LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆನ್‍ಲೈನ್ ಗೇಮ್‍ನಲ್ಲಿ 58 ಕೋಟಿ ಕಳೆದುಕೊಂಡ ಉದ್ಯಮಿ

ಮುಂಬೈ:ಆನ್‍ಲೈನ್ ಗೇಮ್‌ನಲ್ಲಿ ಉದ್ಯಮಿಯೊಬ್ಬರು 5 ಕೋಟಿ ಗೆದ್ದು, ಸುಮಾರು 58 ಕೋಟಿ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಉದ್ಯಮಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ದೂರಿನ ಆಧಾರದ ಮೇಲೆ ಶಂಕಿತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 14 ಕೋಟಿ ರೂಪಾಯಿ ಹಣ , 4 ಕೆಜಿ ಚಿನ್ನ ಪತ್ತೆಯಾಗಿರುವುದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಂಚಿಸಿದ ಆರೋಪಿ ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಈತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ನವರತನ್ ಜೈನ್ ದುಬೈಗೆ ಹಾರುವ ಮೂಲಕ ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಉದ್ಯಮಿಗೆ ಪರಿಚಯವಾದ ಜೈನ್ ಆನ್‍ಲೈನ್ ಗೇಮ್‌ನಲ್ಲಿ ಹಣ ಗಳಿಸಬಹುದೆಂದು ಪ್ರೇರೆಪಿಸಿದ್ದಾರೆ. ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಒಪ್ಪಿಕೊಂಡರು. ಅಲ್ಲದೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷವನ್ನು ವರ್ಗಾಯಿಸಿದ್ದಾರೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದರು.

ಉದ್ಯಮಿಗೆ ಗೇಮ್‌ನಲ್ಲಿ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ವಾಪಸ್ ಬಂದಿದೆ. ಹೀಗಾಗಿ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿಗೆ ಕೇಳಲಾಗಿದೆ ಆದರೆ ಇದಕ್ಕೆ ಒಪ್ಪದ ಹಿನ್ನಲೆ ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ..!'ಸರ್ಕಾರಕ್ಕೆ ಹಿಜಬ್‌ ವಾಪಸ್‌ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು'- ಓವೈಸಿಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್