LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಂಎಸ್ ಧೋನಿಗೆ ಜಾರ್ಖಂಡ್ ಹೈಕೋರ್ಟ್ ನೋಟಿಸ್..!

ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಭರ್ಜರಿ ತಯಾರಿಯ ನಡುವೆ ಭಾರತ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ನೀಡಿದೆ.

ಇದೇ ವರ್ಷದ ಜನವರಿಯಲ್ಲಿ ಧೋನಿ ತಮ್ಮ ಮಾಜಿ ಬಿಸಿನೆಸ್ ಪಾರ್ಟ್ನರ್‌ಗಳಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ 15 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ನಿಲುವು ವಿವರಿಸುವಂತೆ ಧೋನಿಗೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಲಾಗಿದೆ. ಧೋನಿ ಅವರು ಮಿಹಿರ್ ವಿರುದ್ಧ ವ್ಯವಹಾರ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.

ನಂತರ ಮಿಹಿರ್ ಮತ್ತು ಸೌಮ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದರು. 2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದಾರೆ, ಜತೆಗೆ ನನ್ನ ಹೆಸರು ಬಳಸಿ 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್‌ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಇದೇ ಜನವರಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ. 23, 24 ರಂದು ಕೆಲವು ರೈಲುಗಳು ರದ್ದು, ಸಂಚಾರದಲ್ಲಿ ಬದಲಾವಣೆಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!