LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇನ್ಸ್ಟಾಗ್ರಾಂ ವಿಡಿಯೋಗಾಗಿ 68ನೇ ಮಹಡಿಯಲ್ಲಿ ಸಾಹಸ – ಕೆಳಗೆ ಬಿದ್ದು ಸಾವನಪ್ಪಿದ ಡೇರ್‌ಡೆವಿಲ್ ರೆಮಿ ಲುಸಿಡಿ

ಹಾಂಕಾಂಗ್ : ಗಗನಚುಂಬಿ ಕಟ್ಟಡದ ತುದಿಯಲ್ಲಿ ನಿಂತು ಸಾಹಸ ಮಾಡುತ್ತಿದ್ದ ಡೇರ್‌ಡೆವಿಲ್ ರೆಮಿ ಲುಸಿಡಿ ಸಾಹಸ ಮಾಡುವ ವೇಳೆ ಗಗನಚುಂಬಿ ಕಟ್ಟಡ ಬಿದ್ದು ಸಾವನಪ್ಪಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ‘ರೆಮಿ ಎನಿಗ್ಮಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡೇರ್‌ಡೆವಿಲ್ ರೆಮಿ ಲುಸಿಡಿ, ಎತ್ತರದ ಹಾಂಗ್ ಕಾಂಗ್ ಗಗನಚುಂಬಿ ಕಟ್ಟಡದ ಮೇಲಿನಿಂದ ಬಿದ್ದು ಸಾವನಪ್ಪಿದ್ದಾರೆ.

30 ವರ್ಷ ವಯಸ್ಸಿನ ಥ್ರಿಲ್-ಸೀಕರ್ ಕಟ್ಟಡಗಳು, ಕ್ರೇನ್‌ಗಳು, ಸೇತುವೆಗಳು ಮೇಲೆ ವಿವಿಧ ರೀತಿಯ ಸಾಹಸಗಳನ್ನು ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಲುಸಿಡಿ ಅವರು ಫ್ರೆಂಚ್‌ ಡೇರ್ ಡೆವಿಲ್‌ ಎಂದೇ ಖ್ಯಾತಿ ಪಡೆದಿದ್ದರು. ಇವರು ಟ್ರೆಗುಂಟರ್ ಟವರ್ ಸಂಕೀರ್ಣ ಹತ್ತಿದ್ದ ವೇಳೆ ಬಿದ್ದಿದ್ದಾರೆ. ಅವರು ಕಾಲು ಜಾರಿ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಸಂಜೆ 6 ಗಂಟೆ ವೇಳೆಗೆ ಲುಸಿಡಿ ಅವರು 40ನೇ ಮಹಡಿಯಲ್ಲಿನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯುರಿಟಿ ಬಳಿ ಹೇಳಿದ್ದರು, ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಅಷ್ಟರಲ್ಲಿ ಅವರು ಕಟ್ಟಡದ ಒಳಗೆ ಪ್ರವೇಶಿಸಿದ್ದರು. 49ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹಾಂಗ್‌ಕಾಂಗ್‌ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿ ಅವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಅವರು ಸಾಹಸಗಳನ್ನು ಮಾಡಿದ ವಿಡಿಯೊಗಳು ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಟಿ ಜಾಕ್‌ಲೀನ್ ಫೆರ್ನಾಂಡಿಸ್ ಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ಸುಕೇಶ್ !ರಾಜ್ಯದಲ್ಲಿ ಕೋವಿಡ್‌ಗೆ 7 ಬಲಿ, ಸೋಂಕಿತರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯ : ದಿನೇಶ್ ಗುಂಡೂರಾವ್ಹಾವೇರಿ : ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: 45 ವಿದ್ಯಾರ್ಥಿಗಳಿಗೆ ಗಾಯ, 4 ಗಂಭೀರ..!ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಅಯೋಧ್ಯೆಯಲ್ಲಿ ಸ್ಮಾರಕ : ಯೋಗಿ ಆದಿತ್ಯನಾಥ್ ಘೋಷಣೆಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಓರ್ವ ಸಜೀವ ದಹನಕೊರೊನಾ ಉಪತಳಿ ಪತ್ತೆ: ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ - ದಿನೇಶ್ ಗುಂಡುರಾವ್ಕಾಶ್ಮೀರದ ಸ್ಥಿತಿಯು ಗಾಜಾ, ಪ್ಯಾಲೆಸ್ತೀನ್ ಸ್ಥಿತಿಯಂತಾಗುತ್ತದೆ- ಫಾರೂಕ್ ಅಬ್ದುಲ್ಲಾ ಎಚ್ಚರಿಕೆದೇವಾಲಯಗಳ ಬಳಿ ಬಹುಮಹಡಿ ಕಟ್ಟಡ ನಿರ್ಮಿಸದಂತೆ ಸೂಚನೆ- ಯೋಗಿ'ಯುವನಿಧಿ ಯೋಜನೆʼ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂಟ್ರಾಫಿಕ್ ಜಾಮ್‌ ನಿಂದ ತಲೆಕೆಡಿಸಿಕೊಂಡು ನದಿಯಲ್ಲಿ ಥಾರ್ ಓಡಿಸಿದ ಚಾಲಕನಿಗೆ ದಂಡ