ಇಂದು ಮಧ್ಯಾಹ್ನ 3 ಗಂಟೆಗೆ ನಮ್ಮ ಮನೆಗೆ ಜೆಪಿ ನಡ್ಡಾ ಬರಲಿದ್ದಾರೆ - ನೇಹಾ ತಂದೆ ನಿರಂಜನ ಹಿರೇಮಠ
ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ನಮ್ಮ ಮನೆಗೆ ಬರಲಿದ್ದಾರೆ ಎಂದು ಕೊಲೆಯಾದ ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಹೇಳಿದ್ದಾರೆ. ಹುಬ್ಬಳ್ಳಿಯ ಬಿಡನಾಳ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕರೆ ಮಾಡಿ ಮಧ್ಯಾಹ್ನ ಜೆಪಿ ನಡ್ಡಾ ಬರ್ತಾರೆ ಅಂತ ಹೇಳಿದ್ದಾರೆ. ಮಗಳನ್ನು ಕಳೆದುಕೊಂಡ ನಮಗೆ ಸಾಂತ್ವನ ಹೇಳಲು ಜೆಪಿ ನಡ್ಡಾ ಬರ್ತಾರೆ. ನಾಡಿನ ಅನೇಕ ಮಠಾಧಿಪತಿಗಳು ಬಂದು ಸಾಂತ್ವನ ಹೇಳಿದ್ದಾರೆ. ಇವತ್ತು ರಾಷ್ಟ್ರೀಯ ನಾಯಕರು ಬರ್ತೀದಾರೆ ಎಂದು ನಿರಂಜನ ಹಿರೇಮಠ ಭಾವುಕರಾದರು. ಕಾಂಗ್ರೆಸ್ ಮುಖಂಡರು ಮನೆಗೆ ಬಂದು ಹೋಗಿದ್ದಾರೆ. ಇದರಲ್ಲಿ ರಾಜಕೀಯ ಬೇಡ. ನನ್ನ ಮಗಳನ್ನ ಕೊಲೆ ಮಾಡಿದ ಫಯಾಜ್‌ಗೆ ಇನ್ನು ಕೆಲವರು ಸಹಾಯ ಮಾಡಿದ್ದಾರೆ. ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರೋರು, ಹಣ ಇರೋರು, ಪೊಲಿಟಿಕಲ್ ಬ್ಯಾಕ್ ಗ್ರೌಂಡ್ ಇರೋರು ಇದಾರೆ. ಅವರನ್ನು ಅರೆಸ್ಟ್ ಮಾಡಬೇಕು. ಫಯಾಜ್‌ನನ್ನ ಗಲ್ಲಿಗೇರಿಸಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.