E-PAPER
17 Nov 2026, 12:23:12 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ದೇಣಿಗೆ.

ಬೆಳಗಾವಿ,-೦೬: ಸೋಮವಾರ ೦೨-೦೯-೨೦೨೪ ರಂದು ಧಾರವಾಡದ ಶ್ರೀಮತಿ ಸುಮನಾ ವಜ್ರಕುಮಾರ ಅವರು ಎರ್ಮಾಳು ಬೀಡು ಡಾ. ಎನ್ ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆ ಆಚರಣೆಯ ಪ್ರಯುಕ್ತ, ಬೆಳಗಾವಿಯ ಅಟೋ ನಗರದ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಅವಶ್ಯವಿದ್ದ ೧೦೦ ಲೀ ಸಾಮರ್ಥ್ಯದ ರೂ. ೧೨,೫೦೦/- ಬೆಲೆಯುಳ್ಳ ಸ್ಟೇನ್ಲೆಸ್ ಸ್ಟೀಲ್ ಕುಡಿಯುವ ನೀರಿನ ಟ್ಯಾಂಕನ್ನು ದೇಣಿಗೆ ನೀಡುವದರೊಂದಿಗೆ ಶಾಲೆಯ ಬುದ್ದಿಮಾಂದ್ಯ ಮಕ್ಕಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಜಯಶ್ರೀ ಮಾಳಗಿ, ಆರ್.ಬಿ. ಬನಶಂಕರಿ ಎ.ಪಿ. ಮಾಳಗಿ, ಅಶೋಕ್ ಶೆರೆಗಾರ ಅವರು ಜಿನೈಕ್ಯ ಡಾ ಎನ್. ವಜ್ರಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದ್ವಿತೀಯ ಪುಣ್ಯಸ್ಮರಣೆಯ ಕಾರ್ಯಕ್ರಮ ನೆರವೇರಿಸಿದರು.

ಅತಿಥಿಗಳಾಗಿ ಆಗಮಿಸಿದ, ನಿವೃತ್ತ ಉಪನ್ಯಾಸಕರಾದ ಪ್ರೊ. ಬಿ.ಎಸ್. ದೊಡಬಂಗಿ, ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಮ್. ವಾಯ್. ಮೆಣಸಿನಕಾಯಿ ಅವರು ಮಾತನಾಡಿ ವಿಶೇಷ ಶಾಲೆಯ ಮಕ್ಕಳ ಸೇವೆ ದೇವರ ಸೇವಯಾಗಿದ್ದು. ಇಂತಹ ಬೃಹತ್ ಹಾಗೂ ವಿಶಾಲವಾದ ಕಟ್ಟಡದಲ್ಲಿ ಓದುವ ಭಾಗ್ಯವನ್ನು ಪಡೆದ ಮಕ್ಕಳು ಧನ್ಯರೆಂದು ಹೇಳುತ್ತ, ಜಿನೈಕ್ಯ ಡಾ ಎನ್ ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆಗೆ ಶುಭ ಕೋರಿದರು. ವಿಶ್ರಾಂತ ಉಪನಿರ್ದೇಶಕರು ಹಾಗೂ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾದ ಆರ್. ಬಿ. ಬನಶಂಕರಿ ಅವರು ಪ್ರಾಸ್ತಾವಿಕವಾಗಿ ಸಂಸ್ಥೆಯ ಬಗ್ಗೆ ಮಾತನಾಡುತ್ತ, ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಹುಟ್ಟು , ಬೆಳವಣಿಗೆಯ ಬಗ್ಗೆ ತಿಳಿಸಿ, ಧಾರವಾಡದ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರಿ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಜಿನೈಕ್ಯ ಡಾ ಡಾ. ಎನ್‌ ವಜ್ರಕುಮಾರ ಅವರಿಂದ ವಿದ್ಯಾಭ್ಯಾಸ ಪಡೆದ ಪ್ರಯುಕ್ತ ಅವರ ಧರ್ಮಪತ್ನಿ ಶ್ರೀಮತಿ ಸುಮನಾ ವಜ್ರಕುಮಾರ ಅವರ ಮಾರ್ಗದರ್ಶನದಲ್ಲಿ ಡಾ. ಎನ್ ವಜ್ರಕುಮಾರ್ ಅವರ ದ್ವಿತೀಯ ಪುಣ್ಯಸ್ಮರಣೆ ಆಚರಿಸಿ, ಗುರುವಿಗೆ ಶಿರಸಾಷ್ಟಾಂಗ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಜಯಶ್ರೀ ಮಾಳಗಿ ಅವರು ವಹಿಸಿಕೊಂಡು ಶ್ರೀಮತಿ ‌ಸುಮನಾ ವಜ್ರಕುಮಾರ ಅವರು ಪತಿಯ ದ್ವಿತೀಯ ಪುಣ್ಯಸ್ಮರಣೆ ಪ್ರಯುಕ್ತ ಬುದ್ದಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಗೆ ದೇಣಿಗೆ ನೀಡಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಅಧ್ಯಕ್ಷರಾದ ಅನೀಲಕುಮಾರ ಮಾಳಗಿ, ನಿರ್ದೇಶಕರಾದ ಅಶೋಕ್ ಕುಮಾರ್ ಮಾಳಗಿ, ‌ಸಲಹಾ ಸಮಿತಿ ಸದಸ್ಯರಾದ ಅನೀಲ ಗುಡಮಟ್ಟಿ, ಶಿಕ್ಷಕಿ ಸುರ್ವಣಾ ಲೋಕೊಳಕರ, ಸಿಬ್ಬಂದಿ ವರ್ಗದವರಾದ ಶಿವಕುಮಾರ್ ಶೆರೆಗಾರ, ಸುಭ್ರಾವ ಹಾದಿಮನಿ, ಪ್ರಕಾಶ್ ಮಲಗನ್ನವರ, ಲಕ್ಷ್ಮೀ ಖಾನಗೌಡರ ಹೊಸತೋಟ, ಯಶೋಧಾ ತುರಾಯಿ, ಬಸಮ್ಮ ಹಳೇಮನಿ, ಕು. ಶ್ರೀನಿಧಿ ಮಾಳಗಿ‌ ಹಾಗೂ ಕು. ಚೇತನಾ ಮಾಳಗಿ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.