LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕರುವಿನಕಟ್ಟೆ ವೃತ್ತದಲ್ಲಿ ಹೋಳಿಗೆಮ್ಮ ಹಬ್ಬದ ಹೋಳಿಗೆ ಘಮ..ಘಮ.!

 

ಚಿತ್ರದುರ್ಗ : ಉತ್ತಮ ಮಳೆ, ಬೆಳೆ ಮತ್ತು ಜನ -ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಜನತೆ ’ಹೋಳಿಗೆಮ್ಮ’ ಹಬ್ಬವನ್ನು ಆಚರಿಸಿ, ಊರಮ್ಮಳನ್ನು ತೃಪ್ತಿಪಡಿಸಿದ್ದಾರೆ.

ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ಸಾರಿಯೂ ಸಹಾ ಹೋಳಿಗೆಮ್ಮನನ್ನು ಆಚರಣೆ ಮಾಡಲಾಯಿತು ಇದು ವಿಶಿಷ್ಟವಾದ ಆಚರಣೆ. ಸಂಪ್ರದಾಯ. ಈ ಹಬ್ಬದ ಆರಣೆಯಿಂದಾಗಿಯೇ ತಾಲೂಕಿನಲ್ಲಿ ಯಾವುದೇ ಭೀಕರ ರೋಗ- ರುಜಿನಗಳು, ಪ್ರಕೃತಿ ವಿಕೋಪಗಳು ನಡೆಯುತ್ತಿಲ್ಲ. ಆ ಕಾರಣ ನಾವೆಲ್ಲರೂ ಜಾತ್ಯತೀತರಾಗಿ ಈ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಹೆಂಗಳೆಯರು.

ಗೃಹಿಣಿಯರು ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ನಾನಾ ರೀತಿ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ಆ ನಂತರ ಮಡಿಕೆಯಲ್ಲಿ ಅವುಗಳೆಲ್ಲವನ್ನೂ ಬೇವಿನ ಎಲೆಯ ಜೊತೆಯಲ್ಲಿ ಇರಿಸಿ, ಪೂಜೆ ಮಾಡುತ್ತಾರೆ. ನಗರದ ಕರುವಿನಕಟ್ಟೆ ವೃತ್ತದಲ್ಲಿನ ದೇವಾಲಯದ ಮುಂದೆ ಮಡಿಕೆಯನ್ನು ಇರಿಸಿ, ದೇವಿಗೆ ನಮಸ್ಕಾರ ಮಾಡಿ, ಪ್ರಾರ್ಥನೆ ಸಲ್ಲಿಸಿ, ನೈವೇದ್ಯ ಮಾಡುವುದು ವಾಡಿಕೆ.ಈ ಆಚರಣೆಯ ಹಿನ್ನೆಲೆ - ಇತಿಹಾಸ ಇಲ್ಲಿನ ಜನರಿಗೆ ತಿಳಿದಿಲ್ಲ. ಆದರೂ ಈ ಹಬ್ಬದ ಆಚರಣೆ ತಪ್ಪಿಲ್ಲ, ಯಾರೂ ಕೈ ಬಿಟ್ಟಿಲ್ಲ. ಪ್ರತೀ ವರ್ಷ ತಪ್ಪದೇ ನಿಗದಿತ ದಿನದಂದು, ನಕ್ಷತ್ರ-ತಿಥಿ ಆಧರಿಸಿ ಆಚರಣೆ ಆಗುತ್ತಿದೆ. ಜೂನ್ ೩೦ರ ಇಂದು ಮಂಗಳವಾರ ಹೋಳಿಗೆಯಮ್ಮ ಹಬ್ಬವನ್ನು ಊರವರು ಅದ್ಧೂರಿಯಾಗಿ ಮನೆ ಮನೆಯಲ್ಲೂ ಆಚರಣೆ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆಗೆ ದಿನಾಂಕ ಫಿಕ್ಸ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ?ಮಹಿಳಾ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶಪ್ರಧಾನಿ ಮೋದಿ ವಿಮಾನದ ಮೇಲೆ ದಾಳಿ ಮಾಡುವುದಾಗಿ ಉಗ್ರರ ಎಚ್ಚರಿಕೆ..!ರೇಷನ್‌ ಕಾರ್ಡ್‌ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೊಮ್ಮೆ ಅವಕಾಶಪತ್ನಿ ಅನುಮತಿ ಇಲ್ಲದೆ, ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ: ಹೈಕೋರ್ಟ್ಮೈಸೂರು ಗಲಭೆ ಹಿಂದೆ RSS ಕೈವಾಡ: ಲಕ್ಷ್ಮಣ್ ಆರೋಪಬೈಕ್ ಚಲಾಯಿಸಿದ ಅಪ್ರಾಪ್ತನ ಪೋಷಕರಿಗೆ 25 ಸಾವಿರ ರೂಪಾಯಿ ದಂಡಬಿಸಿಲಿನ ತಾಪಕ್ಕೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರಕ್ರಿಕೆಟ್‌ನಲ್ಲಿ ಬಳಸಲಾಗುವ ಕ್ಯಾಮೆರಾಗಳ ಬೆಲೆ ಎಷ್ಟು ಗೊತ್ತಾ?ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ