LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸೂಚನೆ

ನವದೆಹಲಿ: ದೇಶದಲ್ಲೆಡೆ ಟೊಮೆಟೋ ದರ ಏರಿಕೆಯಾಗಿದೆ. ಕೆ.ಜಿಗೆ 150 ರೂ ದಾಟಿದಂತೆ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ.

ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ , ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈ ಹಿನ್ನಲೆ ಗಗನಕ್ಕೇರಿರುವ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಜು.14 ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದ ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್‌ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಅದರ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತಿಸಲಾಗಿದ್ದು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್‌ ಮತ್ತು ನಾಸಿಕ್‌, ಆಂಧ್ರಪ್ರದೇಶದದಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಮೋಟೋ ಪೂರೈಕೆಯಾಗುತ್ತದೆ. ಇನ್ನು ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.

ಹೀಗಾಗಿ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್‌, ಔರಂಗಾಬಾದ್‌, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸವನ್ನುಸರಕಾರದ ಮೂಡಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ ಪಾಕ್ರಾಮಮಂದಿರ ಉದ್ಘಾಟನೆ ದಿನ ದೇಶದ ಪ್ರತಿಯೊಬ್ಬರು ಮನೆಯಲ್ಲಿ ಜ್ಯೋತಿ ಬೆಳಗಿಸಿ- ಮೋದಿ ಕರೆನಾಲ್ವರ ಕೊಲೆ ಆರೋಪಿ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ'ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ': ಸಿಎಂ ವ್ಯಂಗ್ಯ'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿ..!ಇಂದೇ ಅರ್ಜಿಯನ್ನು ಸಲ್ಲಿಸಿ