Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆಪರೇಷನ್ ಮುಕ್ತ 2.O: ಬೆಂಗಳೂರಿನಲ್ಲಿ ಸೆರೆಯಾಗಿದ್ದ 31 ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು

ಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿದಿದ್ದು, ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಸೆರೆಸಿಕ್ಕಿದ್ದ 31 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ರೈಲು ನಿಲ್ದಾಣದಿಂದ ಹೊರಟ ರೈಲಿನಲ್ಲಿ ಪ್ರತ್ಯೇಕ ಬೋಗಿ ಮೀಸಲಿರಿಸಿ, 31 ಜನರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ ಕಳುಹಿಸಿಕೊಡಲಾಗಿದೆ.

ಕಟ್ಟುನಿಟ್ಟಿನ ಪೊಲೀಸ್ ಬೆಂಗಾವಲು:

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು 20 ಮಂದಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡವು ಇವರೊಂದಿಗೆ ತೆರಳಿದೆ. ಮಂಗಳವಾರ ಸಂಜೆ 5 ಗಂಟೆಯ ಸುಮಾರಿಗೆ ತಂಡವು ಮಾಲ್ಡಾ ತಲುಪಲಿದ್ದು, ಅಲ್ಲಿ ನಿಯಮಾನುಸಾರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಗಡಿ ಭದ್ರತಾ ಪಡೆ (BSF) ಮೂಲಕ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

‘ಆಪರೇಷನ್ ಮುಕ್ತ’ ಮೂಲಕ ಬಲೆಗೆ ಬಿದ್ದಿದ್ದರು:

ವಿದೇಶಿಯರ ಅಕ್ರಮ ವಾಸ್ತವ್ಯಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸರು ಇತ್ತೀಚೆಗೆ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗಗಳಲ್ಲಿ ಬೃಹತ್ ಶೋಧ ಕಾರ್ಯ ಕೈಗೊಂಡಿದ್ದರು. ಒಟ್ಟು 2,944 ಶಂಕಿತರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ 105 ಮಂದಿ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದರು.

ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ 23 ತಂಡಗಳು 1,909 ಜನರನ್ನು ತಪಾಸಣೆಗೊಳಪಡಿಸಿ 43 ಮಂದಿ ಅಕ್ರಮ ಬಾಂಗ್ಲಾದೇಶೀಯರನ್ನು ವಶಕ್ಕೆ ಪಡೆದಿದ್ದವು. ಬಳಿಕ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ವರದಿ ಸಲ್ಲಿಸಲಾಗಿತ್ತು. ಇದೀಗ ಎಫ್‌ಆರ್‌ಆರ್‌ಒ ಆದೇಶದ ಮೇರೆಗೆ ಮೊದಲ ಹಂತವಾಗಿ 31 ಜನರನ್ನು ಗಡೀಪಾರು ಮಾಡಲಾಗುತ್ತಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತಮುಂಬರುವ ಸಾಲು ಸಾಲು ನೇಮಕಾತಿ ಪರೀಕ್ಷೆಗಳಿಗೆ ಕೆಇಎ ಸಿದ್ಧತೆ: ಜಿಲ್ಲೆಗೆ ಇಬ್ಬರು ಪರೀಕ್ಷಾ ಮಾಸ್ಟರ್ ತರಬೇತುದಾರರ ನೇಮಕ, ತರಬೇತಿಪ್ರಪಂಚದಲ್ಲೆ ಸನಾತನ ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮವಿಲ್ಲ : ಸುಭುದೇಂದ್ರ ತೀರ್ಥರು ಹೇಳಿಕೆBREAKING : 'ಗೃಹಜ್ಯೋತಿ ಮರುಪರಿಶೀಲನೆ' : ಸೆ.30ರವರೆಗೆ ಗಡುವು ವಿಸ್ತರಿಸಿದ ರಾಜ್ಯ ಸರ್ಕಾರ!ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು 'ಪ್ರಜಾಸೇವಾ' ಸಜ್ಜು : ಸೆಪ್ಟೆಂಬರ್ 5 ರಿಂದ ರಾಜ್ಯಾದ್ಯಂತ ಅಧಿಕೃತ ಚಾಲನೆ!'ಶಕ್ತಿ ಯೋಜನೆ' ಉಚಿತ ಬಸ್ ಪ್ರಯಾಣದಿಂದ ಭಕ್ತರಿಗೆ ಅನುಕೂಲ: ಮಂತ್ರಾಲಯ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಶ್ಲಾಘನೆ!BREAKING : ಬಿಗ್ ಬಾಸ್ ಕನ್ನಡ ಶೋಗೆ ಸಂಕಷ್ಟ : ಅನುಮತಿ ಕೊಡೋದಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ!ಆಪರೇಷನ್ ಮುಕ್ತ 2.O: ಬೆಂಗಳೂರಿನಲ್ಲಿ ಸೆರೆಯಾಗಿದ್ದ 31 ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರುBREAKING: KPSC ನೇಮಕಾತಿ ಹಗರಣ: ಸೆ.9ರವರೆಗೆ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ CID ಕಸ್ಟಡಿಗೆBIG NEWS: ರಾಜ್ಯದಲ್ಲಿ ಆಗಸ್ಟ್ ತಿಂಗಳ ‘ಅನ್ನಭಾಗ್ಯ’ ಅಕ್ಕಿ ವಿತರಣೆ ಸ್ಥಗಿತ: ಪಡಿತರದಾರರಲ್ಲಿ ಗೊಂದಲ