ಕಾರಿನ ಡೋರ್ ತೆಗೆದು 6.30 ಲಕ್ಷ ರೂಪಾಯಿ ಹಣ ಕದ್ದು ಕಳ್ಳ ಪರಾರಿ.!
ಹಾಸನ: ರಸ್ತೆಬದಿ ನಿಲ್ಲಿಸಿದ್ದ ಕಾರಿನ ಡೋರ್ ತೆಗೆದು ಕಳ್ಳನೊಬ್ಬ 6.30 ಲಕ್ಷ ರೂಪಾಯಿ ಹಣ ಕದ್ದು ಪರಾರಿಯಾಗಿರುವ ಘಟನೆ ಅರಸೀಕೆರೆ ಪಟ್ಟಣದ ಸುಭಾಷ್ ನಗರದಲ್ಲಿ ಈ ಘಟನೆ ನಡೆದಿದೆ.
ತಮಿಳುನಾಡು ಮೂಲದ ಸುರೇಶ್ ಎಂಬುವವರ ಕಾರಿನಿಂದ ಹಣ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಅರಸೀಕೆರೆ ಫೆಡರಲ್ ಬ್ಯಾಂಕ್ ನಿಂದ ಸುಭಾಷ್ 6 ಲಕ್ಷ ಹಣ ಡ್ರಾಮಾಡಿಕೊಂಡು ಬಂದಿದ್ದರು. ಇದರ ಜೊತೆಗೆ ತಮ್ಮ ಬಳಿ ಇದ್ದ 30 ಸಾವಿರ ಸೇರಿಸಿ ಕಾರಿನಲ್ಲಿ ಇಟ್ಟಿದ್ದರು.
ಎಪಿಎಂಸಿ ಮುಂಭಾಗ ಇರುವ ತಮ್ಮ ಅಂಗಡಿ ಮುಂದೆ ಕಾರು ನಿಲ್ಲಿಸಿದ್ದರು. ತಮ್ಮದೇ ಅಂಗಡಿಗೆ ಹೋಗಿ ಬರುವಷ್ಟರಲ್ಲ್ಲಿ ಕಾರಿನಲ್ಲಿದ್ದ ಹಣ ಕಳುವಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳ ಹಣ ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
(ಸಾಂದರ್ಭಿಕ ಚಿತ್ರ)
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.