LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಣ್ನೋಟದಲ್ಲೇ ಎದುರಿಗಿದ್ದವರ ಹೃದಯವನ್ನು ಗೆಲ್ಲುತ್ತಾರೆ ಈ ರಾಶಿಯವರು.!

ನಡವಳಿಕೆ, ವರ್ಚಸ್ಸು, ಮಾತು, ಕಣ್ನೋಟದಲ್ಲೇ ಕೆಲವರು ಎಲ್ಲರನ್ನೂ ತಮ್ಮತ್ತ ಸೆಳೆದುಕೊಂಡು ಬಿಡುತ್ತಾರೆ. ಬೇರೊಬ್ಬರನ್ನು ಸೆಳೆಯಲು, ಮೆಚ್ಚಿಸಲು ಇವರು ಬೇರೆ ಏನನ್ನೂ ಮಾಡಬೇಕಿಲ್ಲ, ಇವರ ಶೈಲಿಗೆ ಬೇರೆಯವರೇ ಇವರ ಹತ್ತಿರ ಬರುತ್ತಾರೆ. ಸಾಮಾನ್ಯವಾಗಿ ಕಣ್ಣುಗಳನ್ನು ಒಬ್ಬರ ಆತ್ಮದ, ಭಾವನೆಗಳ ಕನ್ನಡಿ, ಎನ್ನಲಾಗುತ್ತದೆ. ಕೆಲವರು ಈ ಕಣ್ನೋಟದ ಮೂಲಕವೇ ಬೇರೆಯವರ ಮನಸ್ಸನ್ನು ಸೂರೆಗೊಳ್ಳುತ್ತಾರೆ. ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ. ತಮ್ಮ ಕಾಂತೀಯ ನೋಟದಿಂದ ಬೇರೆಯವರ ಹೃದಯವನ್ನು ಗೆಲ್ಲುವ ಪವರ್‌ಫುಲ್‌ ರಾಶಿ ಚಕ್ರಗಳು ಯಾವುವು ಅಂತ ಗೊತ್ತಾ.?



ಮಿಥುನ ರಾಶಿ :
ಮಿಥುನ ರಾಶಿಯ ನೋಟ ನಿಮಗೆ ಗಂಭೀರವಾಗಿ ಕಂಡು ಬಂದರೂ ಈ ಕಣ್ಣಿಗೆ ಸೋಲದವರೇ ಇಲ್ಲ. ಅಗಲ ಕಣ್ಣು, ಬಾಗಿದ ಹುಬ್ಬುಗಳು ಇವರ ಮುಖಕ್ಕೆ ಭೂಷಣ ಎನಿಸಿವೆ. ಇವರು ಕಣ್ಣ ನೋಟಕ್ಕೆ ಹೆಸರಾಗಿದ್ದು, ಕಣ್ಣಿನ ನೋಟದಿಂದಲೇ ಜನರ ಮನಸ್ಸನ್ನು ಸೂರೆಗೊಳ್ಳುತ್ತಾರೆ. ಗಾಜಿನ ಚೂರುಗಳಂತಿರುವ ಇವರ ಕಣ್ನೋಟಕ್ಕೆ ಸರಿ ಸಾಟಿ ಯಾರು ಇಲ್ಲ. ಇವರ ಕಣ್ಣಲ್ಲಿ ಯಾವಾಗಲೂ ಉತ್ಸಾಹ ತುಂಬಿರುತ್ತದೆ. ಬೇರೆಯವರ ಜೊತೆ ಮಾತನಾಡುವಾಗ ಇವರ ಕಣ್ಣುಗಳು ಸಹ ಅವರ ಜೊತೆಗೆ ಮಾತಿಗಿಳಿದಂತೆ ತೋರುತ್ತವೆ.




ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರು ಇವರ ಮೋಡಿಗೆ, ವರ್ಚಸ್ಸಿಗೆ ಬೇರೆಯವರ ಹೃದಯ ಕರಗದೇ ಇರಲಾರದು. ಇವರು ಸ್ವಪ್ನಶೀಲ ಅಭಿವ್ಯಕ್ತಿಗಳನ್ನು ಹೊಂದಿದ್ದಾರೆ. ಈ ಅಭಿವ್ಯಕ್ತಿ ಮತ್ತು ಕಣ್ಣಿನ ಮಿಂಚಿನ ನೋಟ ಬೇರೆಯವರನ್ನು ಇವರತ್ತ ಸೆಳೆಯುತ್ತದೆ. ಇವರ ನೋಟ ಕೂಡ ಅಷ್ಟೇ ಸ್ವಚ್ಛಂದವಾಗಿದೆ. ಇವರ ಪ್ರಾಮಾಣಿಕತೆ ಮತ್ತು ಒಳನೋಟವು ನಿಸ್ಸಂಶಯವಾಗಿ ಅವರು ಬ್ಯೂಟಿಫುಲ್‌ ಸೋಲ್‌ ಹೊಂದಿದ್ದಾರೆ ಎಂಬುದರ ಸಂಕೇತವಾಗಿದೆ. ಈ ಪ್ರಾಮಾಣಿಕತೆ ಅವರ ವಿನಮ್ರ ಮುಖದಲ್ಲಿ ಪ್ರತಿಫಲಿಸುತ್ತದೆ.

ಮೀನ ರಾಶಿ :

ಇವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋದು ತುಂಬಾನೇ ಕಷ್ಟ. ಇವರ ಜೊತೆ ಮಾತನಾಡುವಾಗ ಹೃದಯ ಬಡಿತ ಹೆಚ್ಚಾಗೋದು ಗ್ಯಾರೆಂಟಿ. ಇವರ ನೋಟ ಆಸಕ್ತಿಯಿಂದ ತುಂಬಿರುತ್ತದೆ. ಬೇರೆಯವರ ಹೃದಯವನ್ನು ಕಣ್ಣುಗಳಲ್ಲೇ ಗೆಲ್ಲುವ ಶಕ್ತಿ ಈ ಮೀನ ರಾಶಿಗಿದೆ. ಅವರ ಕಾಂತೀಯ ನೋಟವು ಅವರ ಮನಸ್ಸಿನ ಕನ್ನಡಿಯಾಗಿದ್ದು ಅದು ಅವರ ಆತ್ಮದ ಒಳನೋಟವನ್ನು ನೀಡುತ್ತದೆ. ಬೇರೆಯವರ ಹೃದಯ ಗೆಲ್ಲುವ ಕಾಂತಿಯುತ ನೋಟ ಮೀನಾ ರಾಶಿಯವರ ಕಣ್ಣಲ್ಲಿದೆ. ಬೇರೆಯವರನ್ನು ಇವರ ಕಣ್ಣುಗಳೇ ಸೆಳೆದುಕೊಳ್ಳುತ್ತವೆ. ಇವರ ಕಣ್ಣಿನ ನೋಟಕ್ಕೆ ಬೀಳದವರೇ ಇಲ್ಲ.

ಕನ್ಯಾ ರಾಶಿ :
ಕಾಂತೀಯ ನೋಟದಿಂದ ನಿಮ್ಮನ್ನು ಸಂಮೋಹನಗೊಳಿಸುವ ಶಕ್ತಿಯನ್ನು ಕನ್ಯಾ ರಾಶಿಯವರು ಹೊಂದಿದ್ದಾರೆ. ಕಣ್ಣಿನ ನೋಟ ಮಾತ್ರವಲ್ಲದೇ ಹುಬ್ಬು, ರೆಪ್ಪೆಯ ಅಂದವಾದ ವಿನ್ಯಾಸದೊಂದಿಗೆ ಇವರ ಕಣ್ಣು ಕೂಡ ಕಮಲದಂತೆ ಸುಂದರವಾಗಿವೆ. ಇವರ ಕಣ್ನೋಟಕ್ಕೆ ಬೆರಗಾಗದವರಿಲ್ಲ, ಮನಸೋಲದವರಿಲ್ಲ. ಈ ರಾಶಿಯ ನೋಟ ಇತರರನ್ನು ತಮ್ಮತ್ತ ಸೆಳೆಯುತ್ತದೆ ಎಂಬ ಮಾತನ್ನು ತೆಗೆದು ಹಾಕುವಂತಿಲ್ಲ. ಈ ಭೂಮಿಯ ಚಿಹ್ನೆಗಳು ಅವರ ಕಣ್ಣುಗಳಲ್ಲಿ ಸಂತೋಷದಾಯಕ ಕಂಪನ ಮತ್ತು ಹೊಳಪನ್ನು ಹೊಂದಿರುತ್ತಾರೆ. ತಮ್ಮ ಕಣ್ಣ ನೋಟದಲ್ಲೇ ಬೇರೆಯವರನ್ನು ತಮ್ಮತ್ತ ಬರುವಂತೆ ಮಾಡುತ್ತಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST