ಕಾಶ್ಮೀರಿ ಯುವತಿ ಕೈಹಿಡಿದ ಆರ್‌ಸಿಬಿ ಮಾಜಿ ಆಟಗಾರ ಸರ್ಫರಾಜ್ ಖಾನ್ - ಫೋಟೋ ವೈರಲ್
ಕಾಶ್ಮೀರ: ಮುಂಬೈನ ಸ್ಟಾರ್ ಬ್ಯಾಟರ್, ಐಪಿಎಲ್‌ನ ಆರ್‌ಸಿಬಿ ತಂಡದ ಮಾಜಿ ಆಟಗಾರ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದಾರೆ. ಈ ವಿಚಾರವನ್ನು ಸ್ವತಃ ಸರ್ಫರಾಜ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿಯೊಂದಿಗಿರುವ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಖಚಿತಪಡಿಸಿದ್ದಾರೆ. ಮದುವೆಯಲ್ಲಿ ಸರ್ಫರಾಜ್ ಕಪ್ಪು ಶೆರ್ವಾನಿ ಧರಿಸಿ ಮಿಂಚಿರುವ ಹಲವು ವೀಡಿಯೊ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಾಶ್ಮೀರದಲ್ಲಿ ಮದುವೆಯಾಗುತ್ತಿರುವುದು ನನ್ನ ಅದೃಷ್ಟ ಎಂದಿರುವ ಸರ್ಫರಾಜ್, ಮುಂದೊಂದು ದಿನ ಭಾರತ ತಂಡದ ಪರ ಆಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈವಾಹಿಕ ಜೀನಕ್ಕೆ ಕಾಲಿರಿಸಿದ ಸರ್ಫರಾಜ್ ಅವರಿಗೆ ಕ್ರಿಸ್ ಗೇಲ್, ಸೂರ್ಯಕುಮಾರ್ ಯಾದವ್, ಋತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್, ಉಮ್ರಾನ್ ಮಲಿಕ್, ಸಿಕಂದರ್ ರಜಾ, ಮನ್ದೀಪ್ ಸಿಂಗ್ ಮತ್ತು ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಶುಭಾಶಯ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.