. 15/20 ಅಡಿಯ ಜಾಗದ ಮನೆಯಲ್ಲಿ ಎರಡು- ಮೂರು ಕುಟುಂಬದ ಒಟ್ಟು 10-15 ಜನ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇವಾಸಿಸುತ್ತಿದ್ದಾರೆ.

ಇಂತಹ ಅಲೆಮಾರಿ ಕುಟುಂಬಗಳಿಗೆ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಬೇಚಾರಕ ಗ್ರಾಮದಲ್ಲಿ ನಿರ್ಮಿಸುತ್ತಿರುವ ಆಶ್ರಯ ಯೋಜನೆಯಡಿ ನಿವೇಶನಹಂಚಿಕೆಯಲ್ಲಿ ಈ ಪ.ಜಾತಿಯ ಅಲೆಮಾರಿಗಳಿಗೆ ಮೊದಲ ಆದ್ಯತೆಯ ಮೇಲೆ ನಿವೇಶನ ಕಾಯ್ದಿರಿಸಿಕುಟುಂಬಗಳಿಗೆ ಶಾಶ್ವತ ರಹಿತ ಅಲೆಮಾರಿ ಹಂಚಿಕೆ ಮಾಡಿ ವಸತಿ ದೊರಕಿಸಿಕೊಡಬೇಕೆಂದು ಒತ್ತಾಯ ಮಾಡಲಾಯಿತು.ಸಂದರ್ಭದಲ್ಲಿಕುಮಾರ್, ವೀರೇಶವೇಶಗಾರ್, ರಮೇಶ ಚನ್ನದಾಸ, ಮಣಿಕಂಠ, ಸುರೇಶ ದೊಂಬರ ನಲ್ಲೂರು, ರಾಜಪ್ಪ ಸಿಳೇಕ್ಯಾತಸ್,ಮುಂತಾದವರು ಉಪಸ್ಥಿತರಿದ್ದರು

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 Delhi Election 2025 : ಮನೀಶ್ ಸಿಸೋಡಿಯಾಗೆ ಸೋಲು Delhi Election 2025 : 3182 ಮತಗಳಿಂದ ಅರವಿಂದ ಕೇಜ್ರಿವಾಲ್ ಗೆ ಹೀನಾಯ ಸೋಲುದೆಹಲಿ ಚುನಾವಣಾ ಫಲಿತಾಂಶ : ಶಿಷ್ಯನಿಗೆ ಕ್ಲಾಸ್‌ ತಗೊಂಡ ಅಣ್ಣಾ ಹಜಾರೆ …!ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ: ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶನವದೆಹಲಿ ಕ್ಷೇತ್ರದಲ್ಲಿ ಹಾವು - ಏಣಿ ಆಟ ಶೂನ್ಯಕ್ಕೆ ಕುಸಿದ ಕಾಂಗ್ರೆಸ್ ಬಿಜೆಪಿಗೆ ಮುನ್ನಡೆ ಎಎಪಿಗೆ ಹಿನ್ನಡೆDelhi Election 2025 : ಮುನ್ನಡೆಯಲ್ಲಿರುವ AAP ನಾಯಕರ ಪಟ್ಟಿDelhi Election 2025 : ಆರನೇ ಸುತ್ತಿನ ಎಣಿಕೆ 225 ಮತಗಳಿಂದ ಹಿಂದುಳಿದ ಅರವಿಂದ್ ಕೇಜ್ರಿವಾಲ್ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮೂಲಭೂತ ಹಕ್ಕಿನ ವಿರುದ್ಧವಲ್ಲ : ರಾಜ್ಯ ಸರ್ಕಾರಉದ್ಯಮಿಯಿಂದ 4 ಲಕ್ಷ ರೂ. ಸುಲಿಗೆ: ಇಬ್ಬರು CCB ಅಧಿಕಾರಿಗಳು ಸೇರಿ ಮೂವರ ಬಂಧನ