LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು: 30 ವರ್ಷಗಳ ಹಿಂದಿನ ಪ್ರಕರಣವನ್ನು ಮುನ್ನೆಲೆಗೆ ತರುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಹೀಗಾಗಿ ರಾಮಭಕ್ತರನ್ನು ಹಳೇ ಪ್ರ ಕರಣಗಳಲ್ಲಿ ಬಂಧಿಸುವುದನ್ನು ವಿರೋಧಿಸಿ ಬುಧವಾರ ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯ ಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಹಿಂದೂ ಕಾರ್ಯಕರ್ತನನ್ನು ಬಂಧಿಸಿರುವ ಸಂದರ್ಭದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಡೆಯಲಿರುವ ಬಗ್ಗೆ ಸಂಭ್ರಮದ ವಾತಾವರಣವಿದೆ. ಜನ 22 ನೇ ತಾರೀಖನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರ ಸಂತೋಷ ಮತ್ತು ನಾಡಿನ ನೆಮ್ಮದಿ ಕೆಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಕರ ಸೇವಕರನ್ನು ಹುಡುಕಿ ಬಂಧಿಸುವಮೂಲಕ ರಾಜ್ಯ
ಮಾತ್ರ ವಲ್ಲ ಇಡೀ ದೇಶಕ್ಕೆ ರಾಮಭಕ್ತರ ವಿರುದ್ಧ ಸಂದೇಶ ಕೊಡಲು ಸಿದ್ದ ರಾಮಯ್ಯ ಸರ್ಕಾರಮುಂದಾಗಿದೆ’ ಎಂದು ಹೇಳಿದರು.

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯ ಬಿಜೆಪಿ ಘಟನ ಪ್ರತಿಭಟನೆ ನಡೆಸಲಿದ್ದು, ಆ ಸಂದರ್ಭ ಯಾವದಾದರೂ ಅಹಿತಕರ ಘಟನೆ ಜರುಗಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ನಡೆಸುತ್ತೇವೆ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿಯೂ ಪ್ರತಿಭಟನೆ ನಡೆಸುತ್ತೇವೆ ಎಂದರು
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕಕ್ಕೆ ಯೋಗಿಯಂತಹ ಮುಖ್ಯಮಂತ್ರಿ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆಪೆನ್ ಡ್ರೈವ್ ಹಿಂದಿರೋ "ದೊಡ್ಡ ತಿಮಿಂಗಿಲ" ಬಗ್ಗೆ ಕುಮಾರಸ್ವಾಮಿ ಮೊದಲು ದಾಖಲೆ ಕೊಡಲಿಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿ, 14ರಲ್ಲಿ "ಕೈ" ಮೇಲು!ರುಚಿಕರವಾದ ವೆಜ್ ಬಿರಿಯಾನಿ ಮಾಡುವ ವಿಧಾನಸುಂದರವಾದ ತ್ವಚೆಗೆ ಸಹಕಾರಿ ತುಳಸಿಯ ಈ 5 ವಿಧಾನಗಳು- ಇಲ್ಲಿದೆ ಮಾಹಿತಿ-ಬಸವಣ್ಣ ಅವರ ವಚನ .!ರಾಜಸ್ಥಾನ ಗಣಿಯಲ್ಲಿ ಲಿಫ್ಟ್ ಕುಸಿದು ಹಿರಿಯ ಅಧಿಕಾರಿ ಸಾವು ಅಂಜಲಿ ಕೊಲೆ ಪ್ರಕರಣ : ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ನೇಹಾ ತಂದೆ ನಿರಂಜನಯ್ಯ ಕಿಡಿ'ಜನರು ಪ್ರಧಾನಿ ಮೋದಿಯನ್ನು ಕೈಬಿಡಲು ನಿರ್ಧರಿಸಿದ್ದಾರೆ'- ಮಲ್ಲಿಕಾರ್ಜುನ ಖರ್ಗೆಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ