LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆರ್.ಜಿ. ಕರ್ ಆಸ್ಪತ್ರೆ ಹಣಕಾಸು ಅವ್ಯವಹಾರ: ಇಂದು ಕೋಲ್ಕತ್ತದ 6 ಸ್ಥಳಗಳಲ್ಲಿ ಇಡಿ ದಾಳಿ

ಕೋಲ್ಕತ್ತ : ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಟಿಎಂಸಿ ಶಾಸಕರೊಬ್ಬರ ಮನೆ ಸೇರಿದಂತೆ ಕೋಲ್ಕತ್ತದ ಆರು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಟಿಎಂಸಿಯ ಸೆರಾಂಪೋರ್ ಶಾಸಕ ಸುದೀಪ್ಲೋ ರಾಯ್ ಅವರ ನಿವಾಸ ಹಾಗೂ ಔಷಧಿ ವ್ಯಾಪಾರಿಯೊಬ್ಬರ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಜೊತೆಗೆ ಇತರ 4 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಡಿ ಅಧಿಕಾರಿಗಳ ಈ ದಾಳಿಯು ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಗಳ ಕುರಿತ ತನಿಖೆಯ ಅಂಗವಾಗಿದೆ. ನಮಗೆ ಕೆಲವು ಖಚಿತ ಮಾಹಿತಿ ದೊರೆತ ಹಿನ್ನೆಲೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಆರ್.ಜಿ.ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಮೂವರು ಸಹಚರರನ್ನು ಬಂಧಿಸಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಗೊಂಡನಹಳ್ಳಿ ಶ್ರೀ ಚೆಲುಮೇರುದ್ರ ಸ್ವಾಮಿಯ ರಥೋತ್ಸವಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ ಇಲ್ಲಿದೆ.!ವಚನ: ಸಿದ್ಧರಾಮೇಶ್ವರ .!ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ..!ಬೆಂಗಳೂರಿಗೆ ಬಿಸಿಲಾತಂಕ : ಫೆಬ್ರವರಿಯಲ್ಲೇ ಬಿಸಿಲು ಧಗೆ ಹೆಚ್ಚಳ - 42 ಡಿ.ಸೆ. ದಾಟುವ ನಿರೀಕ್ಷೆ!ರಾಜ್ಯದಲ್ಲಿ 5 ಹೊಸ ಮಿನಿ ಏರ್‌ಪೋರ್ಟ್‌ ನಿರ್ಮಾಣ..: ಎಲ್ಲೆಲ್ಲಿ ಗೊತ್ತಾ…?ಚುನಾವಣೆಯಲ್ಲಿ ಗೆದ್ದ ಬಿಜೆಪಿ: ದೆಹಲಿ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ'ಜನರ ಆದೇಶವನ್ನ ನಾವು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ'- ಕೇಜ್ರಿವಾಲ್ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿಬಿಡಿ!; APP- Congress ನ್ನು ಟ್ರೋಲ್ ಮಾಡಿದ ಒಮರ್ ಅಬ್ದುಲ್ಲಾಇನ್ಫೋಸಿಸ್ : 400 ತರಬೇತಿನಿರತ ಉದ್ಯೋಗಿಗಳ ವಜಾ