LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

“ಆಧಾರ್ ಕಾರ್ಡ್” ನವೀಕರಿಸಲು ಕೇಂದ್ರದಿಂದ ಪ್ರಮುಖ ನಿರ್ಧಾರ..! 



ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ದೇಶಾದ್ಯಂತ ಒಟ್ಟು 13,352 ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಆಧಾರ್ ಕಾರ್ಡ್ ನವೀಕರಿಸಲು ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಅಂಚೆ ಕಚೇರಿಗಳಲ್ಲಿಯೂ ಆಧಾರ್ ಸಂಬಂಧಿತ ಸೇವೆಗಳನ್ನು ಪಡೆಯಬಹುದು ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.



ಆಧಾರ್ ಕೇಂದ್ರದ ಕೊರತೆಯಿಂದ ಆಧಾರ್ ಕಾರ್ಡ್ ನವೀಕರಿಸಲು ಉದ್ದನೆಯ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ, ಆಧಾರ್ ಸಂಬಂಧಿತ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.



ಅಧಿಸೂಚನೆಯ ಪ್ರಕಾರ, ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಆಧಾರ್ ನೋಂದಣಿಯಲ್ಲಿ ವ್ಯಕ್ತಿಗಳ ಬಯೋಮೆಟ್ರಿಕ್ ಮಾಹಿತಿಯನ್ನು ವಿದ್ಯುನ್ಮಾನವಾಗಿ ನೋಂದಾಯಿಸಬಹುದು. ಆಧಾರ್ ಅಪ್‌ಡೇಟ್‌ನಲ್ಲಿ ಯಾರಾದರೂ ತಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಮನೆ ವಿಳಾಸ, ಜನ್ಮ ದಿನಾಂಕ, ಫೋಟೋ, ಐರಿಸ್ ಯಾವುದಾದರೂ ತಪ್ಪು ಅಥವಾ ಅವಧಿ ಮುಗಿದಿದ್ದರೆ ನವೀಕರಿಸಬಹುದು



ಈ ಸೇವೆಯು ದೇಶದ 13,352 ಕೇಂದ್ರಗಳಲ್ಲಿ ಲಭ್ಯವಿದೆ. ಯಾವೆಲ್ಲ ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯವಿದೆ ಅನ್ನೋದನ್ನು ತಿಳಿಯಲು https://www.indiapost.gov.in/ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲೆಗಳೊಂದಿಗೆ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ನವೀಕರಿಸಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್.! ಹೆಚ್. ಆಂಜನೇಯಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿ ಒಟ್ಟು 257 ಹುದ್ದೆಗಳಿಗೆ ಅರ್ಜಿ ಆಹ್ವಾನ.!ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆ: ಜಂಟಿ ಮೋಜಿಣಿ ನಡೆಸಿ ಗಡಿ ಗುರುತಿಸಿ; ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆಧರ್ಮಸ್ಥಳದಲ್ಲಿ ತನಿಖೆ; ಧರ್ಮ ದ್ರೋಹಿ ಚಟುವಟಿಕೆ.! ಎಸ್ ಲಿಂಗಮೂರ್ತಿಸರ್ಕಾರ ನಿವೃತ್ತ ನೌಕರರಿಗೆ ಸಂಧ್ಯಾ ಕಿರಣ ಯೋಜನೆ ಜಾರಿ ಮಾಡಲಿ : ಡಾ.ಎಲ್ ಬೈರಪ್ಪಬಂಡೀಪುರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನ ಮೇಲೆ ಕಾಡಾನೆ ದಾಳಿರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ 30 ಸಂಸದರು ದೆಹಲಿ ಪೊಲೀಸರ ವಶಕ್ಕೆಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ? ರಾಹುಲ್ ಗಾಂಧಿ ಹೇಳಿಕೆಗೆ ಅಸಹಕಾರ ತೋರಿದ್ದ ಸಹಕಾರ ಸಚಿವಸಂಚಾರ ವ್ಯವಸ್ಥೆ ಸರಿಪಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಬೆಂಗಳೂರಿನ ಪುಟಾಣಿಇನ್ನು ರೈಲಿನಲ್ಲೇ ನೋಡಬಹುದು ಸಿನಿಮಾ