LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಸಹಾಯ ಮಾಡಿ: ಕಾಂಗ್ರೆಸ್ ಮನವಿ

ನವದೆಹಲಿ: ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಪಕ್ಷ ಮನವಿಕೊಂಡಿದೆ.

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವುದೇ ವಿಷಯದಿಂದ ವಿಚಲಿತರಾಗದೇ ಮತದಾನ ಮಾಡಿ. ಇಂದು 4ನೇ ಹಂತದ ಮತದಾನ ನಡೆಯತ್ತಿದೆ. ಜೂನ್ 4ರಂದು ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಯಾಗಲಿದೆ ಎಂಬುವುದನ್ನು 3 ಹಂತದ ಮತದಾನಗಳಿಂದ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

ನೀವು ನೀಡುವ ಒಂದು ಮತವು ನಿಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುತ್ತದೆ. ಜೊತೆಗೆ ನಿಮ್ಮ ಇಡೀ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತದೆ ಎನ್ನುವುದು ನೆನಪಿರಲಿ ಎಂದಿದ್ದಾರೆ.

ಇನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೊದಲ 3 ಹಂತಗಳಲ್ಲಿ ಪ್ರಜಾಪ್ರಭುತ್ವದ ಪರ ಮತ ಚಲಾಯಿಸುವ ಮೂಲಕ ಜನರು ನಿರಂಕುಶ ಶಕ್ತಿಗಳಿಂದ ಸಂವಿಧಾನವನ್ನು ಉಳಿಸಲು ತಮ್ಮ ಶಕ್ತಿ ತೋರಿಸಿದ್ದಾರೆ. ನ್ಯಾಯದ ಪರವಾಗಿ ಮತ ಚಲಾಯಿಸುವ ಮೂಲಕ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸಿ. ಸಮಾಜವನ್ನು ವಿಭಜಿಸುವ ದ್ವೇಷಪೂರಿತ ಭಾಷಣಗಳ ದಿಕ್ಕು ತಪ್ಪಿಸುವ ತಂತ್ರಗಳಿಂದ ಹಿಂಜರಿಯಬೇಡಿ ಎಂದು ಹೇಳಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರೋಪಿಗಳು ಪೊಲೀಸರಿಗೆ ಮೊಬೈಲ್ ನೀಡಲು ನಿರಾಕರಿಸುವುದು ಅಸಹಕಾರವಲ್ಲ: High courtಪಬ್ ಮೇಲೆ ದಾಳಿ :ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 40 ಮಹಿಳೆಯರು ಸೇರಿ 140 ಜನರ ಬಂಧನWhatsapp ಸಂದೇಶ ನಂಬಿ 1 ಕೋಟಿ ರೂ. ಕಳೆದುಕೊಂಡ ವ್ಯಕ್ತಿ..!Muda Case CM Diddaramaiah: ವೈಟ್ನರ್‌ ಹಾಕಿ ತಿದ್ದಿದ ಸಿಎಂ ಪತ್ನಿ ಪತ್ರದ ಮೂಲ ಪ್ರತಿ ಇ.ಡಿ. ವಶಕ್ಕೆ!ಮಹಿಳೆ ಆತ್ಮಹತ್ಯೆಗೆ ಶರಣು - ಸ್ಯಾನಿಟರಿ ಪ್ಯಾಡ್‌ನೊಳಗೆ ಪತ್ತೆಯಾಗಿತ್ತು ಡೆತ್‌ನೋಟ್..!'ಮೋದಿ ಒಬ್ಬ ಶ್ರೇಷ್ಠ ರಾಜಕಾರಣಿ' - ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿಮನೆಯ ಅಡುಗೆ ಕೋಣೆಯಲ್ಲಿ ಅವಿತು ಕುಳಿತ ಚಿರತೆ..!ತಿರುವಂತಪುರದ ಶ್ರೀ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನಎರಡು ರೋಲ್ಸ್‌ ರಾಯ್ಸ್‌, 10 ಮರ್ಸಿಡಿಸ್‌ ಕಾರುಗಳಿಗೆ ಸಮ ಈ ಕೋಣದ ಬೆಲೆ! | ಅಬ್ಬಬ್ಬಾ… ಇದರ ಬೆಲೆ ಎಷ್ಟು ಕೋಟಿ ಗೊತ್ತಾ?ಬಿಗ್‌ ಬಾಸ್‌ ಮನೆಗೆ ಗಾಯಕ ಹನುಮಂತ ವೈಲ್ಡ್ ಕಾರ್ಡ್‌ ಎಂಟ್ರಿ | Big Boss