ಕಾಂಗ್ರೆಸ್ ಸರ್ಕಾರದ ದುರಾಡಳಿತ.ವೈಪಲ್ಯ.ಭ್ರಷ್ಟಾಚಾರ.ದಲಿತ ಸಮುದಾಯಗಳ ಹಣ ದುರ್ಬಳಕೆ ವಿರುದ್ದ ಬಿ.ಜೆ.ಪಿ ಪಾದಯಾತ್ರೆಯ ರಣಕಹಳೆ ಊದಿದ್ದು ಅದು ಇಂದಿಗೆ 9 ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ನಮ್ಮ ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿ ಸಮಾವೇಶಕ್ಕೆ ಜಾಗ ನೀಡದೆ ಸತಾಯಿತು.ಆದರೆ ಪಾದಯಾತ್ರೆ ಗೆ ಬಂದ ಜನಸಾಗರದ ಯಶಸ್ಸು ನೋಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆದರಿ ಬರದ ನೆಪದಲ್ಲಿ ರೈತರು.ಕಾರ್ಮಿಕರು.ಸಣ್ಣ ಪುಟ್ಡ ವ್ಯಾಪಾರಿಗಳ ಹತ್ತಿರ ಹೋಗಿ ಪೋಸ್ ಕೊಡುತ್ತಿದ್ದಾರೆ..ರಾಜ್ಯದ ಎಲ್ಲೂ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ.ಅವರ ಪಕ್ಷದ ಶಾಸಕರು ಅನುದಾನವಿಲ್ಲದೆ ಅಸಮಾಧಾನ ಗೊಂಡಿದ್ದಾರೆ.ಇದೊಂದು ಜಾಹೀರಾತು.ಘೋಷಣೆಗಳ ಸರ್ಕಾರವಾಗಿದ್ದು ಜನರು ಕಾಂಗ್ರೆಸ್ ಆಡಳಿತದ ವಿರುದ್ದ ಭ್ರಮನಿರಸನಗೊಂಡಿದ್ದಾರೆ ಎಂದು ಲೇವಡಿ ಮಾಡಿದರು..ಪಾದಯಾತ್ರೆ ಯುದ್ದಕ್ಕೂ ಜನಸಾಗರವೇ ಹರಿದು ಬರುತ್ತಿದ್ದು ವಿಜಯೇಂದ್ರ ಕೈಯಲ್ಲಿ ಡಮರುಗ ಹಿಡಿದು ಸಾಗುತ್ತಿರುವುದು ವಿಶೇಷವಾಗಿತ್ತು..ವಿ.ವಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿ.ಸಿ.ಟಿ.ರವಿ.ಶ್ರೀ ರಾಮುಲು.ಸೇರಿದಂತೆ ಆಯಾ ಭಾಗದ ಶಾಸಕರು.ಮುಖಂಡರು.ಅಭಿಮಾನಿಗಳು.ರೈತರು.ದಲಿತ ನಾಯಕರೂ ಭಾಗವಹಿಸಿದ್ದಾರೆ.ನಾಳೆ ಪಾದಯಾತ್ರೆ ಮುಕ್ತಾಯವಾಗಲಿದ್ದು ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ...