ಈ ಬಾರಿ ಪಟಾಕಿ ಸಿಡಿತದಿಂದ ಎಷ್ಟು ಮಂದಿ ದೃಷ್ಟಿ ಕಳೆದುಕೊಳ್ಳುತ್ತಾರೆ.!
ಬೆಂಗಳೂರು: ಈ ವರ್ಷ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡವರ ಸಂಖ್ಯೆ ಭಾರಿ ಏರಿಕೆಯಾಗಿದೆ. ಸುಮಾರು 150 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
30 ಜನರ ಕಣ್ಣಿಗೆ ಗಂಭೀರ ಗಾಯಗಳಾಗಿವೆ. 9 ಜನ ದೃಷ್ಟಿ ಕಳೆದುಕೊಳ್ಳುವ ಸಂಭವವಿದೆ ಎಂದು ಹೇಳಲಾಗಿದೆ. ದೀಪಾವಳಿ ಹಬ್ಬದ ಆರಂಭದಿಂದ ಭಾನುವಾರ ಸಂಜೆಯವರೆಗೆ ನಾರಾಯಣ ನೇತ್ರಾಲಯದ ಆಸ್ಪತ್ರೆಗಳಲ್ಲಿ 73 ಜನ ಪಟಾಕಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ.
ಇವರಲ್ಲಿ 35 ಮಕ್ಕಳು ಸೇರಿದ್ದಾರೆ. 73 ಜನರಲ್ಲಿ ಅರ್ಧದಷ್ಟು ಜನ ಪಟಾಕಿ ಸಿಡಿಸುವುದನ್ನು ನೋಡುತ್ತಾ ನಿಂತಿದ್ದ ವೇಳೆ, ಅದೇ ಮಾರ್ಗದಲ್ಲಿ ಹೋಗುವ ದಾರಿಹೋಕರು ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ. ಉಳಿದವರು ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದಾರೆ.
19 ಜನರಿಗೆ ಗಂಭೀರ ಗಾಯಗಳಾಗಿವೆ. ಮಿಂಟೋ ಆಸ್ಪತ್ರೆ ಯಲ್ಲಿ 54 ಜನರಿಗೆ ಚಿಕಿತ್ಸೆ ನೀಡಲಾಗಿದೆ. ನಾರಾಯಣ ನೇತ್ರಾಲಯದಲ್ಲಿ 73 ಜನರಿಗೆ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 18, ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 15 ಜನ ಪಟಾಕಿ ಸಿಡಿತದ ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.