E-PAPER
17 Nov 2026, 12:21:51 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.

ಬೆಳಗಾವಿ-14: ಯುವಜನತೆ ಕೇವಲ ಯಶಸ್ಸಿನ ಹಿಂದೆ ಬೀಳದೆ, ಬದುಕಿನ ನಿಜವಾದ ಸಾರ್ಥಕತೆಯನ್ನು ಅರಿತು ಶ್ರೇಷ್ಠ ಸಾಧಕರಾಗಬೇಕು. ಜೀವನದ ಕಷ್ಟ-ಸುಖ, ಸೋಲು-ಗೆಲುವುಗಳ ನಡುವೆ ನಿರ್ದಿಷ್ಟ ಸೂತ್ರ ಕಂಡುಕೊಂಡವರು ಮಾತ್ರ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


ಶುಕ್ರವಾರ ನಗರದಲ್ಲಿ ಅಕಾಡೆಮಿ ಆಫ್ ಕಂಪೆರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ ವತಿಯಿಂದ ಆಯೋಜಿಸಿದ್ದ ಡಾ. ಆರ್.ಡಿ. ರಾನಡೆ ಸ್ಮಾರಕ ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪುಸ್ತಕ ಬಿಡುಗಡೆಗೊಳಿಸಿ ಜೀವನದ ಮೌಲ್ಯಗಳು, ತತ್ವಶಾಸ್ತ್ರ ಮತ್ತು ಮಾನವೀಯತೆಯ ಮಹತ್ವವನ್ನು ವಿವರಿಸಿದರು.
ಯಶಸ್ಸು-ಅಪಯಶಸ್ಸು, ಜಯ-ಅಪಜಯ ಹಾಗೂ ಕಷ್ಟ-ಸುಖ ಸೇರಿದಂತೆ ಬದುಕಿನ ಪ್ರತಿಯೊಂದು ಸನ್ನಿವೇಶದಲ್ಲೂ ಸಮಚಿತ್ತ ಕಾಪಾಡಿಕೊಳ್ಳಬೇಕು. ಜೀವನದ ಉದ್ದೇಶ ಮತ್ತು ಮಾನವ ಜನ್ಮದ ಮರ್ಮವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಪ್ರಕೃತಿಯಲ್ಲಿ ಅಸಮಾನತೆ ಸಹಜವಾಗಿದ್ದರೂ, ಮನುಷ್ಯ ತನ್ನ ಆಲೋಚನೆ ಮತ್ತು ನಡವಳಿಕೆಗಳಿಂದ ತಾರತಮ್ಯ ಸೃಷ್ಟಿಸಬಾರದು. ಅಸಮಾನತೆ ಮತ್ತು ತಾರತಮ್ಯ ಎರಡೂ ವಿಭಿನ್ನವಾಗಿದ್ದು, ಪರಸ್ಪರ ಗೌರವ ಹಾಗೂ ಸಮಭಾವದಿಂದ ಬದುಕುವುದು ಮುಖ್ಯ ಎಂದರು.
ಡಾ. ರಾನಡೆ ಅವರ ತತ್ವದಂತೆ ಒಂದೇ ಜಗತ್ತು, ಒಬ್ಬನೇ ದೇವರು ಹಾಗೂ ಒಂದೇ ಮಾನವಕುಲ ಎಂಬ ಪರಿಕಲ್ಪನೆ ಮಹತ್ವದ್ದಾಗಿದೆ. ವಿವಿಧ ಧರ್ಮ ಮತ್ತು ತತ್ವಶಾಸ್ತ್ರಗಳ ಮಾರ್ಗಗಳು ಬೇರೆಬೇರೆಯಾಗಿದ್ದರೂ ಅವುಗಳ ಅಂತಿಮ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ವಿವಿಧ ಚಿಂತನೆಗಳನ್ನು ತುಲನೆ ಮಾಡುವ ಮೂಲಕ ಸಾಮಾನ್ಯ ನೆಲೆ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.
ಚಾಣಕ್ಯನ ಅರ್ಥಶಾಸ್ತ್ರ ಸಾರ್ವಕಾಲಿಕ ಪ್ರಸ್ತುತತೆ ಹೊಂದಿದ್ದು, ಆರ್ಥಿಕ ವಿಚಾರಗಳೊಂದಿಗೆ ನೈತಿಕ ಮೌಲ್ಯಗಳ ಅರಿವು ಅಗತ್ಯ. ಲಾಭ-ನಷ್ಟದ ಅರಿವು ಮತ್ತು ಪಾಪ-ಪುಣ್ಯದ ಚಿಂತನೆಗಳ ಸಮ್ಮಿಲನವೇ ಜೀವನದ ಶ್ರೇಷ್ಠ ಸಾಧನೆಗೆ ದಾರಿಯಾಗುತ್ತದೆ. ಹಸಿವು, ಅರಿವು, ಮರೆವು ಮತ್ತು ಸಾವು ದೇವರು ಮನುಷ್ಯನಿಗೆ ನೀಡಿರುವ ನಾಲ್ಕು ಪ್ರಮುಖ ವರಗಳಾಗಿವೆ ಎಂದು ವಿಶ್ಲೇಷಿಸಿದರು.
ಬಸವಣ್ಣನವರ ಕಾಯಕವೇ ಕೈಲಾಸ ತತ್ವದಂತೆ ಪ್ರತಿಯೊಬ್ಬರೂ ಕರ್ತವ್ಯನಿಷ್ಠೆಯಿಂದ ದುಡಿಯಬೇಕು. ದಯೆ, ಕರುಣೆ ಮತ್ತು ಅನುಕಂಪ ಮಾನವೀಯತೆಯ ಮೂಲ ಗುಣಗಳಾಗಬೇಕು. ಬುದ್ಧ, ಬಸವಣ್ಣ, ಶಂಕರಾಚಾರ್ಯ, ವಿವೇಕಾನಂದ ಹಾಗೂ ಮಹಾವೀರರು ತಮ್ಮ ಏಕಾಗ್ರತೆ ಮತ್ತು ತ್ಯಾಗದಿಂದ ಸಮಾಜಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಸಾಧಕನ ಬದುಕು ಸಾವಿನ ನಂತರವೂ ತನ್ನ ಆದರ್ಶಗಳ ಮೂಲಕ ಉಳಿಯುತ್ತದೆ. ಯುವಜನತೆ ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನ ಸಾರ್ಥಕತೆ ಸಾಧಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಶಾಸಕ ಅಭಯ ಪಾಟೀಲ, ಡಾ. ಅಸ್ವರಿ ಉದಯ ಬಾಪತ್, ಅಶೋಕ ಎಂ. ಪೋತದಾರ, ಮಾರುತಿ ಬಿ. ಜಿರಲಿ ಸೇರಿದಂತೆ ಗಣ್ಯರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.