LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ – ನಸುಕಿನ ಜಾವ ಮನೆಗೆ ನುಗ್ಗಿ ಹೊತ್ತೊಯ್ದ ಸಿಐಡಿ ಪೋಲಿಸರು

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ನಂದ್ಯಾಲದಲ್ಲಿ ಇಂದು (ಸೆ.09) ನಸುಕಿನ ಜಾವ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರ ವಿರುದ್ಧ 58 ಕೋಟಿ ಯೋಜನೆಯ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ವೆಚ್ಚವನ್ನು 371 ಕೋಟಿ ರೂ.ಗೆ ಹೆಚ್ಚಿಸಿದ ಆರೋಪ ಕೇಳಿಬಂದಿತ್ತು. ಈ ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಐಪಿಸಿ ಸೆಕ್ಷನ್​ 166, 167, 481, 420, 465, 468, 471, 409, 201, r/w 109, 34 ಮತ್ತು 37ರ ಅಡಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ.

ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ಅವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.

ಇಂದು ಬೆಳಗ್ಗೆ ನಂದ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದ ಪೊಲೀಸ್​ ತಂಡ ಬೆಳಗ್ಗೆ 3 ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧನ ಮಾಡಿದೆ. ಆರಂಭದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡ ಪೊಲೀಸರು ವಿಜಯವಾಡಗೆ ತೆರಳಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆಕೇಬಲ್ ಟೆವಿಲಿಷನ್ ಮೇಲ್ವಿಚಾರಣಾ ಸಮಿತಿ ಸಭೆ : ಜಾಹಿರಾತು ಸಂಹಿತೆ ಪಾಲನೆ ಮಾಡುವುದು ಕಡ್ಡಾಯ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ-----ಬಿಬ್ಬಿ ಬಾಚಯ್ಯ  ಅವರ ವಚನ …!ತ್ರಿಶೂರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋಕಂಟಕವಾದ ಹೊಸ ಮೊಬೈಲ್‌- ಬ್ಲಾಸ್ಟ್‌ ಆಗಿ ಯುವಕ ಸೇರಿದ ಆಸ್ಪತ್ರೆ!'ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ, ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ'-ಡಿಸಿಎಂಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮ