LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಬೀರಾನಂದ ಮಠ: ವಿಜಯದಶಮಿಯ ಸ್ಮರಣಾರ್ಥ ಶರನ್ನವರಾತ್ರಿ.!

 

ಚಿತ್ರದುರ್ಗ: ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದಲ್ಲಿ ನವರಾತ್ರಿಯ ಅಂಗವಾಗಿ ಕಳೆದ ಅ 3 ರಿಂದ 12 ವರೆಗೆ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ವಿಜಯದಶಮಿಯ ಸ್ಮರಣಾರ್ಥ ಶರನ್ನವರಾತ್ರಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮವು ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಶಿವಲಿಂಗಾನಂದ ಶ್ರೀಗಳ ದಿವ್ಯ ಸಾನೀಧ್ಯದಲ್ಲಿ ನಡೆದ ಶರನ್ನವರಾತ್ರಿ ಅಂಗವಾಗಿ ದೇವಿಯ ಚರಿತೆಯನ್ನು ಗೊಲ್ಲರಹಟ್ಟಿಯ ಸಿ ಈರಣ್ಣ ಮಲ್ಲಾಪುರ ರವರು ಪಠಿಸಿದರೆ ಸಾಹಿತಿಗಳು, ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಗಳಾದ ಹುರಳಿ ಎಂ ಬಸವರಾಜು ಚರಿತ್ರೆಯನ್ನು ಪ್ರವಾಚನ ಮಾಡಿದರು. ಅ. 7 ರಂದು ಸುಬ್ರಾಯ ತಿಮ್ಮಣ್ಣ ಭಟ್ಟರ ತಂಡದೊAದಿಗೆ ಚಂಡಿಕಾ ಹೋಮವನ್ನು ನಡೆಸಲಾಯಿತು.

ಶರನ್ನವರಾತ್ರಿಯ ಕೊನೆಯ ದಿನವಾದ ನಿನ್ನೆ ಸಂಜೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 118ನೇ ವರ್ಷದ ಜಯಂತ್ಯೋತ್ಸವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನವ ದುರ್ಗೆಯವರ ಅಂಗವಾಗಿ ಆಶ್ರಮದ ಸುತ್ತಾ-ಮುತ್ತಲ್ಲಿನ 9 ಜನ ಬಾಲಕಿಯರನ್ನು ಕರೆಯಿಸಿ ಅವರಿಗೆ ಒಂದು ತಟ್ಟೆಯಲ್ಲಿ ಅಕ್ಕಿ, ಕಾಯಿ, ಬಳೆ, ಹರಿಷಿಣ, ಕುಂಕುಮ, ನೋಟು ಪುಸ್ತಕ, ಕಣ, ಕಾಣಿಕೆ, ಬಾಳೆ ಹಣ್ಣು ನೀಡಿ ಫಾದ ಪೂಜೆಯನ್ನು ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದೇವಿಗೆ ಸೀರೆಯನ್ನು ಉಡಿಸಿ,ಐದು ಹೆಡೆ ಸರ್ಪದ ಆಲಂಕಾರವನ್ನು ವಿವಿಧ ರೀತಿಯ ಹೂಗಳಿಂದ ಮಾಡಲಾಗಿತು.

ತದ ನಂತರ ಶ್ರೀ ಶಿವಲಿಂಗಾನAದ ಶ್ರೀಗಳು ತೆಲೆಗೆ ಪೇಟವನ್ನು ಧರಿಸಿ ಮೈಮೇಲೆ ಸುಂದರವಾದ ವಸ್ತçವನ್ನು ಧರಿಸಿ ಕೈಯಲ್ಲಿ ಕೋಲನ್ನು ಹಿಡಿದು ಆಶ್ರಮದ ಆವರಣದಲ್ಲಿ ನಿರ್ಮಾಣ ಮಾಡಲಾದ ಅಂಬುವನ್ನು ಕಡಿಯವುದÀರ ಮೂಲಕ ಹಾಗೂ ಬನ್ನಿ ಗಿಡವನ್ನು ಪೂಜೆ ಮಾಡುವುದರ ಮೂಲಕ ವಿಜಯದಶಮಿಯನ್ನು ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 118ನೇ ವರ್ಷದ ಜಯಂತ್ಯೋತ್ಸವದ ಅಂಗವಾಗಿ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಇರಿಸಿ ಆಶ್ರಮದ ಸುತ್ತಾ ಮೂರು ಸುತ್ತನ್ನು ಸಂಚಾರ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ತದ ನಂತರ ಶಿವಲಿಂಗಾನAದ ಶ್ರೀಗಳು ಭಕ್ತರಿಗೆ ದರ್ಶನಾರ್ಶಿವಾದವನ್ನು ನೀಡಿದರು. ನಂತರ ಆಶ್ರಮದ ಒಳಗಡೆಯಲ್ಲಿ ಶ್ರೀಗಳು ಕೀರಿಟ  ಪೂಜೆಯನ್ನು ನೇರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿಗಳಾದ ಪ್ರಶಾಂತ್, ಭಕ್ತಾಧಿಗಳಾದ ಸತೀಶ್, ತಿಪ್ಪೇಸ್ವಾಮಿ, ಗಣಪತಿ ಶಾಸ್ತಿç, ಮಂಜುನಾಥ್ ಗುಪ್ತ, ನಿರಂಜನ ಮೂರ್ತಿ, ಓಂಕಾರ್, ಗೌರಣ್ಣ, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎರಡು ಕ್ವಾರ್ಟರ್ ಕೊಟ್ಟವ್ರೇ ನಮ್ಮಪ್ಪಂಗೆ ದೇವರು- ತಂದೆಯ ಆರೋಪಕ್ಕೆ ಪ್ರತಿಕ್ರಿಯಿಸಿದ ಚೈತ್ರಾ ಕುಂದಾಪುರಯೋಧರ ಪರಾಕ್ರಮವನ್ನು ಕೊಂಡಾಡಿದ ರಾಜನಾಥ್ ಸಿಂಗ್ದೆಹಲಿ ಕಾಲೇಜಿನಲ್ಲಿ ಬೆಂಕಿ ಅವಘಡ - ತಪ್ಪಿದ ಭಾರೀ ಅನಾಹುತತಂದೆಯನ್ನೇ ಮದುವೆಗೆ ಆಹ್ವಾನಿಸಿಲ್ಲವಂತೆ ಚೈತ್ರಾ ಕುಂದಾಪುರಮಣಿಪುರ:10 ಉಗ್ರರನ್ನು ಗುಂಡಿಕ್ಕಿ ಹತ್ಯೆ,ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶಕ್ಕೆಚೀನದ ಏರ್‌ ಡಿಫೆನ್ಸ್‌ ಸಿಸ್ಟಮನ್ನೇ ನಿಷ್ಕ್ರಿಯಗೊಳಿಸಿ ದಾಳಿ ಮಾಡಿದ ಭಾರತಎನ್‌ಕೌಂಟರ್‌ನಲ್ಲಿ ಜೈಶ್‌ನ ಮೂರು ಉಗ್ರರ ಹತ್ಯೆಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ..!ಮಂಗಳೂರು: ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆಕುಂದಾಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!