Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೆಎಎಸ್ ಸಂದರ್ಶನ ಲಂಚ ಪ್ರಕರಣ: KPSC ಸದಸ್ಯೆ ಶಾಂತಾ ಹೊಸಮನಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ನೇಮಕಾತಿ ಸಂದರ್ಶನದಲ್ಲಿ ಅಭ್ಯರ್ಥಿಯೊಬ್ಬರಿಗೆ ಅಕ್ರಮವಾಗಿ ನೆರವು ನೀಡಿ ಲಂಚ ಪಡೆದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯೆ ಡಾ. ಶಾಂತಾ ಹೊಸಮನಿ ಅವರಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಉನ್ನತ ಹುದ್ದೆಯಲ್ಲಿರುವವರ ಇಂತಹ ಭ್ರಷ್ಟ ಕೃತ್ಯಗಳು ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ವಿಶ್ವಾಸವನ್ನೇ ಬುಡಮೇಲು ಮಾಡುತ್ತವೆ ಎಂದು ಕಟುವಾಗಿ ಎಚ್ಚರಿಸಿರುವ ನ್ಯಾಯಾಲಯ, ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡಾ. ಶಾಂತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಉನ್ನತ ಸ್ಥಾನದಲ್ಲಿರುವವರೇ ವಿಶ್ವಾಸದ್ರೋಹ ಎಸಗಿದರೆ ಹೇಗೆ?: ಹೈಕೋರ್ಟ್ ತಪರಾಕಿ

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಹಾಜರುಪಡಿಸಿದ ಪ್ರಾಥಮಿಕ ಪುರಾವೆಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಲಾಭ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿತು. ಸಾಂವಿಧಾನಿಕ ಅಥವಾ ಉನ್ನತ ಹುದ್ದೆಗಳಲ್ಲಿ ಕುಳಿತವರೇ ಇಂತಹ ಹಗರಣಗಳಲ್ಲಿ ಭಾಗಿಯಾದರೆ, ಜನಸಾಮಾನ್ಯರಿಗೆ ಇಡೀ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಹೋಗುತ್ತದೆ. ಅಲ್ಲದೆ, ಕಷ್ಟಪಟ್ಟು ಪರೀಕ್ಷೆ ಬರೆದ ನೂರಾರು ಅರ್ಹ ಆಕಾಂಕ್ಷಿಗಳು ಉದ್ಯೋಗದಿಂದ ವಂಚಿತರಾಗಬೇಕಾಗುತ್ತದೆ. ಕಾನೂನಿನ ದೃಷ್ಟಿಯಲ್ಲಿ ಹುದ್ದೆ ಮುಖ್ಯವಲ್ಲ, ಎಲ್ಲರೂ ಸಮಾನರು. ಈ ಅಕ್ರಮ ಜಾಲದ ಬೇರುಗಳನ್ನು ಬಯಲಿಗೆಳೆಯಲು ಆಳವಾದ ಮತ್ತು ವಸ್ತುನಿಷ್ಠ ತನಿಖೆ ಅತ್ಯಗತ್ಯ ಎಂದು ಪೀಠ ಒತ್ತಿಹೇಳಿತು.

ಪೊಲೀಸ್ ಕಸ್ಟಡಿಯ ಅಗತ್ಯವಿಲ್ಲವೆಂಬ ಅರ್ಜಿದಾರರ ವಾದವನ್ನು ಒಪ್ಪದ ಪೀಠ, ನಿರೀಕ್ಷಣಾ ಜಾಮೀನು ನೀಡುವಾಗ ಆರೋಪದ ಗಂಭೀರತೆ, ಸಮಾಜದ ಮೇಲಾಗುವ ಪರಿಣಾಮ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆದರೆ, ಜಾಮೀನು ರದ್ದಾಗಿದೆ ಎಂದ ತಕ್ಷಣ ಆರೋಪಿಯನ್ನು ಕಡ್ಡಾಯವಾಗಿ ಬಂಧಿಸಲೇಬೇಕೆಂದಿಲ್ಲ; ತನಿಖಾಧಿಕಾರಿಗಳು ಸಂಗ್ರಹವಾಗುವ ಸಾಕ್ಷ್ಯಗಳು ಮತ್ತು ಆರೋಪಿಯ ಸಹಕಾರವನ್ನು ಪರಿಗಣಿಸಿ ಮುಂದಿನ ಹೆಜ್ಜೆ ಇಡಬಹುದು ಎಂದು ಸ್ಪಷ್ಟಪಡಿಸಿತು.

ಏನಿದು ಪ್ರಕರಣ?

2026ರ ಮೇ 8ರಂದು ನಡೆದ ಕೆಎಎಸ್ ನೇಮಕಾತಿಯ ಸಂದರ್ಶನ ಮಂಡಳಿಯಲ್ಲಿ ಡಾ. ಶಾಂತಾ ಹೊಸಮನಿ ಅವರು ಸದಸ್ಯೆಯಾಗಿದ್ದರು. ಆ ವೇಳೆ ಎರಡನೇ ಆರೋಪಿಯಾಗಿರುವ ಅಭ್ಯರ್ಥಿಗೆ ಅನುಚಿತವಾಗಿ ಹೆಚ್ಚು ಅಂಕಗಳನ್ನು ನೀಡಿ, ಅದಕ್ಕೆ ಪ್ರತಿಯಾಗಿ ಹಣ ಪಡೆದಿದ್ದಾರೆ ಎಂಬ ಗಂಭೀರ ಆಪಾದನೆ ಕೇಳಿಬಂದಿತ್ತು. ಈ ಹಗರಣದ ವಿರುದ್ಧ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಆರ್. ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ವಿಧಾನಸೌಧ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಬಂಧನ ಭೀತಿಯಿಂದ ಪಾರಾಗಲು ಅವರು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರಾದರೂ, ಸೆಪ್ಟೆಂಬರ್ 10ರಂದು ಅವರ ಅರ್ಜಿ ವಜಾಗೊಂಡಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದ:

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಡಾ. ಶಾಂತಾ ಅವರು ವೈದ್ಯಕೀಯ ಹಿನ್ನೆಲೆಯುಳ್ಳವರಾಗಿದ್ದು, ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಈಗಾಗಲೇ ತನಿಖೆಗೆ ಪೂರ್ಣ ಸಹಕಾರ ನೀಡುತ್ತಿದ್ದು, ಪೊಲೀಸರ ಬಳಿ ಆರೋಪವನ್ನು ದೃಢಪಡಿಸುವ ಯಾವುದೇ ನೇರ ಸಾಕ್ಷ್ಯಗಳಿಲ್ಲ. ಹೀಗಾಗಿ ಬಂಧನದಿಂದ ರಕ್ಷಣೆ ನೀಡಬೇಕು" ಎಂದು ಕೋರಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, "ಆರೋಪಿಯು ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಭ್ಯರ್ಥಿಯೊಂದಿಗಿನ ಸಂಬಂಧದ ಕುರಿತು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಗರಣದಲ್ಲಿ ಕೆಪಿಎಸ್‌ಸಿಯ ಒಳಗಿನ ಹಾಗೂ ಹೊರಗಿನ ಹಲವು ವ್ಯಕ್ತಿಗಳ ಶಾಮೀಲಾತಿ ಇರುವ ಸಂಶಯವಿದೆ. ಇಂತಹ ಹಂತದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶವಾಗುವ ಆತಂಕವಿದೆ" ಎಂದು ಬಲವಾಗಿ ಪ್ರತಿಪಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಅಂತಿಮವಾಗಿ ಅರ್ಜಿಯನ್ನು ತಿರಸ್ಕರಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಯೋ ಗ್ರಾಹಕರಿಗೆ ಬಂಪರ್ ಆಫರ್‌! ₹200ಕ್ಕೆ 15 OTT ಆ್ಯಪ್‌ಗಳು, Netflix ಪ್ಲಾನ್‌ಗಳ ಮಾಹಿತಿ ಇಲ್ಲಿದೆfಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಯುವತಿ! ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ ಆವಿಷ್ಕಾರಕ್ಕೆ ಜಾಗತಿಕ ಮನ್ನಣೆಭಾರತವನ್ನು ವಿಭಜಿಸುವ ಪ್ರಯತ್ನಗಳನ್ನು ಎದುರಿಸಿ, ಶತ್ರುಗಳನ್ನು ಸೋಲಿಸಬೇಕು! ವಿಜಯದಶಮಿ ದಿನ ಪ್ರಧಾನಿ ಮೋದಿ ಸಂದೇಶಗ್ರಾಹಕರಿಗೆ ಗುಡ್ ನ್ಯೂಸ್: 3 ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್ಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನಿಗೆ ಟಾರ್ಗೆಟ್! ಶೂಟರ್‌ಗಳಿಂದ ಸ್ಪೋಟಕ ಮಾಹಿತಿBREAKING : ವಿಜಯದಶಮಿ ದಿನ ರಾವಣನ ಪ್ರತಿಕೃತಿ ದಹಿಸಿದ ಪ್ರಧಾನಿ ಮೋದಿ ; ವೀಡಿಯೋ ವೈರಲ್ |WATCH VIDEOಅಮೆರಿಕದ ಪ್ರಮುಖ ವಾಣಿಜ್ಯ, ವ್ಯವಹಾರ ಪಾಲುದಾರ ರಾಷ್ಟ್ರ ಭಾರತ: ಮಾರ್ಕೊ ರೂಬಿಯೊನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ !6 ದಿನದೊಳಗೆ ದೆಹಲಿಯ ಐತಿಹಾಸಿಕ ರೇಸ್ ಕೋರ್ಸ್ ಮಸೀದಿ ತೆರವಿಗೆ ನೋಟಿಸ್BREAKING : ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನದ ಬೆನ್ನಲ್ಲೇ ಅವರ ಸೋದರಳಿಯ, ನಟ ಕಾರ್ತಿಕ್ ಸಬೇಶ್ ನಿಧನ