ಬೆಂಗಳೂರು: ಇಂದು ಅಥವಾ ನಾಳೆ ವಿಪಕ್ಷ ನಾಯಕರ ಆಯ್ಕೆ ಆಗಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ಇಂದು 16ನೇ ವಿಧಾನಸಭೆ ಮೊದಲ ಜಂಟಿ ಬಜೆಟ್ ಅಧಿವೇಶಕ್ಕೆ ಪ್ರಾರಂಭವಾಗಿದೆ. ಆದರೆ ಈ ಬಾರಿ ಪ್ರತಿಪಕ್ಷವಾಗಿರುವ ಬಿಜೆಪಿಯಲ್ಲಿ ಇನ್ನು ಕೂಡ ಸಭಾ ನಾಯಕನನ್ನೇ ಆಯ್ಕೆ ಮಾಡದ ಕಾರಣ ವಿಪಕ್ಷ ನಾಯಕನಿಲ್ಲದೆ ಇಂದಿನಿಂದ ಅಧಿವೇಶನ ಪ್ರಾರಂಭವಾಗಿದೆ.
https://bcsuddi.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%8d%e0%b2%b0%e0%b3%88%e0%b2%b8%e0%b3%8d%e0%b2%a4%e0%b2%b0%e0%b3%81-%e0%b2%b8%e0%b3%87%e0%b2%b0/
ವಿಧಾನಸಭೆ, ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇಂದು ಅಥವಾ ನಾಳೆ ವಿಪಕ್ಷ ನಾಯಕರ ಆಯ್ಕೆ ಆಗಲಿದೆ. ನನ್ನ ಪ್ರಕಾರ ವೀಕ್ಷಕರು ಈಗಾಗಲೇ ಬಂದಿದ್ದಾರೆ. ನಾಳೆಗೆ ಎಲ್ಲಾವೂ ಸರಿಯಾಗುತ್ತೆ, ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ.
ಇನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮತ್ತು ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಅಂತಿಮಗೊಂಡಿವೆ ಎಂದು ತಿಳಿದುಬಂದಿದೆ.