ಆಂಧ್ರಪ್ರದೇಶ: ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡ ಕಾಲುವೆಗೆ ಉರುಳಿದ ಪರಿಣಾಮ ಏಳು ಜನ ಸಾವನ್ನಪ್ಪಿರುವ ಘಟನೆ ಅಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ಸಂಭವಿಸಿದೆ.
ಬಾಡಿಗೆ ಬಸ್ ನಲ್ಲಿ ಕುಟುಂಬವೊಂದು ಮದುವೆ ಆರತಕ್ಷತೆಗಾಗಿ ತೆರಳುತ್ತಿದ್ದು, ಚಾಲಕ ನಿದ್ರೆಗೆ ಜಾರಿದ ಪರಿಣಾಮ ಬಸ್ ಕಾಲುವೆಗೆ ಉರುಳಿ ಬಿದ್ದಿದೆ. ಮೃತಪಟ್ಟವರನ್ನು ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹೀನಾ (6) ಎಂದು ಗುರುತಿಸಲಾಗಿದೆ.
https://bcsuddi.com/%e0%b2%ad%e0%b3%82%e0%b2%95%e0%b3%81%e0%b2%b8%e0%b2%bf%e0%b2%a4%e0%b2%a6-%e0%b2%b5%e0%b3%87%e0%b2%b3%e0%b3%86-%e0%b2%97%e0%b3%81%e0%b2%a1%e0%b3%8d%e0%b2%a1%e0%b2%a6%e0%b2%bf%e0%b2%82%e0%b2%a6/
12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ವೇಳೆ ಬಸ್ಸಿನಲ್ಲಿ 35ರಿಂದ 40 ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.