LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಸ್‌ಐಟಿಯಿಂದ ರೇವಣ್ಣ ವಿಚಾರಣೆ - ಶಾಸಕರಿಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಎಸ್‌ಐಟಿ ಕಸ್ಟಡಿಯಲ್ಲಿರೋ ಶಾಸಕ ಎಚ್‌.ಡಿ ರೇವಣ್ಣ ಅವರಿಗೆ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳು 30ಕ್ಕೂ ಹೆಚ್ಚು ಪ್ರಶ್ನೆಗಳನ್ನ ಮಾಡಿಟ್ಟುಕೊಂಡು ವಿಚಾರಣೆ ಆರಂಭಿಸಿದ್ದಾರೆ. ತನಿಖಾಧಿಕಾರಿ: ತಿಂಡಿ ತಿಂದ್ರಾ, ಆರೋಗ್ಯ ಹೇಗಿದೆ, ನಿಮ್ಮನ್ನು ವಿಚಾರಣೆ ಮಾಡಬಹುದಾ..? ರೇವಣ್ಣ: ಹುಃ.. ವಿಚಾರಣೆ ಮಾಡಿ

ತನಿಖಾಧಿಕಾರಿ: ನಿಮ್ಮ ಮೇಲೆ ಐಪಿಸಿ ಸೆಕ್ಷನ್ 364a ,365 ಅಡಿಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಕಿಡ್ನ್ಯಾಪ್ ಆದ ಸಂತ್ರಸ್ತೆಯ ಮಗ ನಿಮ್ಮ ವಿರುದ್ಧ ಕೆ.ಆರ್ ನಗರದಲ್ಲಿ ದೂರು ಕೊಟ್ಟಿದ್ದಾರೆ ಗೊತ್ತಾ. ರೇವಣ್ಣ: ಹುಃ ಸಾಹೇಬ್ರೆ ಗೊತ್ತು... ತನಿಖಾಧಿಕಾರಿ: ಸಂತ್ರಸ್ತ ಮಹಿಳೆ ನಿಮಗೆ ಗೊತ್ತಾ? ರೇವಣ್ಣ: ಐದಾರು ವರ್ಷ ನಮ್ಮ ಬಳಿ ಕೆಲಸ ಮಾಡಿದ್ರು.

ತನಿಖಾಧಿಕಾರಿ: ನಿಮ್ಮ ಮಗನ ವಿಡಿಯೋ ಹೊರ ಬಂದ ಬಳಿಕ ಮಹಿಳೆಯನ್ನು ಕರೆದುಕೊಂಡು ಹೋಗಿದ್ರಾ? ರೇವಣ್ಣ: ನನಗೆ ಆ ವಿಚಾರ ಗೊತ್ತಿಲ್ಲ ತನಿಖಾಧಿಕಾರಿ: ಸತೀಶ್ ಬಾಬಣ್ಣ ಯಾರು ರೇವಣ್ಣ: ಗೊತ್ತಿರುವ ಮನುಷ್ಯ

ತನಿಖಾಧಿಕಾರಿ: ಕಳೆದ 29ನೇ ತಾರೀಖು ರಾತ್ರಿ 9:30.ಕ್ಕೆ ಮಹಿಳೆಯನ್ನ ಅವರ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ಅದೂ ರೇವಣ್ಣ ಸಾಹೇಬ್ರು ಹೇಳಿದ್ರು ಅಂತಾ ಸತೀಶ್ ಬಾಬಣ್ಣ ಹೇಳಿ ಕರೆದುಕೊಂಡು ಹೋಗಿದ್ದಾರೆ. ರೇವಣ್ಣ: ಅವ್ರು ಏನ್ ಮಾಡಿದ್ದಾರೆ ನನಗೆ ಗೊತ್ತಿಲ್ಲ.

ತನಿಖಾಧಿಕಾರಿ: ಕಿಡ್ನ್ಯಾಪ್ ಬಳಿಕ ನಾಲ್ಕೈದು ದಿನ ಮಹಿಳೆಯನ್ನ ಎಲ್ಲೆಲ್ಲಿ ಇಟ್ಟಿದ್ರಿ..? ರೇವಣ್ಣ: ನಂಗೆನೂ ಗೊತ್ತಿಲ್ಲ. ತನಿಖಾಧಿಕಾರಿ: ಸಂತ್ರಸ್ತ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿ ತೋಟದ ಮನೆಯಲ್ಲಿ ಇರಿಸಿದ್ರಾ..? ರೇವಣ್ಣ: ನಾನು ಕಿಡ್ನ್ಯಾಪ್ ಮಾಡುವಂತೆ ಹೇಳಿಲ್ಲ. ಅವರು ಎಲ್ಲಿದ್ರು ಅಂತಾನು ನನಗೆ ಗೊತ್ತಿರಲಿಲ್ಲ.

ತನಿಖಾಧಿಕಾರಿ: ಸಂತ್ರಸ್ತೆಯ ಮಗ ನಿಮ್ಮ ಮೇಲೆ ಆರೋಪ ಮಾಡಿದ್ದಾರೆ. ರೇವಣ್ಣ: ಆತ ಯಾಕ್ ನನ್ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಇದು ದುರುದ್ದೇಶದಿಂದ ಇರಬಹುದು. ತನಿಖಾಧಿಕಾರಿ: ಸಂತ್ರಸ್ತ ಮಹಿಳೆಗೆ ಕಿರುಕುಳ ಕೊಟ್ಟಿದ್ದಾರಲ್ಲ. ರೇವಣ್ಣ: ಯಾರು ಕೊಟ್ರು ನನಗೇನು ಗೊತ್ತಿಲ್ಲ

ತನಿಖಾಧಿಕಾರಿ: ಸತೀಶ್ ಬಾಬಣ್ಣ ಹೇಳಿದ್ದಾರಲ್ಲ ನಿಮ್ಮ ರೋಲ್ ಇದೆ ಅಂತ ರೇವಣ್ಣ: ನಾನು ಕಿಡ್ನ್ಯಾಪ್ ಮಾಡಿಸಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ - 12 ಗಂಟೆಗೆ ಹೈಕೋರ್ಟ್ ತೀರ್ಪು ಪ್ರಕಟತಿರುಪತಿ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪತ್ತೆ!ಇಸ್ರೇಲ್ ಕೆಣಕಿದ ಹಿಜ್ಬುಲ್ಲಾ ಉಗ್ರರಿಗೆ ತಕ್ಕ ಉತ್ತರ ನೀಡಿದ ಇಸ್ರೇಲ್ ಸೇನೆ – ವೈಮಾನಿಕ ದಾಳಿ ಸಾವಿನ ಸಂಖ್ಯೆ 492ಕ್ಕೆ ಏರಿಕೆ17 ದಿನಗಳ ಕಾಲ ವಿದ್ಯಾರ್ಥಿಗಳಿಗೆ ದಸರಾ ರಜೆ: ಈ ಶಾಲೆಗಳಿಗೆ ರಜೆ ಅನ್ವಯವಾಗುವುದಿಲ್ಲ..?2025ರ ಆಸ್ಕರ್‌ಗೆ ನಾಮ ನಿರ್ದೇಶನಗೊಂಡ 'ಲಾಪತಾ ಲೇಡಿಸ್' ಚಿತ್ರತಿರುಪತಿ ಲಡ್ಡು ತಯಾರಿಕೆಯಲ್ಲಿ ‘ಪ್ರಾಣಿಗಳ ಕೊಬ್ಬು’ ಬಳಕೆ ನಿಜ : ತಪ್ಪೊಪ್ಪಿಕೊಂಡ ‘TTD’ಮಹಾಲಕ್ಷ್ಮಿ ಕೊಲೆ ಕೇಸ್: ಇಂದು ಪೊಲೀಸರ ಕೈ ಸೇರಲಿದೆ ಮರಣೋತ್ತರ ಪರೀಕ್ಷಾ ವರದಿಲೆಬನಾನ್‌ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ - 35 ಮಕ್ಕಳು, 58 ಮಹಿಳೆಯರು ಸೇರಿ 492 ಜನ ಸಾವು.!ರುಚಿಕರವಾದ ಗೀ ರೈಸ್ ಮಾಡುವ ವಿಧಾನಆರೋಗ್ಯಯುತ ತ್ವಚೆ ಪಡೆಯುಲು ಈ ವ್ಯಾಯಾಮ ಮಾಡಿ