LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈ ಕಾರಣಕ್ಕೆ ವಿದ್ಯುತ್ ಗೋಪುರ ಮುಟ್ಟಬಾರದು.!

 

ಚಿತ್ರದುರ್ಗ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ 220/66/11 ಕೆ.ವಿ ಹಿರಿಯೂರು ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹರಿಯಬ್ಬೆ ಟ್ಯಾಪಿಂಗ್ ಪಾಯಿಂಟ್ ವರೆಗೆ ಹಾಲಿ ಇರುವ 18.928 ಕಿ.ಮೀ ಉದ್ದದ 66 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ತಂತಿಯನ್ನು ಬದಲಾಯಿಸುವುದು ಹಾಗೂ ಹೆಚ್ಚುವರಿ ಗೋಪುರಗಳನ್ನು ಅಳವಡಿಸುವ ಕಾಮಗಾರಿ ಮತ್ತು  66/11 ಕೆ.ವಿ ಹರಿಯಬ್ಬೆ ಉಪ ಕೇಂದ್ರದಿಂದ ಹರಿಯಬ್ಬೆ ಟ್ಯಾಪಿಂಗ್ ಪಾಯಿಂಟ್‍ವರೆಗೆ ಹಾಲಿ ಇರುವ 9.628 ಕಿ.ಮೀ ಉದ್ದದ 66 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ತಂತಿಯನ್ನು ಬದಲಾಯಿಸುವುದು, ಹೆಚ್ಚುವರಿ ಗೋಪುರಗಳನ್ನು ಅಳವಡಿಸುವ ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ.

ಈ 66 ವಿದ್ಯುತ್ ಮಾರ್ಗವನ್ನು ಜುಲೈ 20ರಂದು ಅಥವಾ ತದನಂತರ ಚೇತನಗೊಳಿಸುವುದರಿಂದ ಈ 66 ಕೆವಿ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರೆಂಬೆ, ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಈ ಮಾರ್ಗದ ಮೊಗಸಾಲೆಯಲ್ಲಿ ಅಪಾಯದ ಮಟ್ಟದಲ್ಲಿ ಇರುವ ಮರಗಳನ್ನು ಸುರಕ್ಷತೆಯ ದೃಷ್ಠಿಯಿಂದ ತೆಗೆದು ಹಾಕಲು ನಿಗಮದ ನಿಯಮಾನುಸಾರ ಸೂಕ್ತ ಪರಿಹಾರ ಪಡೆದುಕೊಂಡು ಮರಗಳನ್ನು ತೆಗೆಯದೇ ಇರುವ ಭೂ ಮಾಲೀಕರು ಕೂಡಲೇ ಮಾರ್ಗದ ಮೊಗಸಾಲೆಯಲ್ಲಿರುವ ಮರಗಳನ್ನು ಕಡಿದು ಹಾಕಲು ಅನುಮತಿ ನೀಡಬೇಕು. ಒಂದು ವೇಳೆ ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.

ವಿದ್ಯುತ್ ಹಾದುಹೋಗುವ ಪ್ರದೇಶಗಳು:  ಮ್ಯಾಕ್ಯೂರಹಳ್ಳಿ, ಬಬ್ಬೂರು, ಹೇಮದಳ, ಅಂಬಲಗೆರೆ, ಬಿದರಕೆರೆ, ಹರಿಯಬ್ಬೆ, ಶಿಡ್ಲಯ್ಯನಕೋಟೆ, ಕ್ಯಾತನಮಳೆ, ಗೊಲ್ಲರಹಟ್ಟಿ ಗೂಳ್ಯ, ರಂಗೇನಹಳ್ಳಿ ಮತ್ತು ಚಂದ್ರಗಿರಿ ಗೊಲ್ಲಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೇಷನ್‌ ಕಾರ್ಡ್‌ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೊಮ್ಮೆ ಅವಕಾಶಪತ್ನಿ ಅನುಮತಿ ಇಲ್ಲದೆ, ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ: ಹೈಕೋರ್ಟ್ಮೈಸೂರು ಗಲಭೆ ಹಿಂದೆ RSS ಕೈವಾಡ: ಲಕ್ಷ್ಮಣ್ ಆರೋಪಬೈಕ್ ಚಲಾಯಿಸಿದ ಅಪ್ರಾಪ್ತನ ಪೋಷಕರಿಗೆ 25 ಸಾವಿರ ರೂಪಾಯಿ ದಂಡಬಿಸಿಲಿನ ತಾಪಕ್ಕೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರಕ್ರಿಕೆಟ್‌ನಲ್ಲಿ ಬಳಸಲಾಗುವ ಕ್ಯಾಮೆರಾಗಳ ಬೆಲೆ ಎಷ್ಟು ಗೊತ್ತಾ?ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆವಿಶ್ವದ 10 ಅತ್ಯಂತ ಭ್ರಷ್ಟ ದೇಶಗಳು ಯಾವುವು? - ಭಾರತ ಎಷ್ಟೇ ಸ್ಥಾನದಲ್ಲಿದೆ ಗೊತ್ತಾ?2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಫೈನಲ್ - ಜಸ್ಪ್ರೀತ್ ಬುಮ್ರಾ ಔಟ್