E-PAPER
17 Nov 2026, 12:23:14 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಯಕ ದಾಸೋಹಗಳು ಶರಣ ಮೌಲಿಕ ಕೊಡುಗೆಗಳು : ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಮಹಾಸಭೆಯಲ್ಲಿ ಅನುಭಾವ ಗೋಷ್ಠಿ

ಬೆಳಗಾವಿ-13: ಹನ್ನೆರಡನೆಯ ಶತಮಾನದ ಶರಣರು ಜಗತ್ತಿಗೆ ನೀಡಿರುವ ಮಹತ್ವದ ಕೊಡುಗೆಗಳು ಕಾಯಕ-ದಾಸೋಹ-ಪ್ರಸಾದ ಸಿದ್ಧಾಂತಗಳು. ಪ್ರತಿಯೊಬ್ಬ ವ್ಯಕ್ತಿಯು ಸತ್ಯ ಶುದ್ಧ ಹಾಗೂ ಪ್ರಾಮಾಣಿಕವಾಗಿ ದುಡಿದು ಸಮಾಜಮುಖಿಯಾಗಿ ಬದುಕಬೇಕೆಂದು ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು. ಸಮಾಜದ ಬೆಳವಣಿಗೆಯಲ್ಲಿ ದುಡಿಮೆಯ ಅವಶ್ಯಕತೆ ಇದೆ. ಕಷ್ಟಪಟ್ಟು ದುಡಿದಾಗ ವ್ಯಕ್ತಿ ಕಲ್ಯಾಣವು ಸಾಧ್ಯ, ಹಾಗೂ ಸಮಾಜದ ಕಲ್ಯಾಣವು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಸೇವಾಭಾವನೆ ಇರಬೇಕು.  ನೆಪಕ್ಕೆ ಮಾಡಿದ ಕೆಲಸ ಕಾಯಕವಾಗಲಾರದು. ಕಾಯಕದ ಸಾರ್ಥಕತೆ ಇರುವುದು ದಾಸೋಹದಲ್ಲಿ ನಿರಂಭಾವದಿAದ ಸಮಾಜಕ್ಕೆ ನಾವು ಗಳಿಸಿದ ಸೊಮ್ಮನ್ನು ಅರ್ಪಿಸಬೇಕು. ಇಂದು ನಾವೆಲ್ಲ ವ್ಯಕ್ತಿನಿಷ್ಠವಾಗಿ ಬದುಕುತ್ತಿದ್ದೇವೆ ಸಮಾಜನಿಷ್ಠವಾಗಿ ಸಮಾಜದ-ಧರ್ಮದ ಋಣವನ್ನು ತೀರಿಸಬೇಕಾಗಿದೆ. ಹಣಗಳಿಕೆವೊಂದೆ ಜೀವನವಲ್ಲ ಅದು ಸದ್‌ಮಾರ್ಗದಲ್ಲಿ ಸವೆಯುವಂತಾಬೇಕೆಂದು ತಿಳಿಹೇಳದರು.
‘ಕಾಯಕ-ದಾಸೋಹ’ ಕುರಿತು ಉಪನ್ಯಾಸವನ್ನು ನೀಡಿದ ಲಿಂಗರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಹೇಶ ಗುರನಗೌಡರ ‘ಶರಣರು ಕಾಯಕಕ್ಕೆ ದೈವೀಸ್ಪರ್ಶವನ್ನು ನೀಡಿದರು. ಕಾಯಕ ಆರ್ಥಿಕತೆಯ ತಳಹದಿ, ಬೆನ್ನೆಲುಬು. ಸಾಧಕ ಎಂಬ ಭಾವದಿಂದ ಕೈಗೊಳ್ಳುವ ಆತ್ಮಕ್ರಿಯೆ; ಪರಹಿತಕ್ಕಾಗಿ ಮಾಡುವ ಶಿವಕೇಂದ್ರಿ ಕ್ರಿಯೆ ಕಾಯಕ. ಶರಣರು ಕಾಯಕಕ್ಕೆ ಆಧ್ಯಾತ್ಮಿಕ ಅರ್ಥವನ್ನು ಕಲ್ಪಿಸಿದರು. ಪ್ರತಿಯೊಬ್ಬರು ತಮ್ಮ ಜೀವನ ನಿರ್ವಹಣೆಗಾಗಿ ಉದ್ಯೋಗವನ್ನು ಕೈಗೊಳ್ಳಬೇಕು. ತಾನು ಕೈಕೊಂಡ ಕೆಲಸ ಸಮಾಜಕ್ಕೆ ಹಾನಿಕಾರಕವಾಗಿರಬಾರದು. ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ನನಗೆ ಮಾತ್ರವಲ್ಲದೆ ಸಮಾಜಕ್ಕೂ ದೊರೆಯಬೇಕು. ಈ ನಿರ್ಲಿಪ್ತ ಭಾವದಿಂದ ಮಾಡಿದ ಕೆಲಸ ಕಾಯಕವಾಗುತ್ತದೆ. ಶರಣರು ಕರ್ಮವಾದದಲ್ಲಿ ಜನ್ಮಾಂತರ ರಹಸ್ಯವನ್ನು ಖಂಡಿಸಿದರು. ವೃತ್ತಿ ಹುಟ್ಟಿನೊಂದಿಗೆ ಬರುವಂತಹದಲ್ಲ, ಅದು ನಮ್ಮ ಆಯ್ಕೆಯಲ್ಲಿದೆ ಎಂದರು. ಕರ್ಮಯೋಗಕ್ಕಿಂತ ಕಾಯಕಯೋಗಕ್ಕೆ ಆದ್ಯತೆ ನೀಡಿದರು. ಕಾಯಕ ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸುತ್ತದೆ. ಶರಣರು ಎಲ್ಲಿಯೂ ಸಂಪತ್ತನ್ನು ಗಳಸಬೇಡಿ ಎಂದಿಲ್ಲ, ಅದನ್ನು ಮಡಗದಿರಿ ಎಂದಿದ್ದಾರೆ. ನಮ್ಮ ಪರಿಶ್ರಮದ ಫಲ ಸಮಾಜಕ್ಕೆ ವಿನಿಯೋಗವಾಗಬೇಕು. ಲಿಂಗರಾಜರಂತಹ ಅನೇಕ ಪುಣ್ಯಪುರುಷರು ತಮ್ಮ ದಾನವನ್ನು ದಾಸೋಹವನ್ನಾಗಿ ಮಾಡಿದರು. ದಾಸೋಹ ಎಂದರೆ ನಿರಂಭಾವದಿಂದ ಸರ್ವಸ್ವವನ್ನೂ ಅರ್ಪಿಸುವ ಭಾವ. ಭಗವಂತ ನೀಡಿದ್ದು ದಾನ, ಅದನ್ನು ಸಮಾಜಕ್ಕೆ ದಾಸೋಹಂಭಾವದಿಂದ ಸಮರ್ಪಿಸಬೇಕಾಗಿದೆ ಎಂದು ಅದರ ಮಹತ್ವವನ್ನು ತಿಳಿಸಿದರು.
ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಶರಣರ ವಿಚಾರಗಳು ಎಲ್ಲ ಕಾಲಕ್ಕೂ ಹೃದಯಸ್ಪರ್ಶಿ ಹಾಗೂ ಅನುಕರಣೀಯವೆನಿಸಿವೆ. ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದು ಮುಖ್ಯ. ನಮ್ಮ ಯುವಜನಾಂಗಕ್ಕೆ ಅವುಗಳನ್ನು ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಮಕ್ಕಳಲ್ಲಿ ದುಡಿಯುವ ಪ್ರವೃತ್ತಿಯನ್ನು ರೂಢಿಸಿದ್ದಾದರೆ ದೇಶದಲ್ಲಿ ಉದ್ಯೋಗದ ಸಮಸ್ಯೆ ಇರುವುದಿಲ್ಲ. ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಡಾ.ಎಫ್.ವ್ಹಿ.ಮಾನ್ವಿ, ರಮೇಶ ಕಳಸಣ್ಣವರ, ನ್ಯಾಯವಾದಿ ವಿ.ಕೆ.ಪಾಟೀಲ, ಸುಧಾ ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ,  ನೀಲಗಂಗಾ ಚರಂತಿಮಠ, ಶಂಕರ ಚೊಣ್ಣದ, ಜಯಶೀಲಾ ಬ್ಯಾಕೋಡ ಉಪಸ್ಥಿತರಿದ್ದರು. ಸುಜಾತಾ ಮಠಪತಿ ವಚನ ಪ್ರಾರ್ಥನೆ ಸಲ್ಲಿಸಿದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿರು, ಜ್ಯೋತಿ ಮಾಳಿ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ಅತಿಥಿ ಪರಿಚಯಿಸಿದರು. ಕವಿತಾ ವಳಸಂಗ ವಂದಿಸಿದರು. ಗೀತಾ ಗುಂಡಕಲ್ಲೆ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.