LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈ ವರ್ಷ ಹಿಂದೂ ಮಹಾ ಗಣಪತಿ ಗರುಡನ ಮೇಲೆ ಗಣಪತಿ ಇರುವ ಚಿತ್ರ.!

ಚಿತ್ರದುರ್ಗ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಷ್ಠಾಪನೆಯಾಗಲಿರುವ ಹಿಂದೂ ಮಹಾ ಗಣಪತಿ ಬುಧವಾರ ಪುರ ಪ್ರವೇಶಿಸಿತು.

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದಿಂದ ಮೆರವಣಿಗೆ ಮೂಲಕ ಹೊರಟ ಹಿಂದೂ ಮಹಾ ಗಣಪತಿ ಹೆದ್ದಾರಿಯಿಂದ ಚಳ್ಳಕೆರೆ ಗೇಟ್ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಪೆಂಡಾಲ್ಗೆ ಆಗಮಿಸಿತು.

ಕೇಸರಿ ಭಾವುಟ, ಜೈಶ್ರೀರಾಮ್ ಎಂದು ಬರೆದಿದ್ದ ಹನುಮನ ಭಾವಚಿತ್ರವುಳ್ಳ ಭಾವುಟಗಳು, ಶಾರದಾ ಬ್ರಾಸ್ ಬ್ಯಾಂಡ್ನ ವಾದ್ಯ ಮೆರವಣಿಗೆಯಲ್ಲಿ ರಾರಾಜಿಸಿದವು. ನೂರಾರು ಬೈಕ್ಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಕುಣಿದು ಕುಪ್ಪಳಿಸಿದರು. ಚಳ್ಳಕೆರೆ ಗೇಟ್ನಲ್ಲಿ ಡೊಳ್ಳು, ತಮಟೆ ಮೂಲಕ ಹಿಂದೂ ಮಹಾ ಗಣಪತಿಯನ್ನು ಬರಮಾಡಿಕೊಳ್ಳಲಾಯಿತು.

ಗರುಡನ ಮೇಲೆ ವಿರಾಜಮಾನವಾಗಿರುವ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಲು ಸಹಸ್ರಾರು ಜನ ಜಮಾಯಿಸಿದ್ದರು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಹಿಂದೂ ಮಹಾ ಗಣಪತಿ ಪುರ ಪ್ರವೇಶದಲ್ಲಿ ಭಾಗವಹಿಸಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ 19ನೇ ಕಂತು ಹಣ ಬಿಡುಗಡೆ ಯಾವಾಗ?ಮಹಾ ಕುಂಭಮೇಳ ಹಿನ್ನೆಲೆ ಬಿಹಾರದಲ್ಲಿ 45 ಕಿ.ಮೀ.ವರೆಗೆ ಸಂಚಾರ ದಟ್ಟಣೆರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್- ದೂರು ದಾಖಲುಡ್ರಗ್ಸ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟSSLC / PUC ಉತ್ತೀರ್ಣರಾದರೆ ಸಾಕು: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಬೇಸಿಗೆ ರಜೆಯಲ್ಲಿಯೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ..!ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವುಮಹಾಕುಂಭಮೇಳ ಮಾಘೀ ಪೂರ್ಣಿಮೆಗೆ 'ವಾಹನ ರಹಿತ ವಲಯ' ವಿಶೇಷ ಸಂಚಾರ ಯೋಜನೆದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಕೃಷಿಗೂ ಬಂತು AI ತಂತ್ರಜ್ಞಾನ- ಬೆಳೆ ನಿರ್ವಹಣೆಗೆ ಬಗ್ಗೆ ನೀಡಲಿದೆ ಮಾಹಿತಿ