LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಸ್ರೋ - 'ಸ್ಪೇಸ್‌ಎಕ್ಸ್' ಸಹಯೋಗ: ಫಾಲ್ಕನ್‌- 9 ರಾಕೆಟ್ ನಲ್ಲಿ ಜಿಸ್ಯಾಟ್‌-20 ಉಪಗ್ರಹ ಉಡಾವಣೆ

ನವದೆಹಲಿ:  ಭಾರತದ ಸಂಪರ್ಕ ಉಪಗ್ರಹವಾದ ಜಿಸ್ಯಾಟ್‌-20 ಉಪಗ್ರಹದ ಉಡಾವಣೆಗಾಗಿ ಇದೇ ಮೊದಲ ಬಾರಿಗೆ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಫಾಲ್ಕನ್‌- 9 ರಾಕೆಟನ್ನು ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.

ಕಂಪನಿಯ ಫಾಲ್ಕನ್ 9 ರಾಕೆಟ್ GSAT N2 ಅನ್ನು ಭೂಮಿಯಿಂದ 37,000 ಕಿಮೀ ದೂರದಲ್ಲಿರುವ ಜಿಯೋ ಸಿಂಕ್ರೊನೈಸ್ಡ್ ಕಕ್ಷೆಗೆ ಉಡಾವಣೆ ಮಾಡಲಿದೆ. ಬಿಲಿಯನೇರ್ ಎಲೋನ್ ಮಸ್ಕ್ ನೇತೃತ್ವದ ಉದ್ಯಮದೊಂದಿಗೆ ಇದು ಭಾರತದ ಮೊದಲ ಪಾಲುದಾರಿಕೆಯಾಗಿದೆ.

230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಫಾಲ್ಕನ್‌-9 ರಾಕೆಟ್‌ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ. ನಮಗೆ ಬೇಕಾದ ಸಮಯದಲ್ಲಿ ಇತರ ರಾಕೆಟ್‌ಗಳು ಲಭ್ಯವಿಲ್ಲದ ಕಾರಣ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥನ್‌ ಹೇಳಿದ್ದಾರೆ. ಇಸ್ರೋದಿಂದ ವಾಣಿಜ್ಯ ಉಡಾವಣೆಗಳನ್ನು ನಡೆಸುವ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದ್ದು, ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಉಡಾವಣೆ ನಡೆಯಲಿದೆ. ಉಪಗ್ರಹ ಆಧಾರಿತ ಇಂಟರ್ನೆಟ್‌ ವ್ಯವಸ್ಥೆ ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ ಭಾರತದ ಎಲ್ಲಾ ಪ್ರದೇಶಗಳನ್ನು ಒಳಗೊಳ್ಳುವಂತೆ ಮಾಡಲು ಇಸ್ರೋ ತಯಾರಿಸಿರುವ ಸಂಪರ್ಕ ಉಪಗ್ರಹವೇ ಜಿಸ್ಯಾಟ್‌-20. ಇದು ಸುಮಾರು 4700 ಕೇಜಿ ತೂಕವಿದ್ದು, ಸೆಕೆಂಡಿಗೆ 48 ಜಿಬಿಯಂತೆ ಇಂಟರ್ನೆಟ್‌ ಸೌಲಭ್ಯ ಒದಗಿಸಲಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
- ವಚನ : - -ಚೆನ್ನಬಸವಣ್ಣಮೇ 20ರವರೆಗೆ ಕೇರಳದ ಕೆಲವು ರಾಜ್ಯಗಳಿಗೆ ರೆಡ್ ಅಲರ್ಟ್‌ ಘೋಷಣೆಮಾಲಿವಾಲ್ ಮೇಲೆ ಹಲ್ಲೆ ಕೇಸ್‌-ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ 5 ದಿನ ಕಸ್ಟಡಿಗೆಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಕೋರ್ಟ್ವಾಹನ ಸವಾರರೇ ಗಮನಿಸ - ಜೂನ್ 1ರಿಂದ ಚಾಲನಾ ಪರವಾನಿಗೆ ನಿಯಮ ಬದಲಾವಣೆ'ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್'- ಶಿವರಾಮೇಗೌಡಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ- ಬಿಜೆಪಿಯ ಮಾಜಿ ಸರ್ಪಂಚ್‌ ಬಲಿ, ದಂಪತಿಗೆ ಗಾಯಮಂಗಳೂರು: ಶಬರಿಮಲೆ ಯಾತ್ರಾರ್ಥಿ ಕೇರಳದಲ್ಲಿ ಹೃದಯಾಘಾತದಿಂದ ಸಾವು..!ಪ್ರಧಾನಿ ನರೇಂದ್ರ ಮೋದಿ ಹೊಸ ಬಯೋಪಿಕ್ ​: ಮೋದಿ ಪಾತ್ರದಲ್ಲಿ ಕಟ್ಟಪ್ಪ?ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ- ಪ್ರಯಾಣಿಕರು ಅಪಾಯ ಪಾರು