ಕಾರವಾರ: ಉತ್ತರಕನ್ನಡದ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆಯಲ್ಲಿ ಆನ್ ಲೈನ್ ಗೇಮ್ ಚಟದಿಂದಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜೇತ್ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ಯುವಕ.
ಯುವಕ ಶುಕ್ರವಾರ ಮನೆಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಯುವಕ ಮತ್ತೆ ಮನೆಗೆ ವಾಪಸ್ಸಾಗಿಲ್ಲ. ಆ ಬಳಿಕ ಡೆತ್‍ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.
https://bcsuddi.com/%e0%b2%ac%e0%b2%82%e0%b2%9f%e0%b3%8d%e0%b2%b5%e0%b2%be%e0%b2%b3-%e0%b2%a6%e0%b2%82%e0%b2%aa%e0%b2%a4%e0%b2%bf-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86/
ಇನ್ನು ವಿಜೇತ್ ಸುಮಾರು 65 ಲಕ್ಷ ರೂ. ಗೂ ಹೆಚ್ಚಿನ ಹಣವನ್ನು ಆನ್ ಲೈನ್ ಗೇಮ್‍ನಲ್ಲಿ ಕಳೆದುಕೊಂಡಿದ್ದ ಎಂದು ವರದಿಯಾಗಿದ್ದು, ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.