LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ...

ಕೆಲ ಜನರಿಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ.

ನಿಮಗೂ ಈ ಅಭ್ಯಾಸವಿದೆಯೇ.? ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ (Sitting cross legged) ಕೆಲವು ಅನಾನುಕೂಲತೆಗಳಿವೆ.

ಬಹಳ ಸಮಯದವರೆಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಮೇಲಿನ ಕಾಲಿನ ಭಾರ (Leg weight) ಕೆಳಗಿನ ಕಾಲಿನ ನರಗಳನ್ನು ಒತ್ತುವುದು (Pressing the nerves). ಇದರಿಂದಾಗಿ ಈ ನರಗಳ ಮೂಲಕ ಹರಿಯಬೇಕಾಗಿರುವ ರಕ್ತವನ್ನು ಹೆಚ್ಚಿನ ಒತ್ತಡದಲ್ಲಿ ದೂಡಿಕೊಡಬೇಕಾಗುತ್ತದೆ. ಪರಿಣಾಮ ತನ್ಮೂಲಕ ದೇಹದ ರಕ್ತದೊತ್ತಡ ಹೆಚ್ಚಾಗುತ್ತದೆ.

ಈ ರೀತಿ ಕುಳಿತುಕೊಳ್ಳುವುದರಿಂದ ಪೆಲ್ವಿಕ್​ ಮೂಳೆಗಳ ಜೋಡಣೆ ಮತ್ತು ಸ್ನಾಯುವಿನ ಉದ್ದದಲ್ಲಿ ದೀರ್ಘಕಾಲೀನ ಬದಲಾವಣೆಗಳಿಗೆ (Long term changes) ಕಾರಣವಾಗಬಹುದು.

ಸ್ನಾಯುಗಳು ಮತ್ತು ಪೃಷ್ಠದ ಮೇಲೆ ದೀರ್ಘಕಾಲದ ಭಾರದಿಂದಾಗಿ ಹೊಟ್ಟೆಯು ಅದರ ಹೊಂದಾಣಿಕೆಯ ಗುಣಗಳನ್ನು ಕಳೆದುಕೊಂಡು ದುರ್ಬಲವಾಗುತ್ತದೆ (weak). ಇದರಿಂದ ದೇಹದ ಭಾಗಗಳು ಅಸಹಜವಾಗಿ ರೂಪುಗೊಳ್ಳುವ ಅಪಾಯವಿದೆ.

ಕಿಬ್ಬೊಟ್ಟೆಯ ಸ್ನಾಯುಗಳು (Abdominal muscles) ಮತ್ತು ಕೆಳ ಬೆನ್ನಿನಲ್ಲಿಯೂ ಬದಲಾವಣೆಗಳು ಆಗಬಹುದು.

ನರಗಳು ಕ್ರಮೇಣ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ ಮೆದುಳು ಬಳ್ಳಿಯಿಂದ ಬರುವ ಸೂಚನೆಗಳನ್ನು ಪೂರ್ಣವಾಗಿ ಪಡೆಯಲು ಅಸಮರ್ಥವಾಗಿ ಚಲನೆ ಸಾಧ್ಯವಾಗದೇ ಇರಬಹುದು.

ದೇಹದ ಕೆಳಭಾಗಕ್ಕೆ ಹರಿಯಬೇಕಾಗಿದ್ದ ರಕ್ತ ಮುಂದೆ ಹೋಗದೇ ನಿಂತಾಗ ಇದನ್ನು ಆಧರಿಸಿದ ಇತರ ವ್ಯವಸ್ಥೆಗಳೂ ರಕ್ತ ಪರಿಚಲನೆಯ ಮೇಲೆ ಋಣಾತ್ಮಕ ಪರಿಣಾಮ (Negative effect) ಬೀರುತ್ತವೆ.

ಪುರುಷರು ಬಹಳ ಸಮಯದವರೆಗೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಅದರಿಂದ ವೃಷಣಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಪುರುಷತ್ವ (masculinity) ನಷ್ಟವಾಗುವ ಅಪಾಯವಿದೆ ಎನ್ನಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ