ಶಿವಮೊಗ್ಗ: ಜಗತ್ತಿನ ಅತೀ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿ ಕರ್ನಾಟಕದಲ್ಲಿ ತಲೆ ಎತ್ತಲಿದೆ 151 ಅಡಿಗಳ ಶ್ರೀ ಬಾಲಸುಬ್ರಹ್ಮಣ್ಯ ಬೃಹತ್ ಮೂರ್ತಿಯು ಶಿವಮೊಗ್ಗ ನಗರದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ನಿರ್ಮಾಣವಾಗಲಿದ್ದು, ಈಗಾಗಲೇ ಶಿಲನ್ಯಾಸ ಕಾರ್ಯ ನಡೆದಿದ್ದು, ಇನ್ನೆರಡು ವರ್ಷಗಳಲ್ಲಿ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
https://bcsuddi.com/%e0%b2%b6%e0%b3%87-50%e0%b2%95%e0%b3%8d%e0%b2%95%e0%b2%bf%e0%b2%82%e0%b2%a4-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81-%e0%b2%85%e0%b2%97%e0%b3%8d%e0%b2%a8%e0%b2%bf%e0%b2%b5%e0%b3%80/
ಬೃಹತ್ ಗಾತ್ರದ ಬಂಡೆ ಮೇಲೆ ಈ ಪ್ರತಿಮೆ ನಿರ್ಮಿಸಲಾಗುತ್ತಿದೆ. ಬಂಡೆ ಮೇಲೆ ಕಾಂಕ್ರಿಟ್ ಬೆಡ್ ನಿರ್ಮಿಸಿ, ಅದರ ಮೇಲೆ ಪ್ರತಿಮೆ ಸ್ಥಾಪಿಸಲಾಗುತ್ತದೆ. ಬಾಲಸುಬ್ರಹ್ಮಣ್ಯಸ್ವಾಮಿ ಮೂರ್ತಿ ಜತೆಗೆ ಅವರ ವಾಹನ ನವಿಲಿನ ಪ್ರತಿಮೆಯೂ ಇರಲಿದೆ. ಮಲೇಷಿಯಾ ಮತ್ತು ಸೇಲಂನಲ್ಲಿ ಬೃಹತ್ ಮುರುಗನ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ತ್ಯಾಗರಾಜನ್ ಅವರೇ ಶಿವಮೊಗ್ಗದಲ್ಲೂ ಈ ಪ್ರತಿಮೆ ನಿರ್ಮಿಸಲಿದ್ದಾರೆ. ಶಿವಮೊಗ್ಗದ ಎಲ್ಲ ದಿಕ್ಕುಗಳಿಂದಲೂ ಪ್ರತಿಮೆ ಕಾಣಿಸಲಿದೆ. ಈ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ವೆಚ್ಚವಾಗಲಿದೆ. ಕಬ್ಬಿಣ, ಸಿಮೆಂಟ್, ಮರಳು ಬಳಸಿ ಪ್ರತಿಮೆ ನಿರ್ಮಿಸಲಾಗುತ್ತದೆ. ಹೊರ ರಾಜ್ಯದಿಂದ ವಿಶೇಷವಾಗಿ ಬಣ್ಣ ತರಿಸಿ, ಪ್ರತಿಮೆಗೆ ಲೇಪಿಸಲಾಗುತ್ತದೆ. ಒಟ್ಟು 12 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.