LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಸಮರ್ಥ ಗೃಹ ಸಚಿವರನ್ನು ವಜಾ ಮಾಡಿ ಎಂದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು: ರಾಜ್ಯದಲ್ಲಿ ಬೇಹುಗಾರಿಕೆ ವಿಫಲತೆಯಾಗಿದೆ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರು. ರಾಜ್ಯದ ಗೃಹ ಸಚಿವರು ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಅಥವಾ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕೆಂದು ಮಾಜಿ ಪೊಲೀಸ್ ಕಮಿಷನರ್ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರವು ರಾಷ್ಟ್ರೀಯ ಪಕ್ಷ ಬಿಜೆಪಿಯ ಕಚೇರಿಗೆ ಭದ್ರತೆ ಒದಗಿಸಿಕೊಡುವುದರಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಇದು ಬೇಹುಗಾರಿಕೆಯ ಅತ್ಯಂತ ದೊಡ್ಡ ವೈಫಲ್ಯ. ಬಿಜೆಪಿ ರಾಜ್ಯ ಕಚೇರಿಯನ್ನು ಭಯೋತ್ಪಾದಕರು ಗುರಿಯಾಗಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ರಾಮೇಶ್ವರಂ ಕೆಫೆಗೆ ಹೋಗಿ ಬಾಂಬ್ ಸ್ಫೋಟ ನಡೆಸಿದ್ದು ಎನ್‍ಐಎ ತನಿಖೆ ವೇಳೆ ಗೊತ್ತಾಗಿದೆ ಎಂದು ವಿವರಿಸಿದರು. ಇದೇ ವಿಚಾರವನ್ನು ಅದು ಕೋರ್ಟ್‌ಗೆ ತಿಳಿಸಿದೆ ಎಂದು ತಿಳಿಸಿದರು. ಬೆಂಗಳೂರು ನಗರ ಬೇಹುಗಾರಿಕಾ ದಳ, ನಗರ ಭಯೋತ್ಪಾದನಾ ನಿಗ್ರಹ ದಳ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಚಿಸಿದ ಆಂತರಿಕ ಭದ್ರತಾ ಇಲಾಖೆಗಳು ವಿಫಲವಾಗಿವೆ. ಈ ಸರಕಾರ ಅಧಿಕಾರಕ್ಕೆ ಬಂದು 16 ತಿಂಗಳಾದರೂ ಒಂದೇ ಒಂದು ಸಾರಿ ಈ ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಿಲ್ಲ. ಇದೇ ಕಾರಣಕ್ಕೆ ಎನ್‍ಐಎ, ಕರ್ನಾಟಕದಲ್ಲಿ ಮಾಹಿತಿ ಸಂಗ್ರಹ ಮಾಡುವುದಲ್ಲದೆ, ದಾಳಿ, ಬಂಧನ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುತ್ತಿದೆ ಎಂದರು. ಹಿಂದೆ ಜಗದೀಶ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರಕಾರ ಇರುವಾಗ ಭಯೋತ್ಪಾದನೆ ಚಟುವಟಿಕೆ ಪತ್ತೆಗೆ ಪ್ರತ್ಯೇಕ ವಿಭಾಗ ರೂಪಿಸಿದ್ದರು. ಆದರೆ, ವಸೂಲಿ ವಿಚಾರ ಹೊರಬರುವ ಭಯದಿಂದ ಈಗಿನ ಸರಕಾರವು ಆ ವಿಭಾಗ ಸಮರ್ಪಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಭ್ರಷ್ಟಾಚಾರ, ಹಣದ ಪ್ರಭಾವದಿಂದ ಪೊಲೀಸ್ ಇಲಾಖೆಯು ಸರಿಯಾಗಿ ಕೆಲಸ ಮಾಡದಂತಾಗಿದೆ. ಇಲಾಖೆ ನಿಷ್ಕ್ರಿಯವಾಗಿದ್ದು, ರಾಜ್ಯದ ಜನರ ಸುರಕ್ಷತೆ ಜೊತೆ ಆಟವಾಡುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು. ಬೆಂಗಳೂರು, ದೇಶ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಹಣಕಾಸು ಕೇಂದ್ರವೆನಿಸಿದೆ. ಈ ನಗರಕ್ಕೆ ಸಿಗಬೇಕಾದಷ್ಟು ರಕ್ಷಣೆ ಸಿಗುತ್ತಿಲ್ಲ. ಕಡಿಮೆ ಸಂಖ್ಯೆಯ ಪೊಲೀಸ್ ವ್ಯವಸ್ಥೆಯಿಂದ ತನಿಖೆ ಕಾರ್ಯ ನಡೆದಿದೆ. ಸರಕಾರವು ತಾನು ಕಾನೂನು ಮತ್ತು ಸುವ್ಯವಸ್ಥೆಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 16 ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೆ ಒಬ್ಬ ಎಸ್‍ಐ, ಒಬ್ಬ ಕಾನ್‍ಸ್ಟೆಬಲ್ ಕೂಡ ಸೇರಿಸಿಲ್ಲ. ಮೂಲಸೌಕರ್ಯ ಕೊಟ್ಟಿಲ್ಲ ಎಂದು ದೂರಿದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾಕುಂಭಮೇಳ ಮಾಘೀ ಪೂರ್ಣಿಮೆಗೆ 'ವಾಹನ ರಹಿತ ವಲಯ' ವಿಶೇಷ ಸಂಚಾರ ಯೋಜನೆದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಕೃಷಿಗೂ ಬಂತು AI ತಂತ್ರಜ್ಞಾನ- ಬೆಳೆ ನಿರ್ವಹಣೆಗೆ ಬಗ್ಗೆ ನೀಡಲಿದೆ ಮಾಹಿತಿಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರ ಬಂಧನಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್: ಠಾಣೆಗೆ ಕಲ್ಲು ತೂರಾಟ, ಲಾಠಿಚಾರ್ಜ್ – ಓರ್ವನ ಬಂಧನಮೊಡವೆ ಕಾಟ ನಿವಾರಿಸಲು ಬಾಳೆಹಣ್ಣು ಸಿಪ್ಪೆಯನ್ನು ಹೀಗೆ ಬಳಸಿ..!ಆಧಾರ್‌ ಇದ್ರೆ ಸಾಕು 50,000 ರೂ.ಗಳವರೆಗೆ ತ್ವರಿತ ಸಾಲರಾಜ್ಯದಲ್ಲಿ ಭರ್ಜರಿ ಉದ್ಯೋಗ: 40,000 ರೂ. ವೇತನದೆಹಲಿ : ಚುನಾವಣೆಯಲ್ಲಿ ಸೋಲು, INDIA blocನಲ್ಲಿ ಬಿರುಕು ವದಂತಿ…!ಏರೋ ಇಂಡಿಯಾ 2025: ಪೊಲೀಸರಿಗಿನ್ನು ಆಹಾರ ಸರಬರಾಜು ಹೊಣೆ ಇಸ್ಕಾನ್‌ ಗೆ…!