LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ನ್ಯೂಝಿಲೆಂಡ್: 12 ವರ್ಷಗಳ ಬಳಿಕ ತವರಿನಲ್ಲಿ ಭಾರತಕ್ಕೆ ಸೋಲು..!

ಪುಣೆ: ನ್ಯೂಝಿಲೆಂಡ್ ತನ್ನ ಮೊದಲ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಗೆದ್ದುಕೊಂಡಿದ್ದು, 12 ವರ್ಷಗಳ ಬಳಿಕ ಭಾರತ ತಂಡ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋತಿದೆ.


ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಝಿಲ್ಯಾಂಡ್ ತಂಡವು ಭಾರತಕ್ಕೆ 359ರನ್ ಗುರಿ ನೀಡಿತ್ತು. ಆದರೆ ಭಾರತ 245ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 113ರನ್ ಗಳ ಅಂತರದಿಂದ ಭಾರತದ ನೆಲದಲ್ಲಿ ನ್ಯೂಝಿಲ್ಯಾಂಡ್ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಹೊಸದಾಗಿ ನೇಮಕಗೊಂಡ ನಾಯಕ ಟಾಮ್ ಲ್ಯಾಥಮ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡವು ಅದ್ಭುತ ಪ್ರದರ್ಶನವನ್ನು ನೀಡಿದೆ. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದಾರೆ. ಜೈಸ್ವಾಲ್ 65 ಎಸೆತಗಳಲ್ಲಿ 77 ರನ್ ಗಳಿಸಿದ್ದು, ಜಡೇಜಾ 42 ರನ್ ಗಳಿಸಿದ್ದಾರೆ.

ಭಾರತ ತವರಿನಲ್ಲಿ 2012-13ರಲ್ಲಿ ಕೊನೆಯ ಭಾರಿಗೆ ಸರಣಿ ಕಳೆದುಕೊಂಡಿತ್ತು, ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ದಾಖಲೆ ಬರೆದಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
01-06-2025 ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ-ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ಅವರ ವಚನ….!ಆಪರೇಷನ್‌ ಸಿಂದೂರ್:ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವೀಡಿಯೊ ಹರಿದು ಬಿಟ್ಟ ವಿದ್ಯಾರ್ಥಿನಿ ಬಂಧನ'ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಬೀದಿಗಿಳಿಯುವ ದಿನ ಬರಲಿದೆ'-ಡಿ.ವಿ.ಸದಾನಂದಗೌಡಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆಮೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಬೃಹತ್ ಪ್ರತಿಭಟನೆಹನಿ ನೀರಾವರಿ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿSSLCಯಲ್ಲಿ‌ ಶೇ 60ಕ್ಕಿಂತ ಕಡಿಮೆ ಫಲಿತಾಂಶ: 'DDPI ಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಿ'- ಸಿಎಂ ಸೂಚನೆ