LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಗಾರ

 

ಚಿತ್ರದುರ್ಗ: ಭಾರತೀಯ ವಿಜ್ಞಾನ ಸಂಸ್ಥೆ,  ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತ ಕೇಂದ್ರ (ಎಸ್‍ಟಿಐ ಹಬ್) ಹಾಗೂ  ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್‍ಮೆಂಟ್ (ಎಸ್‍ಐಡಿ), ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥಾನ ಆವರಣದಲ್ಲಿ ನವೆಂಬರ್ 6 ರಿಂದ 11 ರವರೆಗೆ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಗಾರವನ್ನು  ಆಯೋಜಿಸಲಾಗಿದೆ.

6 ದಿನಗಳ ತರಬೇತಿಯಲ್ಲಿ ಹೊಸ ಉದ್ಯಮವನ್ನು ಆರಂಭಿಸಲು ಆಸಕ್ತಿ ಇರುವವರಿಗಾಗಿ  ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕುರಿತು ತರಬೇತಿ ನೀಡಲಾಗುವುದು.  18-45 ವರ್ಷದೊಳಗಿನ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅ.25ರ ಒಳಗೆ ತಮ್ಮ ಹೆಸರನ್ನು ಗಣೇಶ್ ಮೊ. 8970582703, ಕೋಟೇಶ್ ಮೊ.9743675646 ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು. ಅ.28ರೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಎಸ್.ಸಿ, ಎಸ್.ಟಿ  ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ  ಅಭ್ಯರ್ಥಿಗಳು ಕಡ್ಡಾಯವಾಗಿ 6 ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಬೇಕು. ಊಟ ಮತ್ತು ವಸತಿ ಸೌಲಭ್ಯದೊಂದಿಗೆ  ಸಂಪೂರ್ಣ ಉಚಿತವಾಗಿ ತರಬೇತಿ  ನೀಡಲಾಗುತ್ತಿದ್ದು ಇದರ ಸದಪಯೋಗ ಪಡೆದುಕೊಳ್ಳುವಂತೆ ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತ ಕೇಂದ್ರ ವ್ಯವಸ್ಥಾಪಕ ಪ್ರತಾಪ್ ಮೂರ್ತಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಡೀ ಪಾಕಿಸ್ತಾನ ಭಾರತದ ವ್ಯಾಪ್ತಿಯಲ್ಲಿದೆ; ಉನ್ನತ ಸೇನಾಧಿಕಾರಿಇನ್ಮುಂದೆ ನ್ಯಾಯಾಂಗ ಸೇವೆಗೆ ಸೇರಲು ಕನಿಷ್ಠ 3 ವರ್ಷಗಳ ವಕೀಲ ವೃತ್ತಿ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶಧರ್ಮಸ್ಥಳದ ಆಕಾಂಕ್ಷ ಸಾವಿನ ಪ್ರಕರಣ: ಪ್ರೋಫೆಸರ್ ಬಂಧನ, ಮೃತದೇಹ ಮೇ.21ಕ್ಕೆಮತ್ತೊಂದು ಹೊಸ ನೋಟು ಎಂಟ್ರಿ : RBI ಮಹತ್ವದ ಘೋಷಣೆಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆ. ಎನ್‌ ರಾಜಣ್ಣ ನಿವೃತ್ತಿಪಿಎಸ್ಐ ನೇಮಕಾತಿಗೆ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ…ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ಭಾರೀ ಮಳೆಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆ ಪ್ರಕರಣ: ಮದುವೆಯಾದ ಪ್ರೊಫೆಸರ್ ಜೊತೆಗಿನ ಪ್ರೇಮ ವೈಫಲ್ಯವೇ ಕಾರಣಮಂಗಳೂರು: ಸುಹಾಸ್ ಹತ್ಯೆಯ ಪ್ರಮುಖ ಆರೋಪಿಗೆ ಜೈಲಿನಲ್ಲಿ ಹಲ್ಲೆಗೆ ಯತ್ನಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವು