ನವದೆಹಲಿ: ಇಸ್ರೋ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‌ಎಸ್‌ಎಲ್ ವಿ) ರಾಕೆಟ್ ನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ವಿ ಮೊದಲ ಉಡಾವಣೆ ತಾಂತ್ರಿಕ ದೋಷದಿಂದ ವಿಫಲವಾಗಿತ್ತು. ನಂತರ ಇಸ್ರೋ , ರಾಕೆಟ್‌ನ ಲೋಪದೋಷವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿತ್ತು. ಆದಾದ ಬಳಿಕ ಫೆಬ್ರವರಿಯಲ್ಲಿ ನಡೆದ ಉಡಾವಣೆಯಲ್ಲಿ ಇಸ್ರೋದ ಇಒಎಸ್-07 ಮತ್ತು ಅಮೆರಿಕ ಮೂಲಕ ಅಂಟಾರಿಸ್ ಮತ್ತು ಚೆನ್ನೈ ಮೂಲದ ಸ್ಪೇಸ್ ಕಿಡ್ಸ್ ಅಜಾದಿಸ್ಯಾಟ್-2 ಉಪಗ್ರಹಗಳನ್ನು ಈ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
https://bcsuddi.com/%e0%b2%ac%e0%b2%b0%e0%b2%b2%e0%b2%bf%e0%b2%a6%e0%b3%86-%e0%b2%95%e0%b3%87%e0%b2%b8%e0%b2%b0%e0%b2%bf-%e0%b2%ac%e0%b2%a3%e0%b3%8d%e0%b2%a3%e0%b2%a6-%e0%b2%b5%e0%b2%82%e0%b2%a6%e0%b3%87-%e0%b2%ad/
ಎಸ್‌ಎಲ್‌ಎಲ್‌ವಿ ರಾಕೆಟ್‌ಗಳು 500 ಕೆ.ಜಿ. ತೂಕದ ಉಪಗ್ರಹಗಳನ್ನ ಕೆಳಹಂತದ ಕಕ್ಷೆಗೆ ತಲುಪಿಸುವ ಹಾಗೂ 10 ಕೆ.ಜಿ ನ್ಯಾನೋ ಮತ್ತು 100 ಕೆ.ಜಿ ತೂಕದ ಮೈಕ್ರೋ ಉಪಗ್ರಹಗಳನ್ನು ಮೇಲಿನ ಹಂತದ ಕಕ್ಷೆಗೆ ಉಡಾವಣೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.