LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಾನೂನು ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ವಕೀಲ ರಾಜೇಶ್‌ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಬೆಂಗಳೂರು : ಇಂಟರ್ನಿಯಾಗಿ ಬಂದ ಕಾನೂನು ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಖ್ಯಾತ ವಕೀಲ ಕೆಎಸ್ಎನ್ ರಾಜೇಶ್ ವಿರುದ್ದ ದಾಖಲಾಗಿರುವ ಪ್ರಕರಣ ಮತ್ತು ಅದರ ವಿಚಾರಣೆ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು 3ನೇ ಹೆಚ್ಚವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ ಎಸ್‌ ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.“ಪ್ರಶಿಕ್ಷಣಾರ್ಥಿಯಾಗಿ ವಕೀಲರ ಕಚೇರಿಗೆ ಸೇರಿದ ನಿಷ್ಕಪಟ ಕಾನೂನು ವಿದ್ಯಾರ್ಥಿನಿ ಮೇಲೆ ಈ ರೀತಿಯ ಭಯಾನಕ ಕೃತ್ಯ ನಡೆಸಿದರೆ, ಅದು ಆಕೆಯ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಎದುರಿಸಿ, ಆರೋಪಿಯು ದೋಷಮುಕ್ತರಾಗಿ ಬರಬೇಕು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ರಾಮ ಮಂದಿರಕ್ಕೆ ನಮ್ಮ ಸರ್ಕಾರ, ಪಕ್ಷದ ಸಂಪೂರ್ಣ ಬೆಂಬಲವಿದೆ' - ಸಿಎಂ ಸಿದ್ದರಾಮಯ್ಯಅಯೋಧ್ಯೆ ರಾಮಮಂದಿರ ಉದ್ಘಾಟನೆ - ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಮಂತ್ರ ಪಠಿಸಲು ಕರೆ5500 ದೈಹಿಕ ಶಿಕ್ಷಕರು ಸೇರಿದಂತೆ 40,000 ಶಿಕ್ಷಕರನ್ನು ನೇಮಕಕ್ಕೆ ನಿರ್ಧಾರ..!ರೈತರ ಸಾಲಮನ್ನಾ ಯೋಜನೆಯ ಫಲನುಭವಿಗಳ ಪಟ್ಟಿ ಬಿಡುಗಡೆ..!ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆಸೌರ ಮೇಲ್ಛಾವಣಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ..!ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎಅಕ್ರಮ ಮರ ಕಡಿತ ಪ್ರಕರಣ – ಬಿಜೆಸಿ ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರುರಾಮಜನ್ಮಭೂಮಿ ಮತ ಪಡೆಯುವ ವಿಚಾರವಲ್ಲ, ಇದು ಸಾಂಸ್ಕೃತಿಕ ವಿಷಯವಾಗಿದೆ - ರಾಜನಾಥ್ ಸಿಂಗ್