Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
💛

ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

ಕಾರ್ಗಲ್‌ನಲ್ಲಿ ವನ್ಯಜೀವಿ ಸಪ್ತಾಹದ ಬೈಕ್ ಜಾಥಾಕ್ಕೆ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಚಾಲನೆ: ಪ್ರಾಣಿಗಳ ಸಂರಕ್ಷಣೆಗೆ ಕರೆ

ಕಾರ್ಗಲ್: ಮಲೆನಾಡು ಭಾಗದಲ್ಲಿ ರಸ್ತೆಗಳಲ್ಲಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅನೇಕ ಮೂಕ ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುತ್ತಿವೆ. ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ವಾಹನ ಸವಾರರು ವೇಗ ನಿಯಂತ್ರಣ ಪಾಲಿಸಿ, ಪ್ರಾಣಿಗಳ ಜೀವ ರಕ್ಷಣೆಗೆ ಸಹಕರಿಸಬೇಕು ಎಂಬುದಾಗಿ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ.ಆರ್ ಅವರು ಕರೆ ನೀಡಿದ್ದಾರೆ.

news_1791124146_1_398.webp

ಇಂದು ಅವರು ವನ್ಯಜೀವಿ ಹಾಗೂ ಪರಿಸರದ ಮಹತ್ವವನ್ನು ಸಾರುವ ಉದ್ದೇಶದಿಂದ ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವಿಭಾಗ ಹಾಗೂ ಕಾರ್ಗಲ್ ವನ್ಯಜೀವಿ ಉಪ ವಿಭಾಗದ ವತಿಯಿಂದ ಕಾರ್ಗಲ್‌ನ ಭಟ್ಕಳ ಸರ್ಕಲ್‌ನಲ್ಲಿ ಆಯೋಜಿಸಿದ್ದಂತ ವನ್ಯಜೀವಿ ಸಪ್ತಾಹದ ಬೈಕ್ ಜಾಥಾಕ್ಕೆ ಅವರು ಹಸಿರು ನಿಶಾನೆ ತೋರಿ ಮಾತನಾಡಿದರು.

ಮಾನವ-ವನ್ಯಜೀವಿ ಸಹಬಾಳ್ವೆ ಅತ್ಯಗತ್ಯ: ತಹಶೀಲ್ದಾರ್ ಡಾ. ಪ್ರತಿಭಾ ಆರ್

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಅವರು, "ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಹಿರಿದು. ಮಲೆನಾಡು ಭಾಗದಲ್ಲಿ ರಸ್ತೆಗಳಲ್ಲಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅನೇಕ ಮೂಕ ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುತ್ತಿವೆ. ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ವಾಹನ ಸವಾರರು ವೇಗ ನಿಯಂತ್ರಣ ಪಾಲಿಸಿ, ಪ್ರಾಣಿಗಳ ಜೀವ ರಕ್ಷಣೆಗೆ ಸಹಕರಿಸಬೇಕು. ಪ್ರಕೃತಿ ಮತ್ತು ವನ್ಯಜೀವಿಗಳ ಉಳಿವು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಜನರಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ" ಎಂದು ಕರೆ ನೀಡಿದರು.

news_1791124146_2_961.webp

ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೆಪಿಸಿ ಯೂನಿಯನ್ ಮುಖಂಡ ವೀರೇಂದ್ರ

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಗಲ್ ಕೆಪಿಸಿ ಯೂನಿಯನ್ ಮುಖಂಡ ವೀರೇಂದ್ರ ಅವರು, "ಶರಾವತಿ ಕಣಿವೆ ಹಾಗೂ ಜೋಗ-ಕಾರ್ಗಲ್ ಭಾಗವು ಅಪರೂಪದ ಜೀವವೈವಿಧ್ಯವನ್ನು ಹೊಂದಿದೆ. ಅಭಿವೃದ್ಧಿಯ ಜೊತೆಗೆ ಪರಿಸರ ಮತ್ತು ವನ್ಯಜೀವಿಗಳನ್ನು ರಕ್ಷಿಸಿಕೊಳ್ಳುವುದು ಕಾರ್ಮಿಕರು ಹಾಗೂ ಸ್ಥಳೀಯ ಸಾರ್ವಜನಿಕರ ಕರ್ತವ್ಯ. ಅರಣ್ಯ ಇಲಾಖೆ ಇಂತಹ ಜಾಗೃತಿ ಜಾಥಾಗಳ ಮೂಲಕ ಸಾರ್ವಜನಿಕರನ್ನು ಒಳಗೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಕಾಡಿನ ಸಂಪತ್ತು ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸಲು ಪಣತೊಡಬೇಕು" ಎಂದು ಹೇಳಿದರು.

ಭಟ್ಕಳ ಸರ್ಕಲ್‌ನಿಂದ ಮಾವಿನಗುಂಡಿವರೆಗೆ ಸಾಗಿದ ಜಾಥಾ

ಬೆಳಿಗ್ಗೆ 9:30ಕ್ಕೆ ಕಾರ್ಗಲ್‌ನ ಭಟ್ಕಳ ಸರ್ಕಲ್‌ನಿಂದ ಹೊರಟ ಬೈಕ್ ಜಾಥಾವು ತಳಕಳಲೆ ಸರ್ಕಲ್, ಶರಾವತಿ ಕಣಿವೆ ಪ್ರಾಜೆಕ್ಟ್ ಏರಿಯಾ (ಎಸ್‌ವಿಪಿ) ಮತ್ತು ಜೋಗ ಮಾರ್ಗವಾಗಿ ಮಾವಿನಗುಂಡಿಯವರೆಗೆ ಸಾಗಿ, ಪುನಃ ಕಾರ್ಗಲ್‌ನ ಭಟ್ಕಳ ಸರ್ಕಲ್‌‌ಗೆ ತಲುಪಿ ಮುಕ್ತಾಯಗೊಂಡಿತು. ಈ ಜಾಥಾದಲ್ಲಿ ಸುಮಾರು 78 ಬೈಕ್‌‌ಗಳು ಹಾಗೂ 164 ಮಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

news_1791124145_0_498.webp

ಗಣ್ಯರ ಉಪಸ್ಥಿತಿ

ಈ ಕಾರ್ಯಕ್ರಮದಲ್ಲಿ ಕಾರ್ಗಲ್ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ್.ಸಿ.ಬಿ, ಕೋಗಾರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಧನಂಜಯ್ ನಾಯ್ಕ್. ಕಾರ್ಗಲ್ ವನ್ಯಜೀವಿ ವಲಯಗಳ ವಲಯ ಅರಣ್ಯಾಧಿಕಾರಿ ನವೀನ್, ಕೂಗಾರು ಡಿಆರ್ ಎಫ್ ಓ ಮೈಲಾರಪ್ಪ, ಕಾರ್ತಿಕ್, ಇಬ್ರಾಹಿಂ ಹಾಗೂ ಸಿಬ್ಬಂದಿ ವರ್ಗದವರು, ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜು ಎಂ., ಸಂತೋಷ್ ಕುಮಾರ್, ಮಾಜಿ ಉಪಾಧ್ಯಕ್ಷರಾದ ಪಿ. ಮಂಜು, ಕೆಪಿಸಿ ಇಂಜಿನಿಯರ್‌ಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ibl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST