E-PAPER
17 Nov 2026, 12:22:25 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಸ್ಐಆರ್ : ಪ್ರಕಟಗೊಂಡಿರುವ ಕರಡು ಪಟ್ಟಿಯಿಂದ ಹೊರಗುಳಿದವರಲ್ಲಿ ಆತಂಕ ಬೇಡ : ಪಾಲಿಕೆ ಆಯುಕ್ತ ಕಾರ್ತಿಕ್ ಎಂ.

ಬೆಳಗಾವಿ :25ಎಸ್ಐಆರ್ ಮೊದಲ ಹಂತ ಮುಗಿದು,

ಕರಡು ಪಟ್ಟಿ ಪ್ರಕಟಗೊಂಡಿದೆ.
ಪಟ್ಟಿಯಿಂದ ಹೊರಗುಳಿದವರಿಗೆ ವಿಶೇಷ ಪ್ರಕ್ರಿಯೆಗಳಿದ್ದು, ಆತಂಕ ಪಡಬೇಕಾಗಿಲ್ಲವೆಂದು
ಪಾಲಿಕೆ ಆಯುಕ್ತ , ಮತದಾರರ ಮುಖ್ಯ ನೋಂದಣಾಧಿಕಾರಿ ಕಾರ್ತಿಕ್ ಎಂ. ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ
ನಮೂನೆ ಕೊಡುವುದು, ಹಿಂಪಡೆಯುವುದು ಮತ್ತು ಗಣಕೀಕರಣ ಸಹಿತ
(ಎಸ್ಐಆರ್) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಮೊದಲ ಹಂತ ಮುಕ್ತಾಯಗೊಂಡು ಮತದಾರರ ಕರಡು ಪಟ್ಟಿ
ಪ್ರಕಟಗೊಂಡಿದ್ದು, ಚುನಾವಣಾ ಆಯೋಗ ನೀಡಿರುವ ವೆಬ್‌ಸೈಟ್ನಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.
ಪಟ್ಟಿಯಿಂದ ಹೊರಗುಳಿದವರು (ಎಎಸ್ ಡಿಓ) ಅನುಮಾನಾಸ್ಪದ, ಸ್ಥಳಾಂತರಗೊಂಡ, ಮೃತ,
ಈ ಕಾರಣಗಳಿಂದ ಕರಡು ಪಟ್ಟಿಯಲ್ಲಿ ಇವರ ಹೆಸರಿರುವದಿಲ್ಲ. ಇಂಥವರು ಪಟ್ಟಿಗೆ ಸೇರ್ಪಡೆಯಾಗಲು ಪಾಲಿಕೆ ಯ ಎಸ್ಐಆರ್ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಿದಾಗ, ಅವರು
ನೀಡುವ ನೋಟಿಸಿಗೆ ಉತ್ತರಿಸಲು ವಿಚಾರಣಾಧಿಕಾರಿ, ಎಇಆರ್ ಓ ಮುಂದೆ ಖುದ್ದು ಹಾಜರಾಗಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಹಾಗೂ ಮ್ಯಾಪಿಂಗ್, ಪ್ರೊಜನಿ ಆಗದೆ ನೋ ಲಿಂಕೇಜ್ ನಲ್ಲಿ ಇರುವವರು, ಹೊಸ ಮತದಾರರು,
ಫಾರ್ಮ್ ನಂ.6 ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಪೂರೈಸಿದರೆ
ಪಟ್ಟಿಗೆ ಸೇರ್ಪಡೆಗೊಳ್ಳಬಹುದು.
ಅಕ್ಷೇಪಣೆ ಸಲ್ಲಿಸಲು ಆ.24 ರಿಂದ, ಸೆ.23 ರ ವರೆಗೆ ಅವಧಿ ಇದೆ. ವಿಲೇವಾರಿ ಪ್ರಕ್ರಿಯೆ ಅ.22 ಕ್ಕೆ ಮುಗಿದು
ಅ.27 ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,52,937 ಮತದಾರರಿದ್ದಾರೆ. ಎಲ್ಲರಿಗೂ ನಮೂನೆಗಳನ್ನು ನೀಡಲಾಗಿತ್ತು. 1, 93.755 (ಶೇ.76.60) ನಮೂನೆಗಳು ಗಣಕೀಕರಣಗೊಂಡಿವೆ. 59,182 ಎಎಸ್ ಡಿಡಿಓ ಇವೆ.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ
2,56,678 ಮತದಾರರಿದ್ದು, ಎಲ್ಲರಿಗೂ ನಮೂನೆ ನೀಡಲಾಗಿತ್ತು. 1,92,372(ಶೇ.74.95)
ನಮೂನೆಗಳು ಗಣಕೀಕರಣಗೊಂಡಿವೆ.
64,306 ಎಎಸ್ ಡಿಡಿಓ ಗಳಿವೆ.
ಎಂದು ಮಾಹಿತಿ ನೀಡಿದ ಆಯುಕ್ತ ಕಾರ್ತಿಕ್ ಎಂ ಅವರು, ಎಸ್ಐಆರ್ ಪ್ರಕ್ರಿಯೆ ಪೂರೈಸಲು ಜಿಲ್ಲಾಧಿಕಾರಿಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಮಹಾನಗರದ ನಾಗರಿಕರು, ಮೇಯರ್, ಉಪಮೇಯರ್, ನಗರಸೇವಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಾಕಷ್ಟು ಬೆಂಬಲ ಸಹಕಾರ ನೀಡಿದ್ದಾರೆ. ಎಸ್ಐಆರ್
ಕಾರ್ಯಕ್ಕೆ ನೇಮಕಗೊಂಡಿದ್ದ
ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಹಾಗೂ ಶಿಕ್ಷಕರು
ಹಗಲಿರುಳು ಶ್ರಮಿಸಿದ್ದು, ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿರುವ
ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಸ.ಮ. ನೋಂದನಾಧಿಕಾರಿ, ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಉತ್ತರ ಕ್ಷೇತ್ರದ ಮ. ನೋಂದನಾಧಿಕಾರಿ, ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ಸ.ಮ. ನೋಂದನಾಧಿಕಾರಿ ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ್  ಟಿ.ಬಿ.ಡಾ. ಸಿದ್ದು ಹುಲ್ಲೋಳಿ ಹಾಜರಿದ್ದರು.
.
24/08/2026

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.