LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇನ್‌ಸ್ಟಾಗ್ರಾಮ್‌‌ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪೋಲೆಂಡ್ ಮಹಿಳೆ!

ರಾಂಚಿ:‌ ಇನ್‌ಸ್ಟಾಗ್ರಾಮ್‌‌ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಪೋಲೆಂಡ್ ದೇಶದ 47 ವರ್ಷದ ಮಹಿಳೆಯೊಬ್ಬಳು ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮಕ್ಕೆ ಬಂದಿರುವ ಘಟನೆ ವರದಿಯಾಗಿದೆ.

ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ನಾಲ್ಕು ಮಕ್ಕಳ ತಾಯಿ, ಪಾಕ್‌ ಮಹಿಳೆ ಸೀಮಾ ಹೈದರ್‌ ಅವರ ವಿಚಾರ ಸುದ್ದಿಯಲ್ಲಿರುವಾಗಲೇ ಇದೀಗ ಜಾರ್ಖಂಡ್‌ ನಲ್ಲಿ ಅದೇ ರೀತಿಯ ಘಟನೆ ನಡೆದಿದೆ.

ಪೋಲೆಂಡ್ ದೇಶದ ಬಾರ್ಬರಾ ಪೋಲಾಕ್ ತನ್ನ 6 ವರ್ಷದ ಮಗಳೊಂದಿಗೆ ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮದ 35 ವರ್ಷದ ಶಾದಾಬ್ ಮಲ್ಲಿಕ್ ಅವರಿಗಾಗಿ ಭಾರತಕ್ಕೆ ಬಂದಿದ್ದಾರೆ.

ಇನ್ನು ಬಾರ್ಬರಾ ಪೋಲಾಕ್ ಅವರು ಈ ಹಿಂದೆಯೇ ತನ್ನ ಪತಿಯಿಂದ ವಿಚ್ಛೇದನವನ್ನು ಪಡೆದಿದ್ದು, ಮಲ್ಲಿಕ್‌ ಅವರೊಂದಿಗೆ ಪ್ರೇಮವಾದ ಬಳಿಕ, ಇದೀಗ ಇಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಜಾರಿಬಾಗ್ ಎಸ್‌ ಡಿಎಂ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿ ಸಂಸದ ಸಂಜಯ್ ಸಿಂಗ್ ಜಾಮೀನು ಅರ್ಜಿ ವಜಾಕುಡಿಯುವ ನೀರಿನ ತೆರಿಗೆ ಹೆಚ್ಚಳ- ಜನರಿಗೆ ಶಾಕ್ ನೀಡಿದ ಸರ್ಕಾರ'ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸುವ ಅಧಿಕಾರ ಯಾರಿಗೂ ಕೊಟ್ಟಿಲ್ಲ'-ಡಿಕೆಶಿ'ಸಂಸದರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ'- ಸಿಎಂ ಸಿದ್ದರಾಮಯ್ಯದೇಶದಲ್ಲಿ ಪ್ರಜಾಪ್ರಭುತ್ವಇದೆಯೋ ಇಲ್ಲವೋ ಎಂಬ ಪ್ರಶ್ನೆ ಜನರ ಮುಂಡಿಡುತ್ತೇವೆ : ಡಿಕೆಶಿ5 ವರ್ಷದ ಮಗು ನೀರಿನ ಸಂಪ್‌ಗೆ ಬಿದ್ದು ಮೃತ್ಯುವಿಶ್ವದ ಅತ್ಯಂತ ವಿಷಕಾರಿ ಮೀನು - ಭಾರತ ಪೆಸಿಫಿಕ್ ಸಾಗರಗಳ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಕಲ್ಲುಮೀನುಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ನಲ್ಲಿ ಮೋಜು: ಸಿಎಂ ವಿರುದ್ದ ಬಿಜೆಪಿ ಟೀಕೆಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್​ ಅಧ್ಯಕ್ಷನಿಗೆ ಆಹ್ವಾನಬರಪರಿಹಾರ: ನಾಳೆ ಅಮಿತ್‌ ಷಾ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ- ಸಿಎಂ