LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂಡಿಯಾ 'ಭಾರತ'ವಾದರೇ ಈ ಹೆಸರುಗಳು ಬದಲಾಗಲಿದೆಯೇ?

ನವದೆಹಲಿ: ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿದ್ದು, ಸೆ.18 ರಿಂದ 5 ದಿನಗಳ ಕಾಲ ನಡೆಯುವ ಸಂಸತ್ತಿನ ವಿಶೇಷ ಧಿವೇಶನದಲ್ಲಿ ಇಂಥದೊಂದ್ದು ನಿರ್ಧಾರ ಕೈಗೊಳ್ಳಲಾಗುತ್ತಿದೆ. ದೇಶದ ಮರುನಾಮಕರಣ ಮಸೂದೆ ಮಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎನ್ನುವ ಊಹಾಪೋಹಗಳು ಹರಡಿದ್ದು ಈ ಬಗ್ಗೆ ಬಾರಿ ಚರ್ಚೆ ಆಗುತ್ತಿದೆ.

ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಸರ್ಕರದಿಂದ ಹೊರಬಿದ್ದಿಲ್ಲವಾದರೂ , ಜಿ -20 ಶೃಂಗ ಸಭೆಗೆ ಆಗಮಿಸುತ್ತಿರುವ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೋಗಿರುವ ಆಹ್ವಾನ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಂಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿರುವುದು ಈ ಚರ್ಚೆಗೆ ಮತ್ತಷ್ಟು ಕಾವು ಕೊಟ್ಟಿದೆ.

ಈ ಎಲ್ಲದ ನಡುವೆ ಇಂಡಿಯಾ ಬದಲು ಭಾರತ ಹೆಸರು ಅಧಿಕೃತವಾದ ಮೇಲೆ ಹಲವು ಸಂಸ್ಥೆಗಳ ಹೆಸರು ಬದಲಾಗುತ್ತಾ ಅನ್ನುವ ಬಗ್ಗೆ ನೆಟ್ಟಿಗರು ಬಾರಿ ಚರ್ಚೆ ನಡೆಸುತ್ತಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ, ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್, ಹೆಸರುಗಳು ಏನಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್, ಮುಂಬೈ ಇಂಡಿಯನ್ಸ್, ಟೀಮ್ ಇಂಡಿಯಾದ ಹೆಸರು ಏನಾಗಬಹುದು ಎನ್ನುವ ಬಗ್ಗೆ ಕುತೂಹಲಕಾರಿ ಕಾಮೆಂಟ್ಗಳು ಕೂಡ ನೆಟ್ಟಿಗರು ಮಾಡುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಥಮ ಬಾರಿಗೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿ : ಸಿದ್ದರಾಮಯ್ಯಮಹಿಳೆಯ ಮೇಲೆ ಕರಡಿಗಳ ದಾಳಿತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ನಿಧನನಾಡಿದ್ದು, ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಸಭೆ- ಬಿ.ವೈ.ವಿಜಯೇಂದ್ರಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? - ಇನ್ನು ಮುಂದೆ ಇರಲಿ ಎಚ್ಚರ..!ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಬಿದ್ದ 400 ಕೆ ಜಿ ತೂಕದ ಬೃಹತ್ ಮೀನುಉಡುಪಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಲೈನ್‌ಮ್ಯಾನ್ ಸಾವುಕೇರಳದ ನಾಪತ್ತೆಯಾಗಿದ್ದ 21 ಮಂದಿ ಐಎಸ್‌ಗೆ ಸೇರ್ಪಡೆ..!